Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛಾಯ್ ಚಾಯ್​! ಈ ಯುವಕ ಸ್ವಪ್ರಯತ್ನದಿಂದ ಹೊಸ ಕಲ್ಪನೆಯನ್ನು ಹೀಗೆ ಸಾಕಾರಗೊಳಿಸಿದ್ದಾನೆ

ಹಳೆಯ ಟ್ರಾಲಿ ಆಟೋವನ್ನು ಟೀ ಕಪ್‌ನ ಆಕಾರದಲ್ಲಿ ಮೊಬೈಲ್ ಟೀ ಸ್ಟಾಲ್ ಆಗಿ ಮಾಡಿಕೊಂಡಿದ್ದಾನೆ. ಇದನ್ನು ಖಮ್ಮಮ್ ಜಿಲ್ಲೆಯಲ್ಲಿ ಇದನ್ನು ಸ್ಥಾಪಿಸಲಾಗಿದೆ. ಸಂದೀಪ್ ಟೀ ಸ್ಟಾಲ್ ಗೆ ಹಲೋ ಚಾಯ್ ಎಂದು ಹೆಸರಿಟ್ಟಿದ್ದಾರೆ.

Follow us
ಸಾಧು ಶ್ರೀನಾಥ್​
|

Updated on: Feb 09, 2024 | 11:45 AM

ಖಮ್ಮಮ್, ಫೆಬ್ರವರಿ 9: ಈ ಹಿಂದೆ ಕೆಲ ಯುವಕರು ದುಬಾರಿ ಕಾರುಗಳಲ್ಲಿ ಓಡಾಡಿ ತರಕಾರಿ, ಫಾಸ್ಟ್ ಫುಡ್ ಬ್ಯುಸಿನೆಸ್ ಮಾಡುತ್ತಿರುವ ಸುದ್ದಿಯನ್ನು ನೋಡಿದ್ದೇವೆ..ಅಂತೆಯೇ ಇದೀಗ ತೆಲಂಗಾಣದಲ್ಲೂ ಯುವಕನೊಬ್ಬ (Khammam youth) ವಿನೂತನ ವ್ಯಾಪಾರ ಜೀವನ ಆರಂಭಿಸಿದ್ದಾನೆ. ಉನ್ನತ ವಿದ್ಯಾಭ್ಯಾಸ ಮುಗಿಸಿಯೂ ಕೆಲಸ ಸಿಗದೆ ನಿರಾಸೆ ಅನುಭವಿಸಿದ ಈತ ತನ್ನ ಸ್ವಂತ ಬುದ್ದಿವಂತಿಕೆ ಬಳಸಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದಾನೆ. ಸಣ್ಣಪುಟ್ಟ ಕೆಲಸ ಮಾಡುತ್ತಾ… ಕಷ್ಟಪಟ್ಟು ದುಡಿಯುತ್ತಾ… ಹೀಗೆ ದಿನದೂಡುತ್ತಿದ್ದಾನೆ… ಬದುಕು ತುಂಬಾ ಚೆನ್ನಾಗಿದೆ ಎಂದು ಸ್ವಯಂಕೃಷಿ ಮಾಲೀಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಹಾಗಾದ್ರೆ ಆತ ಎಂತಹ ಬ್ಯುಸಿನೆಸ್ ಶುರು ಮಾಡಿದ್ದಾನೆ ಅಂತ ಗೊತ್ತಾದ್ರೆ ನೀವೂ ಆಶ್ಚರ್ಯ ಪಡುತ್ತೀರಿ. ಸಂಪೂರ್ಣ ವಿವರಗಳಿಗೆ ಹೋದರೆ… ಹೌದು ಆ ಯುವಕ ಸರಿಯಾದ ದಿಕ್ಕಿನಲ್ಲಿ ಚಿಂತನಶೀಲನಾಗಿದ್ದಾನೆ. ಖಮ್ಮಮ್ ಜಿಲ್ಲೆಯ ಕೊಣಿಜರ್ಲ ಮಂಡಲದ ತನಿಕೇಳ್ಳ ಎಂಬುವರಿಗೆ ಸೇರಿದ ಸಂದೀಪ್ ಎಂಬ ಯುವಕ ಹೊಸ ಆಲೋಚನೆಯೊಂದಿಗೆ ಹೊಸ ಜೀವನಕ್ಕೆ ನಾಂದಿ ಹಾಡಿದ್ದಾನೆ. ಸಂದೀಪ್ ಹಳೆಯ ಟ್ರಾಲಿ ಆಟೋ ಖರೀದಿಸಿದ. ಅದನ್ನು ಮೊಬೈಲ್ ಟೀ ಸ್ಟಾಲ್ ಆಗಿ (Mobile Tea Stall in Auto) ಪರಿವರ್ತಿಸಿದ.

ಹಳೆಯ ಟ್ರಾಲಿ ಆಟೋವನ್ನು ಟೀ ಕಪ್‌ನ ಆಕಾರದಲ್ಲಿ ಮೊಬೈಲ್ ಟೀ ಸ್ಟಾಲ್ ಆಗಿ ಮಾಡಿಕೊಂಡಿದ್ದಾನೆ. ಇದನ್ನು ಖಮ್ಮಮ್ ಜಿಲ್ಲೆಯಲ್ಲಿ ಇದನ್ನು ಸ್ಥಾಪಿಸಲಾಗಿದೆ. ಸಂದೀಪ್ ಟೀ ಸ್ಟಾಲ್ ಗೆ ಹಲೋ ಚಾಯ್ ಎಂದು ಹೆಸರಿಟ್ಟಿದ್ದಾರೆ. ನಗರದ ಪ್ರಮುಖ ಕೇಂದ್ರಗಳಲ್ಲಿ ಈ ಸಂಚಾರಿ ಟೀ ಸ್ಟಾಲ್ ನಡೆಸುವ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.

ಈ ಮೊಬೈಲ್ ಟೀ ಸ್ಟಾಲ್ ಮಾಡಲು ಅಂದಾಜು 2.5 ಲಕ್ಷ ರೂ. ಖರ್ಚು ಮಾಡಿದ್ದಾನೆ. ಕೆಲಸ ಸಿಗಲಿಲ್ಲ ಎಂದು ತಾನು ಯಾರನ್ನೂ ದೂರುತ್ತಿಲ್ಲ ಎಂದಿರುವ ಸಂದೀಪ್, ಯಾರ ಮೇಲೂ ಅವಲಂಬಿತರಾಗದೆ ತಮ್ಮದೇ ಆದ ಆಲೋಚನೆಗಳಿಂದ ಈ ಮೊಬೈಲ್ ಟೀ ಸ್ಟಾಲ್ ಸ್ಥಾಪಿಸಿರುವುದಾಗಿ ತಿಳಿಸಿದರು. ಸಂದೀಪ್ ಈ ಕಾರ್ಯಾಲೋಚನೆ ಇತರೆ ಯುವಕರನ್ನು ಪ್ರೋತ್ಸಾಹಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ