AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ರೈಲಿನಲ್ಲಿ ಇನ್ಮುಂದೆ ಪಾರ್ಸೆಲ್, ಸರಕುಗಳು ಸಂಪೂರ್ಣ ಸುರಕ್ಷಿತ: OTP ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆ

ರೈಲಿನಲ್ಲಿ ಪಾರ್ಸೆಲ್, ಸರಕುಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಇನ್ನುಮುಂದೆ ಕಳ್ಳತನದ ಭಯವಿಲ್ಲ. ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಭಾರತೀಯ ರೈಲ್ವೆಯು ಪರಿಚಯಿಸಲಿದೆ.

Indian Railways: ರೈಲಿನಲ್ಲಿ ಇನ್ಮುಂದೆ ಪಾರ್ಸೆಲ್, ಸರಕುಗಳು ಸಂಪೂರ್ಣ ಸುರಕ್ಷಿತ: OTP ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆ
ರೈಲು
ನಯನಾ ರಾಜೀವ್
|

Updated on: Feb 23, 2023 | 9:04 AM

Share

ರೈಲಿನಲ್ಲಿ ಪಾರ್ಸೆಲ್, ಸರಕುಗಳನ್ನು ಸಾಗಣೆ ಮಾಡುವ ಸಂದರ್ಭದಲ್ಲಿ ಇನ್ನುಮುಂದೆ ಕಳ್ಳತನದ ಭಯವಿಲ್ಲ. ಒಟಿಪಿ ಆಧಾರಿತ ಡಿಜಿಟಲ್ ಲಾಕ್ ವ್ಯವಸ್ಥೆಯನ್ನು ಭಾರತೀಯ ರೈಲ್ವೆಯು ಪರಿಚಯಿಸಲಿದೆ. ಇದರರ್ಥ ನಿಮ್ಮ ಸರಕುಗಳು ಮತ್ತು ಪಾರ್ಸೆಲ್‌ಗಳನ್ನು ಈಗ ಉತ್ತಮ ರೀತಿಯಲ್ಲಿ ರಕ್ಷಿಸಲಾಗುತ್ತದೆ ಮತ್ತು ರೈಲ್ವೆಯಲ್ಲಿ ಸಾಗಣೆಯ ಸಮಯದಲ್ಲಿ ಕಳ್ಳತನದ ಸಾಧ್ಯತೆ ಇನ್ನುಮುಂದೆ ಇರುವುದಿಲ್ಲ. ಈ ವ್ಯವಸ್ಥೆಯನ್ನು ಸಾಮಾನ್ಯವಾಗಿ ಟ್ರಕ್‌ಗಳಲ್ಲಿ ಬಳಸಲಾಗುತ್ತದೆ, ಅಲ್ಲಿ ಸ್ಮಾರ್ಟ್ ಲಾಕ್ ಅನ್ನು ಒದಗಿಸಲಾಗುತ್ತದೆ. ಇದಕ್ಕೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಅಳವಡಿಸಲಾಗಿದೆ.

ಅದರ ಸಹಾಯದಿಂದ, ವಾಹನದ ಉಪಸ್ಥಿತಿಯ ಸ್ಥಳವನ್ನು ತಿಳಿಯಲಾಗುತ್ತದೆ ಮತ್ತು ಸರಕುಗಳ ಕಳ್ಳತನದ ಸಾಧ್ಯತೆ ಕಡಿಮೆಯಾಗುತ್ತದೆ. ಈ ವ್ಯವಸ್ಥೆಯು ಸಂಪೂರ್ಣವಾಗಿ ಸುರಕ್ಷಿತ ಒಟಿಪಿಯನ್ನು ಆಧರಿಸಿರುತ್ತದೆ, ಇದನ್ನು ರೈಲು ವಿಭಾಗದ ಬಾಗಿಲುಗಳನ್ನು ತೆರೆಯಲು ಮತ್ತು ಮುಚ್ಚಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಭಾರತದ ಮೊದಲ ಹೈಡ್ರೋಜನ್ ರೈಲು ಘೋಷಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಏನಿದರ ವಿಶೇಷತೆ?

ಈ ಕ್ರಮವು ಸರಕು ರೈಲುಗಳ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ, ಕಳ್ಳತನವನ್ನು ತಡೆಯುತ್ತದೆ ಮತ್ತು ಸರಕು ಆದಾಯವನ್ನು ಹೆಚ್ಚಿಸುತ್ತದೆ. ಪ್ರಯಾಣದ ಸಮಯದಲ್ಲಿ ಸರಕುಗಳಿಗೆ ಪ್ರವೇಶ ಸಾಧ್ಯವಾಗುವುದಿಲ್ಲ. ವಿಭಾಗವನ್ನು OTP ಮೂಲಕ ತೆರೆಯಲಾಗುತ್ತದೆ ಮತ್ತು ಇನ್ನೊಂದು OTP ಮೂಲಕ ಮುಚ್ಚಲಾಗುತ್ತದೆ. ಈಗ, ನಾವು ಕಂಪಾರ್ಟ್‌ಮೆಂಟ್ ಅನ್ನು ಸೀಲ್ ಮಾಡುತ್ತೇವೆ, ಒಂದೊಮ್ಮೆ ಬಾಗಿಲು ಒಡೆದರೆ, ಅಥವಾ ಯಾವುದೇ ಇಂತಹ ಘಟನೆಗಳು ನಡೆದರೆ ಅಧಿಕಾರಿಗಳ ಮೊಬೈಲ್​ಗೆ ಸಂದೇಶ ಬರುವುದು.

ಪ್ರತಿ ನಿಲ್ದಾಣದಲ್ಲಿ ರೈಲ್ವೆಯ ಉದ್ಯೋಗಿಯು ಸರಕುಗಳನ್ನು ಲೋಡ್ ಮಾಡುವ ಅಥವಾ ಇಳಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು OTP ಸ್ವೀಕರಿಸುತ್ತಾರೆ, ವ್ಯವಸ್ಥೆಯು ಸುಲಭ ಮತ್ತು ಸರಳವಾಗಿದೆ.

ಕನಿಷ್ಠ ಮೂರು ರೈಲ್ವೆ ವಲಯಗಳು ಕೈಗೆಟಕುವ ದರದಲ್ಲಿ ಈ ಸೇವೆಯನ್ನು ಒದಗಿಸುವ ಕಂಪನಿಗಳನ್ನು ಗುರುತಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಲಾಕ್ ಸಿಸ್ಟಮ್ ಅನ್ನು ಒಟಿಪಿ ಮೂಲಕ ತೆರೆಯಲಾಗುತ್ತದೆ ಮತ್ತು ಮುಚ್ಚಲಾಗುತ್ತದೆ, ಇದನ್ನು ಪ್ರತಿ ನಿಲ್ದಾಣದಲ್ಲಿ ಲೋಡ್ ಅಥವಾ ಇಳಿಸುವ ಅಗತ್ಯವಿರುವ ರೈಲ್ವೆ ಸಿಬ್ಬಂದಿಗೆ ಕಳುಹಿಸಲಾಗುತ್ತದೆ. ಇದು ಯಾವುದೇ ಅಡಚಣೆಯಿಲ್ಲದೆ ರೈಲು ಸುಗಮವಾಗಿ ಚಲಿಸುವಂತೆ ಮಾಡುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?