AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jammu And Kashmir Flood: ಪೂಂಚ್​ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಸೈನಿಕರು

ಜಮ್ಮು ಮತ್ತು ಕಾಶ್ಮೀರ(Jammu And Kashmir) ದ ಪೂಂಚ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ(Flood)ಕ್ಕೆ ಸಿಲುಕಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ.

Jammu And Kashmir Flood: ಪೂಂಚ್​ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕೊಚ್ಚಿ ಹೋದ ಇಬ್ಬರು ಸೈನಿಕರು
ಕುಲ್ದೀಪ್ ಸಿಂಗ್Image Credit source: NDTV
ನಯನಾ ರಾಜೀವ್
|

Updated on: Jul 09, 2023 | 1:04 PM

Share

ಜಮ್ಮು ಮತ್ತು ಕಾಶ್ಮೀರ(Jammu And Kashmir) ದ ಪೂಂಚ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹ(Flood)ಕ್ಕೆ ಸಿಲುಕಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಶನಿವಾರ ಸುರನ್‌ಕೋಟೆ ಪ್ರದೇಶದ ಡೋಗ್ರಾ ನಾಲಾವನ್ನು ದಾಟುತ್ತಿದ್ದ ಸೈನಿಕರು ಪ್ರವಾಹಕ್ಕೆ ಸಿಲುಕಿದರು ಎಂದು ಭಾರತೀಯ ಸೇನೆ ತಿಳಿಸಿದೆ. ಶನಿವಾರ ರಾತ್ರಿ ನಾಯಬ್ ಸುಬೇದಾರ್ ಕುಲದೀಪ್ ಸಿಂಗ್ ಅವರ ಮೃತದೇಹವನ್ನು ಹೊಳೆಯಿಂದ ಹೊರತೆಗೆಯಲಾಗಿದ್ದು, ಇಂದು ಸಿಪಾಯಿ ತೇಲು ರಾಮ್ ಅವರ ಮೃತದೇಹ ಪತ್ತೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸತತ ಮೂರನೇ ದಿನವೂ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಥುವಾ, ಸಾಂಬಾ ಮತ್ತು ಜಮ್ಮು ಪ್ರದೇಶದ ಇತರ ಕೆಳ ಜಲಾನಯನ ಪ್ರದೇಶಗಳಿಗೆ ಪ್ರವಾಹದ ಅಪಾಯ ಹೆಚ್ಚಿದ್ದು, ಹಠಾತ್ ಪ್ರವಾಹವು ಗಣನೀಯವಾಗಿ ಹೆಚ್ಚಿದೆ. ಮುಂದಿನ 24 ಗಂಟೆಗಳಲ್ಲಿ ಜಾಗರೂಕರಾಗಿರಲು ಸಂಬಂಧಪಟ್ಟ ಎಲ್ಲರಿಗೂ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಮತ್ತಷ್ಟು ಓದಿ: n

ಮುಂಗಾರು ಈ ಬಾರಿ ತಡವಾಗಿ ಆಗಮಿಸಿದರೂ ಹಲವು ರಾಜ್ಯಗಳಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿದೆ. ದೆಹಲಿಯ ಎನ್​ಸಿಆರ್​ನಲ್ಲಿ ಶನಿವಾರ ಬೆಳಗ್ಗೆಯಿಂದ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ.

ಹಿಮಾಚಲಪ್ರದೇಶದಲ್ಲೂ ಮಳೆ ಸುರಿಯುತ್ತಿದ್ದು, ಪ್ರವಾಹ ಎಚ್ಚರಿಕೆ ನೀಡಲಾಗಿದ್ದು 7 ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಇದಲ್ಲದೇ ಜುಲೈ 10ಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಏತನ್ಮಧ್ಯೆ, ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿಯಲ್ಲಿಯೂ ಪ್ರವಾಹ ಮತ್ತು ಹಿಮಕುಸಿತದ ಎಚ್ಚರಿಕೆಗಳನ್ನು ನೀಡಲಾಗಿದೆ.

ಲಾಹೌಲ್-ಸ್ಪಿತಿಯಲ್ಲಿ ಆಗುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಹಿಮಕುಸಿತಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ