AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato Grand Challenge: ಹಠಾತ್ ಟೊಮೆಟೋ ಬೆಲೆ ಏರಿಕೆ, ಕುಸಿತ ನಿಭಾಯಿಸಲು ಕೇಂದ್ರದಿಂದ ಹೊಸ ತಂತ್ರ, ಅಭಿಪ್ರಾಯಕ್ಕೆ ‘ಟೊಮ್ಯಾಟೊ ಗ್ರ್ಯಾಂಡ್ ಚಾಲೆಂಜ್’ ಆರಂಭ

ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿರುವಂತೆ ಈ ವಾರದಿಂದ ನಿಮ್ಮ ಅಭಿಪ್ರಾಯಕ್ಕೆ ಮುಕ್ತ ಅವಕಾಶ ನೀಡಲು ನಾವು ಟೊಮೆಟೋ ಗ್ರಾಂಡ್ ಚಾಲೆಂಜ್ ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಿ ಪಡುತ್ತಿದ್ದೇನೆ. ನಿಮ್ಮ ಸಲಹೆ ನಮಗೆ ಬೇಕು. ನಿಮ್ಮ ಅಭಿಪ್ರಾಯದಿಂದ ಇವುಗಳನ್ನು ಕಾರ್ಯರೂಪಕ್ಕೆ ತರುತ್ತೇವೆ.

Tomato Grand Challenge: ಹಠಾತ್ ಟೊಮೆಟೋ ಬೆಲೆ ಏರಿಕೆ, ಕುಸಿತ ನಿಭಾಯಿಸಲು ಕೇಂದ್ರದಿಂದ ಹೊಸ ತಂತ್ರ, ಅಭಿಪ್ರಾಯಕ್ಕೆ 'ಟೊಮ್ಯಾಟೊ ಗ್ರ್ಯಾಂಡ್ ಚಾಲೆಂಜ್' ಆರಂಭ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jul 01, 2023 | 11:19 AM

Share

ದೆಹಲಿ: ದೇಶದಾಂತ್ಯ ಬೆಲೆ ಏರಿಕೆಯಿಂದ ಟೊಮೆಟೊ ಹುಳಿ ಹೆಚ್ಚಾಗಿದೆ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಕ್ಕೇರಿದೆ ಎಂದು ಜನರು ಬೊಬ್ಬೆ ಹೊಡೆಯುತ್ತಿದ್ದಾರೆ. ಇದೀಗ ಈ ಬೆಲೆ ಏರಿಕೆ ಎಂಬ ಹುಳಿಯನ್ನು ಕಡಿಮೆ ಮಾಡುವುದು ಹೇಗೆ? ಎಂಬುದರ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಬೆಲೆ ಏರಿಕೆ ಸರ್ಕಾರಕ್ಕೆ ದೊಡ್ಡ ತಲೆನೋವವಾಗಿದೆ. ಜನರು ಟೊಮೆಟೊವನ್ನು ಖರೀದಿ ಮಾಡಲು ಜನರು ಹಿಂದೆ -ಮುಂದೆ ನೋಡುತ್ತಿದ್ದಾರೆ. ಅದರೂ ಅನಿವಾರ್ಯ ಎಂದು ಖರೀದಿ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದೀಗ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ಕಡಿಮೆ ಮಾಡುವುದು ಹೇಗೆ ಇದಕ್ಕೆ ಪರಿಹಾರ ಏನು ಎಂದು ಜನರ ಮುಂದೆ ಇಟ್ಟಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಟೊಮೆಟೊ ಬೆಲೆ ಏರಿಕೆ ಮತ್ತು ಇಳಿಕೆಯನ್ನು ತಡೆಗಟ್ಟಲು “ಟೊಮೆಟೋ ಗ್ರಾಂಡ್ ಚಾಲೆಂಜ್” ​ನ್ನು ತಂದಿದೆ. ಇದರಿಂದ ಜನರಿಂದ ಟೊಮೆಟೋ ಉತ್ಪಾದನೆಯ ಹೆಚ್ಚಳ, ಸಂಸ್ಕರಣೆ, ಸಂಗ್ರಹಣೆ ಹೇಗೆ ಎಂಬು ಅಭಿಪ್ರಾಯನ್ನು ಹಂಚಿಕೊಳ್ಳಲು ಈ ಕ್ರಮವನ್ನು ತರಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್

ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿರುವಂತೆ ಈ ವಾರದಿಂದ ನಿಮ್ಮ ಅಭಿಪ್ರಾಯಕ್ಕೆ ಮುಕ್ತ ಅವಕಾಶ ನೀಡಲು ನಾವು ಟೊಮೆಟೋ ಗ್ರಾಂಡ್ ಚಾಲೆಂಜ್ ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಿ ಪಡುತ್ತಿದ್ದೇನೆ. ನಿಮ್ಮ ಸಲಹೆ ನಮಗೆ ಬೇಕು. ನಿಮ್ಮ ಅಭಿಪ್ರಾಯದಿಂದ ಇವುಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. ಈ ಹಿಂದೆ ಈರುಳ್ಳಿ ಬೆಲೆ ಹೆಚ್ಚಾದ ಸಮಯದಲ್ಲೂ ಇಂತಹ ಕಾರ್ಯತಂತ್ರವನ್ನು ಮಾಡಿದ್ದೇವೆ, ಆಗ 600 ಜನರ ಅಭಿಪ್ರಾಯ ಸಂಗ್ರಹ ಮಾಡಿ, ಅದರಲ್ಲಿ 13 ಜನರ ಅಭಿಪ್ರಾಯಕ್ಕೆ ಅನುಗುಣವಾಗಿ ತಜ್ಞರ ಜತೆಗೆ ಚರ್ಚಿಸಿದ್ದೇವೆ ಎಂದು ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Tomato Price: ಕರ್ನಾಟಕದಲ್ಲಿ ದಶಕ ಬಾರಿಸಿದ ಟೊಮ್ಯಾಟೋ ದರ, ಇದಕ್ಕೆ ಕಾರಣ ಏನು?

ಪ್ರಾಥಮಿಕ ಸಂಸ್ಕರಣೆ, ನಂತರದ ಕೊಯ್ಲು, ಸಂಗ್ರಹಣೆ ಮತ್ತು ಟೊಮೆಟೊ ಮೌಲ್ಯೀಕರಣ ಮಾಡಲಾಗುವುದು ಎಂದು ಅವರು ಹೇಳಿದರು. ಟೊಮೆಟೋದ ಮೌಲ್ಯವರ್ಧನೆಯನ್ನು ನೀಡುವಾಗ ನಷ್ಟವನ್ನು ಕಡಿಮೆ ಮಾಡಲು ಸಮಗ್ರ ಕಾರ್ಯತಂತ್ರದ ಪರಿಹಾರವನ್ನು ಹೊರತರುವುದು ಇದರ ಉದ್ದೇಶವಾಗಿದೆ. ಇದನ್ನು ನಾಲ್ಕು ಹಂತಗಳಲ್ಲಿ ಅಭಿಪ್ರಾಯ ಸಂಗ್ರಹ ರೂಪಗಳನ್ನು ಮಾಡಲಾಗುತ್ತದೆ.

1. ಟೊಮೆಟೊ ಪ್ರಭೇದಗಳು, ಉತ್ಪಾದನಾ ತಂತ್ರಜ್ಞಾ, ಹವಾಮಾನ ಪರಿಸ್ಥಿತಿಗಳು, ಸಂಸ್ಕರಣೆ.

2. ಬೆಳೆ ಯೋಜನೆ, ರೈತರಿಗೆ ಮಾರುಕಟ್ಟೆ ಬುದ್ಧಿವಂತಿಕೆ, ರೈತರು/ನರ್ಸರಿಗಳು/ವ್ಯಾಪಾರಿಗಳು/ಗ್ರಾಹಕ ಇಂಟರ್‌ಫೇಸ್‌.

3. ಕೊಯ್ಲು, ನಿರ್ವಹಣೆ ಮತ್ತು ಸಾರಿಗೆ ಸಮಯ.

4. ನವೀನ ಶೇಖರಣಾ ತಂತ್ರಜ್ಞಾನಗಳು ಮತ್ತು ದೀರ್ಘಾವಧಿಯ ಸಂರಕ್ಷಣೆಗಾಗಿ ಪರಿಹಾರಗಳು ಮತ್ತು ಹಾಳಾಗುವಿಕೆಯಿಂದಾಗಿ ಪ್ಯಾನಿಕ್ ಮಾರಾಟವನ್ನು ಕಡಿಮೆ ಮಾಡುವುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 am, Sat, 1 July 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?