AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭೆಯ ವಿದಾಯ ಭಾಷಣದಲ್ಲಿ ಕ್ಷಮೆಯಾಚಿಸಿದ ಜಯಾ ಬಚ್ಚನ್

Jaya Bachchan: ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಸಮಾಜವಾದಿ ಸಂಸದೆ ಜಯಾ ಬಚ್ಚನ್, ನಾನು ಯಾಕೆ ಕೋಪಗೊಳ್ಳುತ್ತೇನೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ಅದು ನನ್ನ ಸ್ವಭಾವ, ನಾನು ನನ್ನನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಏನನ್ನಾದರೂ ಇಷ್ಟಪಡದಿದ್ದರೆ ಅಥವಾ ಒಪ್ಪದಿದ್ದರೆ, ನಾನು ತಾಳ್ಮೆ ಕಳೆದುಕೊಳ್ಳುತ್ತೇನೆ" ಎಂದಿದ್ದಾರೆ.

ರಾಜ್ಯಸಭೆಯ ವಿದಾಯ ಭಾಷಣದಲ್ಲಿ ಕ್ಷಮೆಯಾಚಿಸಿದ ಜಯಾ ಬಚ್ಚನ್
ಜಯಾ ಬಚ್ಚನ್
ರಶ್ಮಿ ಕಲ್ಲಕಟ್ಟ
|

Updated on: Feb 09, 2024 | 2:24 PM

Share

ದೆಹಲಿ ಫೆಬ್ರುವರಿ 09 : ಕೆಲವು ದಿನಗಳ ಹಿಂದೆಯಷ್ಟೇ ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ (Budget Session) ತಾಳ್ಮೆ ಕಳೆದುಕೊಂಡ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ (Jagdeep Dhankhar) ಅವರಲ್ಲಿ ನಾವೇನು ಶಾಲಾ ಮಕ್ಕಳಲ್ಲ ಎಂದಿದ್ದರು. ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ವಿಮಾನಯಾನದ ಕುರಿತ ಪ್ರಶ್ನೆಯನ್ನು ಕೈ ಬಿಟ್ಟಾಗ ಜಯಾ ಬಚ್ಚನ್, ಕಾಂಗ್ರೆಸ್‌ನ ದೀಪೇಂದರ್ ಸಿಂಗ್ ಹೂಡಾ ಮತ್ತು ಇತರ ವಿರೋಧ ಪಕ್ಷದ ಸದಸ್ಯರು ಎದ್ದುನಿಂತು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರಲ್ಲಿ ಏಕೆ ಹೀಗಾಯಿತು ಎಂದು ಕೇಳಿದ್ದಾರೆ. ಈ ವೇಳೆ ಸಭಾಪತಿಯ ಪ್ರತಿಕ್ರಿಯೆಗೆ ಜಯಾ ಸಿಟ್ಟಾಗಿದ್ದರು.

ಇಂದು(ಶುಕ್ರವಾರ) ತನ್ನ ವಿದಾಯ ಭಾಷಣದ ವೇಳೆ ಸದನದ ಎಲ್ಲ ಸದಸ್ಯರಲ್ಲಿ ಕ್ಷಮೆಯಾಚಿಸಿರುವ ಜಯಾ ಬಚ್ಚನ್ ನಾನು ಮುಂಗೋಪಿ. ನನಗೆ ಬೇಗ ಸಿಟ್ಟುಬರುತ್ತದೆ. ಆದರೆ ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದರು. “ನಾನು ಯಾಕೆ ಕೋಪಗೊಳ್ಳುತ್ತೇನೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ಅದು ನನ್ನ ಸ್ವಭಾವ, ನಾನು ನನ್ನನ್ನು ಬದಲಾಯಿಸಲು ಸಾಧ್ಯವಿಲ್ಲ. ನಾನು ಏನನ್ನಾದರೂ ಇಷ್ಟಪಡದಿದ್ದರೆ ಅಥವಾ ಒಪ್ಪದಿದ್ದರೆ, ನಾನು ತಾಳ್ಮೆ ಕಳೆದುಕೊಳ್ಳುತ್ತೇನೆ” ಎಂದು ಜಯಾ ಬಚ್ಚನ್ ಹೇಳಿದ್ದಾರೆ. “ನಾನು ನಿಮ್ಮಲ್ಲಿ ಯಾರೊಂದಿಗಾದರೂ ಅನುಚಿತವಾಗಿ ವರ್ತಿಸಿದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದರು.

ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರ ಕೊಡುಗೆಯನ್ನು ಪ್ರೀತಿಯಿಂದ ಸ್ಮರಿಸಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು ಇವರ ನಿರ್ಗಮನವು ಖಾಲಿತನವನ್ನುಂಟು ಮಾಡುತ್ತದೆ. ಪ್ರತಿಯೊಂದು ಆರಂಭಕ್ಕೂ ಅಂತ್ಯವಿದೆ. ಪ್ರತಿ ಅಂತ್ಯವು ಹೊಸ ಆರಂಭವನ್ನು ಹೊಂದಿದೆ ಎಂದಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಖರ್ ಅವರು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳಲು ವಿರೋಧ ಪಕ್ಷದ ಸದಸ್ಯರನ್ನು ಹೇಳಿದ್ದು, ಕೈ ಬಿಟ್ಟ ಪ್ರಶ್ನೆಗೆ ಮರಳಿ ಬರುವುದಾಗಿ ಹೇಳಿದ್ದಾರೆ. ಹೂಡಾ ಪ್ರತಿಭಟನೆಯನ್ನು ಮುಂದುವರೆಸಿದಾಗ ಧನ್ಖರ್, ನೀವು ಅವರ ಜಯಾ ಬಚ್ಚನ್ ಅವರ ವಕ್ತಾರರಲ್ಲ. ಅವರು ತುಂಬಾ ಹಿರಿಯ ಸದಸ್ಯರಾಗಿದ್ದಾರೆ. ಇಲ್ಲ, ನೀವು ಅವರನ್ನು ಬೆಂಬಲಿಸಬೇಕಾಗಿಲ್ಲ ಎಂದಿದ್ದಾರೆ . ನಂತರ ಪ್ರಶ್ನೆ ಸಂಖ್ಯೆ 18 ಅನ್ನು ಬಿಟ್ಟುಬಿಡಲಾದ ಪ್ರಶ್ನೆ ಸಂಖ್ಯೆ 19 ರ ಉತ್ತರವನ್ನು ಪೂರ್ಣಗೊಳಿಸಿದ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

“ಇದನ್ನು ಸಂಯೋಜಿತ ರೀತಿಯಲ್ಲಿ ತೆಗೆದುಕೊಳ್ಳಲಾಗುವುದು.ಜಯಾ ಬಚ್ಚನ್ ಜಿ ಅವರು ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ ಎಂದಿದ್ದಾರೆ ಜಯಾ ಬಚ್ಚನ್ ಮಾತನಾಡಲು ಎದ್ದಾಗ, ಸಭಾಪತಿಯವರು ಅಡ್ಡಿಪಡಿಸಿ, “ನಾನು ಜಯಾ ಬಚ್ಚನ್ ಜೀ ಅವರನ್ನು ವಿನಂತಿಸುತ್ತೇನೆ . ಜಯಾಜಿ ನೀವು ತುಂಬಾ ಹಿರಿಯ ಸದಸ್ಯರು, ಇಲ್ಲದಿದ್ದರೆ ದೇಶದಲ್ಲಿ ನೀವು ಏನು ಹೇಳಿದರೂ ಅದನ್ನು ಗೌರವಿಸಲಾಗುತ್ತದೆ. ನಮ್ಮನ್ನು ಹುರಿದುಂಬಿಸಿ, ನಮ್ಮೆಲ್ಲರನ್ನೂ ಹುರಿದುಂಬಿಸಿ, ಮತ್ತು ನಿಮ್ಮಂತಹ ಶ್ರೇಷ್ಠ ನಟರು ಅನೇಕ ರೀಟೇಕ್‌ಗಳನ್ನು ಸಹ ತೆಗೆದುಕೊಂಡಿರಬೇಕು ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

ಇದನ್ನೂ ಓದಿ: ನಾವು ಶಾಲಾ ಮಕ್ಕಳಲ್ಲ: ಸಂಸತ್​​ನಲ್ಲಿ ತಾಳ್ಮೆ ಕಳೆದುಕೊಂಡ ಜಯಾ ಬಚ್ಚನ್

ಆಗ ಜಯಾ ಬಚ್ಚನ್,ನನಗೆ ಮಾತನಾಡಲು ಅವಕಾಶ ನೀಡಬೇಕು. ಉಪ ಸಭಾಪತಿಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಒತ್ತಿ ಹೇಳಿದರು. “ನೀವು ಅಥವಾ ಉಪಸಭಾಪತಿಯವರು ನಮ್ಮನ್ನು ಕುಳಿತುಕೊಳ್ಳಲು ಹೇಳಿದರೆ, ನಾವು ಕುಳಿತುಕೊಳ್ಳುತ್ತೇವೆ, ಆದರೆ ಇನ್ನೊಬ್ಬ ಸದಸ್ಯರು ನಮಗೆ ಸನ್ನೆ ಮಾಡಿ ಕುಳಿತುಕೊಳ್ಳಲು ಹೇಳಿದಾಗ ನಾವು ಹಾಗೆ ಮಾಡುವುದಿಲ್ಲ. ಪ್ರಶ್ನಿಸುವುದು ನಮ್ಮ ಹಕ್ಕು, ನೀವು ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಮಗೆ ಹೇಳುತ್ತೀರಿ. ಒಂದು ಪ್ರಶ್ನೆ ಇದೆ ಅದನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ನಾವು ಶಾಲಾ ಮಕ್ಕಳಲ್ಲ ನಮ್ಮನ್ನು ಗೌರವದಿಂದ ನೋಡಿಕೊಳ್ಳಿ ಎಂದಿದ್ದಾರೆ ಜಯಾ ಬಚ್ಚನ್.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ