ಮಗಳಿಗೆ ವರನನ್ನು ಹುಡುಕಲು ಕೊಲೆ ಆರೋಪಿಯೊಬ್ಬನಿಗೆ ಸುಪ್ರೀಂಕೋರ್ಟ್ 45 ದಿನಗಳ ಮಧ್ಯಂತರ ಜಾಮೀನು(Interim Bail) ನೀಡಿರುವ ಘಟನೆ ನಡೆದಿದೆ. ಇಂತಹ ಪ್ರಕರಣಗಳಲ್ಲಿ ಸಹ ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಿರುವುದನ್ನು ಪರಿಗಣಿಸಿ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ವಾಸ್ತವವಾಗಿ ಈ ಕೈದಿ ತನ್ನ 20 ವರ್ಷದ ಮಗಳ ಮದುವೆಗೆ ವರ ಹುಡುಕಬೇಕು ಎಂದು ಜಾಮೀನು ಕೋರಿದ್ದ. ಮಾಹಿತಿಯ ಪ್ರಕಾರ, ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ಎಸ್‌ವಿಎನ್ ಭಟ್ಟಿ ಅವರ ಪೀಠವು ಈ ಕೆಲಸಕ್ಕಾಗಿ ವ್ಯಕ್ತಿಗೆ 45 ದಿನಗಳ ಜಾಮೀನು ನೀಡಿದೆ.
ಕೊಲೆ, ಗಲಭೆ, ನೋವುಂಟುಮಾಡುವುದು, ಕಿಡಿಗೇಡಿತನ, ಅತಿಕ್ರಮಣ ಮುಂತಾದ ಅಪರಾಧಗಳಿಗಾಗಿ ಈ ವ್ಯಕ್ತಿಯನ್ನು ದೆಹಲಿ ಹೈಕೋರ್ಟ್ ದೋಷಿ ತೀರ್ಪು ನೀಡಿತ್ತು. ಹೈಕೋರ್ಟ್ ನೀಡಿರುವ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮತ್ತು ಜಾಮೀನು ಮಂಜೂರು ಮಾಡುವಂತೆ ಅವರು ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.
ಈ ವ್ಯಕ್ತಿಯ ಮೇಲ್ಮನವಿ ದೀರ್ಘಕಾಲದಿಂದ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಇತರ ಆರೋಪಿಗಳಿಗೂ ಜಾಮೀನು ಸಿಕ್ಕಿರುವ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ವೇಳೆ ಜಾಮೀನು ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಮಗಳನ್ನು ಮದುವೆಯಾಗಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದಕ್ಕಾಗಿ ವರನನ್ನು ಹುಡುಕಬೇಕು.
ಮತ್ತಷ್ಟು ಓದಿ: ವರನ ಅಜ್ಜಿಯನ್ನು ಕುರ್ಚಿಯಿಂದ ಎಬ್ಬಿಸಿದ್ದಕ್ಕೆ ಗಲಾಟೆ; 5 ಗಂಟೆಯಲ್ಲೇ ಮುರಿದು ಬಿತ್ತು ಮದುವೆ
ವ್ಯಕ್ತಿಯ ಪತ್ನಿ ಇಬ್ಬರು ಸಂಭಾವ್ಯ ವರಗಳನ್ನು ನೋಡಿದ್ದು, ಅವರಲ್ಲಿ ಒಬ್ಬರೊಂದಿಗೆ ತನ್ನ ಮಗಳ ಮದುವೆ ಗೊತ್ತುಪಡಿಸಬೇಕಿದೆ ಎಂದು ಕೈದಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಜಾಮೀನು ಕೋರಿ ಕೈದಿಗಳಿಗೆ ಈ ಹಿಂದೆ ಹಲವು ಸಂದರ್ಭಗಳಲ್ಲಿ ಮಧ್ಯಂತರ ಜಾಮೀನು ನೀಡಲಾಗಿತ್ತು ಮತ್ತು ಅದನ್ನು ಅವರು ಎಂದಿಗೂ ದುರುಪಯೋಗಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಇದಾದ ನಂತರ ನ್ಯಾಯಾಲಯವು ವ್ಯಕ್ತಿಗೆ 45 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಈ ಜಾಮೀನು ವಿಚಾರಣಾ ನ್ಯಾಯಾಲಯ ವಿಧಿಸಬಹುದಾದ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಜಾಮೀನು ಎಂದರೇನು?
ಸಂಕ್ಷಿಪ್ತವಾಗಿ ಹೇಳುವುದಾದರೆ, ಜಾಮೀನು ಆರೋಪಿಯ ಷರತ್ತುಬದ್ಧ ಬಿಡುಗಡೆಯಾಗಿದೆ ಮತ್ತು ನ್ಯಾಯಾಲಯಕ್ಕೆ ಕೋರ್ಟ್ ಹೇಳಿರುವ ದಿನ ಹಾಜರಾಗುವ ಭರವಸೆಯೊಂದಿಗೆ ಬಿಡುಗಡೆಮಾಡಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ