ಮಂಗಳೂರು: ಚರಂಡಿ, ರಸ್ತೆ ಮೊದಲಾದ ವಿಷಯಗಳ ಯೋಚನೆ ಬಿಟ್ಟು ನಿಮ್ಮ ಮಕ್ಕಳನ್ನು ಲವ್-ಜಿಹಾದ್ ನಿಂದ (Love-Jihad) ಉಳಿಸುವ ಕಡೆ ಗಮನ ಹರಿಸಿ ಎಂದು ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿರುವುದಕ್ಕೆ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕನಾಗಿರುವ ಯುಟಿ ಖಾದರ್ (UT Khader) ಪ್ರತಿಕ್ರಿಯಿಸಿದ್ದಾರೆ. ಚರಂಡಿ, ರಸ್ತೆ ಮೊದಲಾದ ಅಭಿವೃದ್ಧಿ ಕೆಲಸಗಳ ಯೋಚನೆ ಬೇಡ ಅಂದರೆ ಅವುಗಳನ್ನು ಮಾಡುವ ಅರ್ಹತೆ ಮತ್ತು ಯೋಗ್ಯತೆ ಬಿಜೆಪಿ ಸರ್ಕಾರಕ್ಕಿಲ್ಲ ಅನ್ನೋದನ್ನು ಕಟೀಲ್ ಅವರು ಒಪ್ಪಿಕೊಂಡಂತಾಯಿತು ಎಂದು ಖಾದರ್ ಹೇಳಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕರಾವಳಿ ಭಾಗದ ಜನರಿಗೆ ಪಡಿತರ ಚೀಟಿ ಮತ್ತು ಕುಚಲಕ್ಕಿ ನೀಡುವ ಏರ್ಪಾಟು ಮಾಡಿತ್ತು. ಆದರೆ ಈ ಸರ್ಕಾರಕ್ಕೆ ಜನರಿಗೆ ಕುಚಲಕ್ಕಿ ಒದಗಿಸುವ ಯೋಗ್ಯತೆ ಕೂಡ ಇಲ್ಲ ಎಂದು ಖಾದರ್ ಗೇಲಿ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ