AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನ ಪೆಟ್ರೋಲ್​ ಡೀಸೆಲ್​ ದರ: 10 ದಿನಗಳಿಂದ ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಪಾಡಿಕೊಂಡ ಪೆಟ್ರೋಲ್​ ದರ

Petrol and Diesel Price Today: ಪೆಟ್ರೋಲ್​ ಮತ್ತು ಡಿಸೇಲ್​ ದರ ಪ್ರತಿದಿನ ಪರಿಷ್ಕರಣೆಯಾಗುತ್ತಿರುತ್ತದೆ. ಪೆಟ್ರೋಲ್​ ಮತ್ತು ಡೀಸೆಲ್​ ದರ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ 2024 ಮಾರ್ಚ್​ 30 ರಂದು ದೇಶದ ಪ್ರಮುಖ ರಾಜ್ಯಗಳಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಎಷ್ಟಿದೆ?... ಇಲ್ಲಿದೆ ಮಾಹಿತಿ...

ಇಂದಿನ ಪೆಟ್ರೋಲ್​ ಡೀಸೆಲ್​ ದರ: 10 ದಿನಗಳಿಂದ ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಪಾಡಿಕೊಂಡ ಪೆಟ್ರೋಲ್​ ದರ
ಪೆಟ್ರೋಲ್Image Credit source: English Jagran
ವಿವೇಕ ಬಿರಾದಾರ
|

Updated on:Mar 31, 2024 | 7:24 AM

Share

2017ರ ಜೂನ್​ನಲ್ಲಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗೆ ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಜಾರಿಗೆ ತಂದಿತು. ಅಂದಿನಿಂದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಿಗ್ಗೆ ದರಗಳನ್ನು ಪರಿಷ್ಕರಿಸುತ್ತಿವೆ. ಇದಕ್ಕೂ ಮುನ್ನ ಇಂಧನ ಬೆಲೆಯನ್ನು ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲಾಗಿತ್ತು. ಹಾಗಾದರೆ ಇಂದು (ಶನಿವಾರ ಮಾರ್ಚ್​ 30) ರ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಇಲ್ಲಿದೆ..

ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಶುಕ್ರವಾರ (ಮಾರ್ಚ್​. 29) ರಂದು ಇದ್ದ ಬೆಲಯೇ ಶನಿವಾರವೂ ಮುಂದುವರೆದಿದೆ. ಇಂದು (ಶನಿವಾರ ಮಾರ್ಚ್​​.30) ರಂದು ಬೆಂಗಳೂರಿನಲ್ಲಿ ಪೆಟ್ರೋಲ್​​ ಬೆಲೆ ಪ್ರತಿ ಲೀಟರ್‌ಗೆ 99.84 ರೂ. ಇದೆ. ಇನ್ನು ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಪೆಟ್ರೋಲ್ ಬೆಲೆ 0.05 ರಷ್ಟು ಮಾತ್ರ ಏರಿಳಿತ ಕಂಡಿದೆ. ಇನ್ನು ಡೀಸೆಲ್​ ದರ ಶುಕ್ರವಾರಕ್ಕಿಂತ ಕೊಂಚ ಏರಿಕೆ ಕಂಡಿದೆ. ಇಂದು 85.98 ರೂ. ಡೀಸೆಲ್​ ದರ ಇದೆ. ಶುಕ್ರವಾರಕ್ಕಿಂತ 0.05 ರೂ. ಏರಿಕೆಯಾಗಿದೆ.

 ಪೆಟ್ರೋಲ್​ ಮತ್ತು ಡೀಸೆಲ್​ ದರ
ನಗರ ಪೆಟ್ರೋಲ್​ (ಲೀ) ಡೀಸೆಲ್ (ಲೀ)​​
ಅಹಮದಾಬಾದ್ 94.44 89,95​
ಭೋಪಾಲ್ 106.29 91.68
ಚೆನ್ನೈ 100.85 92.34
ಹೈದರಾಬಾದ್ 107.41 95.65
ಜಮ್ಮು 95.43 81.28
ಕೊಲ್ಕತ್ತಾ 103.94 90.76
ಲಖನೌ 94.65 87.76
ನಾಗಪುರ 103.98 90.86
ನೋಯ್ಡಾ 94.65 87.75
ಪುಣೆ 103.88 90.41

ಈ ತಿಂಗಳು ದಾಖಲಾದ ಗರಿಷ್ಠ ಪೆಟ್ರೋಲ್​ ಬೆಲೆ ಅಂದರೆ 101.94 ರೂ. ಮಾರ್ಚ್ 1 ರಿಂದ ಮಾರ್ಚ್ 30 ರ ನಡುವೆ ಶೇ 2.06 ರಷ್ಟು ಮಾತ್ರ ಪೆಟ್ರೋಲ್​ ದರದಲ್ಲಿ ಏರಿಳಿತ ಕಂಡಿದೆ. ಇನ್ನು ಮಾರ್ಚ್‌ ತಿಂಗಳಲ್ಲಿ ದಾಖಲಾದ ಅತ್ಯಂತ ಕಡಿಮೆ ದರ 99.84 ರೂ. ಆಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:17 am, Sat, 30 March 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ