Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharat Ratna Awards: ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್, ವಿಜ್ಞಾನಿ ಎಂಎಸ್ ಸ್ವಾಮಿನಾಥನ್​​ಗೆ ಭಾರತ ರತ್ನ

ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಬಿಜೆಪಿ ಧುರೀಣ ಲಾಲ್ ಕೃಷ್ಣ ಅಡ್ವಾಣಿ ಕೇಂದ್ರವು ಭಾರತ ರತ್ನ ಘೋಷಿಸಿದ ನಂತರ ಈ ಘೋಷಣೆ ಮಾಡಲಾಗಿದೆ.

Bharat Ratna Awards: ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್, ವಿಜ್ಞಾನಿ ಎಂಎಸ್ ಸ್ವಾಮಿನಾಥನ್​​ಗೆ ಭಾರತ ರತ್ನ
Follow us
ಅಕ್ಷಯ್​ ಪಲ್ಲಮಜಲು​​
|

Updated on:Feb 09, 2024 | 2:25 PM

ದೆಹಲಿ, ಫೆ.9: ಭಾರತದ ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ (Bharat Ratna) ಪ್ರಶಸ್ತಿಯನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಮತ್ತು ಬಿಜೆಪಿ ಧುರೀಣ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಕಳೆದ ಒಂದು ತಿಂಗಳ ಹಿಂದೆ ಕೇಂದ್ರವು ಭಾರತ ರತ್ನ ಘೋಷಿಸಿದ ನಂತರ ಈ ಘೋಷಣೆ ಮಾಡಲಾಗಿದೆ. ಸರ್ಕಾರವು ಒಂದು ತಿಂಗಳ ಅವಧಿಯಲ್ಲಿ 5 ಭಾರತ ರತ್ನ ಪ್ರಶಸ್ತಿಗಳನ್ನು ಘೋಷಿಸಿದೆ.

ಪಿ ವಿ ನರಸಿಂಹ ರಾವ್

ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು 1991 ರಿಂದ 1996 ರವರೆಗೆ ಭಾರತದ ಒಂಬತ್ತನೇ ಪ್ರಧಾನ ಮಂತ್ರಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜೂನ್ 28, 1921 ರಂದು ಜನಿಸಿದ ರಾವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಉದಾರೀಕರಣ ಮತ್ತು ಜಾಗತೀಕರಣ ಕ್ರಮಗಳನ್ನು ಒಳಗೊಂಡಂತೆ ಗಮನಾರ್ಹ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. ರಾಜಕೀಯ ಸವಾಲುಗಳ ಹೊರತಾಗಿಯೂ ಕೆಲಸಗಳನ್ನು ಮಾಡಿದ್ದಾರೆ. ಮತ್ತು ನೆರೆಯ ದೇಶಗಳೊಂದಿಗೆ ರಾಜತಾಂತ್ರಿಕ ಪ್ರಸ್ತಾಪಗಳನ್ನು ಪ್ರಾರಂಭಿಸಿದ ಗೌರವ ಇವರಿಗೆ ಸಲ್ಲುತ್ತದೆ. ಭಾರತದ ಆರ್ಥಿಕ ಪರಿವರ್ತನೆ ಮತ್ತು ರಾಜಕೀಯ ಬದಲಾವಣೆಗೆ ರಾವ್ ಅವರ ಕೊಡುಗೆ ಅಪಾರ ಒಬ್ಬ ಸುಧಾರಕ ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಡಿಸೆಂಬರ್ 23, 2004 ರಂದು ನಿಧನರಾದರು.

ಚೌಧರಿ ಚರಣ್ ಸಿಂಗ್

ಡಿಸೆಂಬರ್ 23, 1902 ರಂದು ಜನಿಸಿದ ಚೌಧರಿ ಚರಣ್ ಸಿಂಗ್, ಜುಲೈ 1979 ರಿಂದ ಜನವರಿ 1980 ರವರೆಗೆ ದೇಶದ ಐದನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಹಾಗೂ ಒಬ್ಬ ಗಮನಾರ್ಹ ಭಾರತೀಯ ರಾಜಕೀಯ ನಾಯಕರಾಗಿದ್ದರು. ಉತ್ತರ ಪ್ರದೇಶದಿಂದ ಬಂದ ಅವರು ಕೃಷಿ ಸುಧಾರಣೆ ಕಾರ್ಯಗಳನ್ನು ಆರಂಭಿಸಿದರು ಮತ್ತು ರೈತರ ಹಕ್ಕುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ವೃತ್ತಿಜೀವನದ ಉದ್ದಕ್ಕೂ ದೇಶ ಸೇವೆಗೆ ಹೆಚ್ಚು ಪ್ರಮುಖ್ಯತೆ ನೀಡಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಿದರು. ಅವರು ಮೇ 29, 1987 ರಂದು ನಿಧನ ಹೊಂದಿದರು.

ಇದನ್ನೂ ಓದಿ: ಎಲ್​ಕೆ ಅಡ್ವಾಣಿಗೆ ಭಾರತ ರತ್ನ: ಬಿಎಸ್ ಯಡಿಯೂರಪ್ಪ ಸೇರಿ ಕರ್ನಾಟಕ ಬಿಜೆಪಿ ನಾಯಕರ ಹರ್ಷ

ಎಂಎಸ್ ಸ್ವಾಮಿನಾಥನ್

ಎಂಎಸ್ ಸ್ವಾಮಿನಾಥನ್, ಆಗಸ್ಟ್ 7, 1925 ರಂದು ತಮಿಳುನಾಡಿನಲ್ಲಿ ಜನಿಸಿದರು,  ಅವರು ಹಸಿರು ಕ್ರಾಂತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು. ಇವರು ಒಬ್ಬ ಪ್ರಸಿದ್ಧ ಭಾರತೀಯ ಕೃಷಿ ವಿಜ್ಞಾನಿ. ಹೆಚ್ಚು ಇಳುವರಿ ನೀಡುವ ಗೋಧಿ ತಳಿಗಳ ಕುರಿತು ಅವರು ಅದ್ಭುತ ಸಂಶೋಧನೆಯನ್ನು ನಡೆಸಿದರು. ಈ ಸಂಶೋಧನೆ 1960 ಮತ್ತು 1970 ರ ದಶಕದಲ್ಲಿ ಭಾರತದ ಕೃಷಿ ಉತ್ಪಾದಕತೆಯನ್ನು ಪರಿವರ್ತಿಸಿತು, ಇದರಿಂದ ದೇಶದ ಆಹಾರದ ಕೊರತೆಯನ್ನು ನಿವಾರಿಸಿತು. ಸುಸ್ಥಿರ ಕೃಷಿ ಪದ್ಧತಿಗಾಗಿ ಸ್ವಾಮಿನಾಥನ್ ಅವರಿಗೆ ವಿಶ್ವ ಆಹಾರ ಪ್ರಶಸ್ತಿ ಮತ್ತು ಪದ್ಮವಿಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದರು. ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ವಿಶ್ವಾದ್ಯಂತ ವಿಜ್ಞಾನಿಗಳು ಮತ್ತು ನೀತಿ ನಿರೂಪಕರಿಗೆ ಅವರ ಕೆಲಸವು ಸ್ಫೂರ್ತಿಯಾಗಿತ್ತು.

1955ರಿಂದ 2024ರವರೆಗೆ ಭಾರತ ರತ್ನ ಪಡೆದ ಪ್ರಧಾನ ಮಂತ್ರಿ ಹಾಗೂ ಉಪಪ್ರಧಾನ ಮಂತ್ರಿಗಳ ಪಟ್ಟಿ ಇಲ್ಲಿದೆ

ಜವಾಹರಲಾಲ್ ನೆಹರು

 1955
 
ಲಾಲ್ ಬಹದ್ದೂರ್ ಶಾಸ್ತ್ರಿ

1966

ಇಂದಿರಾ ಗಾಂಧಿ

1971

ರಾಜೀವ್ ಗಾಂಧಿ

1991

ವಲ್ಲಭಭಾಯಿ ಪಟೇಲ್

1991

ಗುಲ್ಜಾರಿಲಾಲ್ ನಂದಾ

1997

ಅಟಲ್ ಬಿಹಾರಿ ಬಾಜಪೇಯಿ

2015

ಲಾಲ್ ಕೃಷ್ಣ ಅಡ್ವಾಣಿ

2024

ನರಸಿಂಹರಾವ್

2024
ಚೌಧರಿ ಚರಣ್ ಸಿಂಗ್ 2024

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:59 pm, Fri, 9 February 24

ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ