Haldwani violence: ಹಲ್ದ್ವಾನಿ ಹಿಂಸಾಚಾರ ಪೂರ್ವ ಯೋಜಿತ: ಜಿಲ್ಲಾ ಮೆಜಿಸ್ಟ್ರೇಟ್
ದಾಳಿಕೋರರು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿದರು, ಬಂಭುಲ್‌ಪುರ ಪೊಲೀಸ್ ಠಾಣೆಗೆ ಗುಂಡು ಹಾರಿಸಿದರು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಅವರು ದಾಳಿಯ ಮೊದಲು ಛಾವಣಿಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಸಿದರು ಹಿಂಸಾಚಾರವನ್ನು ಮೊದಲೇ ಯೋಜಿಸಲಾಗಿತ್ತು ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಹೇಳಿದ್ದಾರೆ.
ಹಲ್ದ್ವಾನಿ (ಉತ್ತರಾಖಂಡ) 09: ಉತ್ತರಾಖಂಡದ ಹಲ್ದ್ವಾನಿ ಕೋಮು ಹಿಂಸಾಚಾರ (Haldwani violence) ಉಲ್ಬಣಗೊಳ್ಳುತ್ತಿದ್ದಂತೆ, ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ (Vandana Singh) ಅವರು ಈ ಹಿಂಸಾಚಾರ ಪೂರ್ವ ಯೋಜಿತ ಮತ್ತು ಅಪ್ರಚೋದಿತ ಎಂದು ಹೇಳಿದ್ದಾರೆ. “ಅಕ್ರಮವಾಗಿ ನಿರ್ಮಿಸಿದ” ಮದರಸಾವನ್ನು (madrasa) ನೆಲಸಮಗೊಳಿಸಿದ ನಂತರ ಬಂಭೂಲ್ಪುರದಲ್ಲಿ ಸಮಸ್ಯೆ ಆರಂಭವಾಗಿದೆ. ದಾಳಿ ಪ್ರಾರಂಭವಾಗುವ ಮೊದಲು ಆರೋಪಿಗಳು ಛಾವಣಿಯ ಮೇಲೆ ಕಲ್ಲುಗಳನ್ನು ಸಂಗ್ರಹಿಸಿದ್ದರು ಎಂದು ಸಿಂಗ್ ಹೇಳಿದ್ದಾರೆ.
ಮೇಲ್ಛಾವಣಿಯ ಮೇಲಿತ್ತು ಕಲ್ಲು
ದಾಳಿಕೋರರು ಪೆಟ್ರೋಲ್ ಬಾಂಬ್‌ಗಳನ್ನು ಬಳಸಿದರು, ಬಂಭುಲ್‌ಪುರ ಪೊಲೀಸ್ ಠಾಣೆಗೆ ಗುಂಡು ಹಾರಿಸಿದರು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದರು. ಅವರು ದಾಳಿಯ ಮೊದಲು ಛಾವಣಿಗಳ ಮೇಲೆ ಕಲ್ಲುಗಳನ್ನು ಸಂಗ್ರಹಿಸಿದರು ಹಿಂಸಾಚಾರವನ್ನು ಮೊದಲೇ ಯೋಜಿಸಲಾಗಿತ್ತು. ಜನಸಮೂಹವು ಮದರಸಾವನ್ನು ಉಳಿಸಲು ಪ್ರಯತ್ನಿಸಲಿಲ್ಲ. ಅವರು ಸರ್ಕಾರಿ ಆಸ್ತಿಗಳ ಮೇಲೆ ದಾಳಿ ಮಾಡಿದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು. ಸಿಂಗ್ ಪ್ರಕಾರ, ಮುನ್ಸಿಪಲ್ ಕಾರ್ಪೊರೇಷನ್ ತಂಡವು ಮದರಸಾ ಕೆಡವುವ ಕಾರ್ಯ ಶುರು ಮಾಡಿದಾಗ 15-20 ಜನರು ಗುಂಪನ್ನು ಪ್ರಚೋದಿಸಿದರು.
ನಾವು ನೆಲಸಮ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದೇವೆ. ಅತಿಕ್ರಮಣವನ್ನು ತೆಗೆದುಹಾಕಲು ವಿವಿಧ ಸ್ಥಳಗಳಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ ಮತ್ತು ಆದ್ದರಿಂದ ಇಲ್ಲಿಯೂ ಮಾಡಲಾಗಿದೆ ಎಂದಿದ್ದಾರೆ ಡಿಎಂ.
#WATCH | Haldwani violence | DM Nainital, Vandana Singh addresses a press conference.
She says, “You can see (in the video) that the Police force and the administration are not provoking or harming anybody.” pic.twitter.com/e6GL38vQB9
— ANI (@ANI) February 9, 2024
ದಾಳಿಯ ಸಂದರ್ಭದಲ್ಲಿ ಪೊಲೀಸರು ಮತ್ತು ಆಡಳಿತವು ಜೀವ ಅಥವಾ ಆಸ್ತಿಗೆ ಹಾನಿ ಉಂಟುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು. ಡೆಮಾಲಿಷನ್ ಡ್ರೈವ್ ಶಾಂತಿಯುತವಾಗಿ ಪ್ರಾರಂಭವಾಯಿತು. ಸಂಪೂರ್ಣ ಪ್ರಕ್ರಿಯೆಯನ್ನು ಸರಿಯಾಗಿ ನಡೆಸಲಾಗಿದ್ದರೂ, ಅರ್ಧ ಗಂಟೆಯೊಳಗೆ ದೊಡ್ಡ ಜನಸಮೂಹವು ನಮ್ಮ ಪುರಸಭೆಯ ಸಹಕಾರ ತಂಡದ ಮೇಲೆ ದಾಳಿ ಮಾಡಿದೆ” ಎಂದು ಅವರು ಹೇಳಿದರು.
ಇಬ್ಬರು ಸಾವು
ಈ ಹಿಂದೆ ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಸುದ್ದಿಯಾಗಿತ್ತು ಆದರೆ ಸಾವಿನ ಸಂಖ್ಯೆಯಲ್ಲಿ ಗೊಂದಲ ಆಗಿದ್ದು , ಇಲ್ಲಿಯವರಿಗೆ ಇಬ್ಬರನ್ನು ಬಂಧಿಸಲಾಗಿದೆ. ಆಕೆಯ ಪ್ರಕಾರ ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಹಿಂಸಾಚಾರದ ಕುರಿತು ಒಟ್ಟು ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಹಿಂಸಾಚಾರವನ್ನು ಪ್ರಚೋದಿಸಿದ ಎರಡು ಡಜನ್‌ಗಿಂತಲೂ ಹೆಚ್ಚು ಜನರನ್ನು ಪೊಲೀಸರು ಗುರುತಿಸಿದ್ದಾರೆ ಎಂದು ನೈನಿತಾಲ್ ಹಿರಿಯ ಪೊಲೀಸ್ ಅಧೀಕ್ಷಕ ಪ್ರಹ್ಲಾದ್ ನಾರಾಯಣ ಮೀನಾ ಹೇಳಿದ್ದಾರೆ.
ಗುರುವಾರ ಸಂಜೆ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಪ್ರದೇಶದಲ್ಲಿ “ಕಾನೂನುಬಾಹಿರವಾಗಿ ನಿರ್ಮಿಸಲಾದ” ಮದರಸಾವನ್ನು ಕೆಡವಿದಾಗ ಹಿಂಸಾಚಾರ ಭುಗಿಲೆದ್ದ ನಂತರ ಭಾರೀ ಕೋಮು ಉದ್ವಿಗ್ನತೆ ಉಂಟಾಗಿದೆ. ಮುನ್ಸಿಪಲ್ ಕಮಿಷನರ್ ಪಂಕಜ್ ಉಪಾಧ್ಯಾಯ, ಸಿಟಿ ಮ್ಯಾಜಿಸ್ಟ್ರೇಟ್ ರಿಚಾ ಸಿಂಗ್ ಮತ್ತು ಎಸ್‌ಡಿಎಂ ಪರಿತೋಷ್ ವರ್ಮಾ ಅವರ ಸಮ್ಮುಖದಲ್ಲಿ ನೆಲಸಮ ಕಾರ್ಯ ಮಾಡಲಾಯಿತು.
ಇದನ್ನೂ ಓದಿ: Haldwani Riots: ಹಲ್ದ್ವಾನಿಯಲ್ಲಿ ಮದರಸಾ ನೆಲಸಮ, ಭುಗಿಲೆದ್ದ ಹಿಂಸಾಚಾರ, 4 ಮಂದಿ ಸಾವು, 200 ಜನರಿಗೆ ಗಾಯ
ದಾಳಿಯ ನಂತರ, ಜಿಲ್ಲಾಡಳಿತವು ಹಲ್ದ್ವಾನಿಯಲ್ಲಿ ಕರ್ಫ್ಯೂ ವಿಧಿಸಿದ್ದು , ಗಲಭೆಕೋರರ ವಿರುದ್ಧ ‘ಕಂಡಲ್ಲಿ ಗುಂಡಿಕ್ಕಿ’ ಆದೇಶವನ್ನು ಹೊರಡಿಸಿತು. ಪೊಲೀಸರ ಪ್ರಕಾರ, ಹಿಂಸಾಚಾರದಲ್ಲಿ ಕನಿಷ್ಠ 100 ಜನರು ಗಾಯಗೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ