Tomato: ಟೊಮೆಟೋ ಕಾಯಲೆಂದೇ ಬೌನ್ಸರ್​​​ ನೇಮಿಸಿದ ತರಕಾರಿ ವ್ಯಾಪಾರಿ!

|

Updated on: Jul 09, 2023 | 5:29 PM

ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಗ್ರಾಹಕರ ನಿದ್ದೆಗೆಡಿಸಿದೆ. ಜನರು ಟೊಮೆಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಟೊಮೆಟೋ ಬೆಳೆದ ರೈತನಿಗೆ ಮಾತ್ರ ಜ್ಯಾಕ್ ಪಾಟ್ ಹೊಡೆದಿದೆ. ಇದರ ಮಧ್ಯೆ ಟೊಮೆಟೋವನ್ನು ಕಾಯಲೆಂದೇ ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ಮಾರಾಟಗಾರರೊಬ್ಬರು ಬೌನ್ಸರ್ಸ್​​​ಗಳನ್ನು ನೇಮಿಸಿಕೊಂಡಿದ್ದಾರೆ. 

Tomato: ಟೊಮೆಟೋ ಕಾಯಲೆಂದೇ ಬೌನ್ಸರ್​​​ ನೇಮಿಸಿದ ತರಕಾರಿ ವ್ಯಾಪಾರಿ!
ಟೊಮೆಟೋ ಕಾಯುತ್ತಿರುವ ಬೌನ್ಸರ್ಸ್​​
Follow us on

ಉತ್ತರ ಪ್ರದೇಶ: ಮಾರುಕಟ್ಟೆಯಲ್ಲಿ ಟೊಮೆಟೋ (Tomato) ಬೆಲೆ ಗ್ರಾಹಕರ ನಿದ್ದೆಗೆಡಿಸಿದೆ. ಜನರು ಟೊಮೆಟೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಟೊಮೆಟೋ ಬೆಳೆದ ರೈತನಿಗೆ ಮಾತ್ರ ಜ್ಯಾಕ್ ಪಾಟ್ ಹೊಡೆದಿದೆ. ವೆಜ್ ಆಗಿರಲಿ, ನಾನ್ ವೆಜ್ ಆಗಿರಲಿ ಬಹುತೇಕ ಎಲ್ಲಾ ಅಡುಗೆಗೆ ಟೊಮೆಟೋ ಬೇಕೇ ಬೇಕೆ. ಆದರೆ ಈಗ ಟೊಮೆಟೋ ಬೆಲೆ ಗಗನಕ್ಕೇರಿದ್ದು, ಮತ್ತಷ್ಟು ಹುಳಿ ಹುಳಿಯಾಗಿದೆ. ಸದ್ಯ ಟೊಮೆಟೋಗೆ ಮಾರುಕಟ್ಟೆಯಲ್ಲಿ ಬಂಗಾರ ಬಲೆ ಬಂದಿದ್ದು, ಇದನ್ನು ಕಾಯಲೆಂದೇ ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ಮಾರಾಟಗಾರರೊಬ್ಬರು ಬೌನ್ಸರ್ಸ್ (bouncer) ​​​ಗಳನ್ನು ನೇಮಿಸಿಕೊಂಡಿದ್ದಾರೆ.

ಹೌದು ಪಿಟಿಐ ಈ ಕುರಿತಾಗಿ ವರದಿ ಮಾಡಿದೆ. ದೇಶದಾದ್ಯಂತ ಟೊಮೆಟೋ ಬೆಲೆ ಹೆಚ್ಚಾಗಿದೆ. ಹಾಗಾಗಿ ಖರೀದಿಸುವ ಬದಲು ಜನರು ಕಳ್ಳತನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತೊಂದರೆ ನೀಡುತ್ತಿದ್ದಾರೆ. ಹಾಗಾಗಿ ನಾನು ಬೌನ್ಸರ್ಸ್​​​ಗಳನ್ನು ನೇಮಿಸಿಕೊಂಡಿದ್ದೇನೆ.

ಇದನ್ನೂ ಓದಿ: Tomato: ಪೆಟ್ರೋಲ್​ಗಿಂತ ದುಬಾರಿಯಾದ ಟೊಮೆಟೋ ಬೆಲೆ ಯಾವಾಗ ಇಳಿಯುತ್ತೆ? ತಜ್ಞರು ಹೇಳೋದೇನು? ಇಲ್ಲಿದೆ ಡೀಟೇಲ್ಸ್

ನನ್ನ ಅಂಗಡಿಯಲ್ಲಿ ಟೊಮೆಟೋಗಳಿವೆ. ನಾನು ಗ್ರಾಹಕರೊಂದಿಗೆ ಯಾವುದೇ ವಾದ ಅಥವಾ ಜಗಳ ಮಾಡಲು ಬಯಸುವುದಿಲ್ಲ. ಟೊಮೆಟೋ 160 ರೂ. ಕೆಜಿ ಗೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ ಎಂದು ತರಕಾರಿ ಮಾರಾಟಗಾರ ಅಜಯ್ ಫೌಜಿ ಪಿಟಿಐಗೆ ತಿಳಿಸಿದ್ದಾರೆ.


ಇತ್ತೀಚೆಗೆ ಕರ್ನಾಟಕದ ಕೋಲಾರ, ಹಾಸನ ಜಿಲ್ಲೆಗಳಲ್ಲಿ ಕೂಡ ರೈತರು ಕಷ್ಟಪಟ್ಟು ಬೆಳೆದ ಟೊಮೆಟೋ ಗಳನ್ನು ಕಳ್ಳತನ ಮಾಡಿದ್ದರು. ಇದನ್ನು ತಡೆಗಟ್ಟಲು ರೈತರು ಗಂಭೀರ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ವರದಿಯಾಗಿತ್ತು.

ರಾತ್ರೋರಾತ್ರಿ 3 ಲಕ್ಷ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನ

ಹಾಸನ: ರೈತರೊಬ್ಬರು ತಮ್ಮ ಜಮೀನಿನಲ್ಲಿ ರಾತ್ರೋರಾತ್ರಿ 3 ಲಕ್ಷ ರೂಪಾಯಿ ಮೌಲ್ಯದ ಟೊಮೆಟೋ ಕಳ್ಳತನವಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಜಿಲ್ಲೆಯ ಹಳೇಬೀಡು ಸಮೀಪದ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: Viral Video: ತಮಿಳಿನ ‘ಟಮ್ ಟಮ್’​ ಧಾಟಿಯಲ್ಲಿ ಟೊಮ್ಯಾಟೋ ಗೀತೆ

ಯಾವಾಗ ಟೊಮೆಟೋ ಬೆಲೆ ಕೆ.ಜಿ.ಗೆ 150 ರೂ. ದಾಟಿತೋ ಕಳ್ಳರು 3 ಲಕ್ಷ ಮೌಲ್ಯದ 90 ಟೊಮೆಟೋ ಬಾಕ್ಸ್​ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಎರಡು ಎಕರೆ ಭೂಮಿಯಲ್ಲಿ ಬೆಳೆಯಲಾಗಿದ್ದು ಟೊಮೆಟೋವನ್ನು ಚಿಕ್ಕಮಗಳೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ