AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirupati Temple: ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಅಧಿಕ ಪ್ರಮಾಣದ ಆದಾಯ‌ ಸಂಗ್ರಹ

ಕೇವಲ 24 ಗಂಟೆಗಳಲ್ಲಿ 2.76 ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 18153 ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ 7873 ಭಕ್ತರು ತಿರುಮಲದ‌ ಬಾಲಾಜಿ ದೇವಾಲಯದಲ್ಲಿ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

Tirupati Temple: ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಅಧಿಕ ಪ್ರಮಾಣದ ಆದಾಯ‌ ಸಂಗ್ರಹ
ತಿರುಪತಿ ದೇವಾಲಯ
TV9 Web
| Edited By: |

Updated on: Jul 26, 2021 | 10:43 AM

Share

ತಿರುಪತಿ​: ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ನಂತರದಲ್ಲಿ ದೇವಾಲಯದ ಪ್ರವೇಶಕ್ಕೆ ಅವಕಾಶ ದೊರೆತಿದ್ದು, ಭಕ್ತರು ದೇವರ ದರ್ಶನಕ್ಕೆ ಮುಂದಾಗಿದ್ದಾರೆ. ಇದರ ಅನುಸಾರ ಆಂಧ್ರಪ್ರದೇಶದಲ್ಲಿನ ತಿರುಮಲದ‌ ಬಾಲಾಜಿ ದೇವಾಲಯವೂ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಆ ಪ್ರಕಾರ ಕಳೆದ‌ 24ಗಂಟೆಗಳಲ್ಲಿ ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ(Temple Hundi) ಅಧಿಕ ಪ್ರಮಾಣದ ಆದಾಯ‌ ಸಂಗ್ರಹವಾಗಿದೆ. ಕೇವಲ 24 ಗಂಟೆಗಳಲ್ಲಿ 2.76 ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 18153 ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ 7873 ಭಕ್ತರು ತಿರುಮಲದ‌ ಬಾಲಾಜಿ ದೇವಾಲಯದಲ್ಲಿ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

ಕಳೆದ ಬಾರಿ ಅಂದರೆ ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿನ ಲಾಕ್​ಡೌನ್​ಗೂ ಮುನ್ನ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ 800 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ನಂತರ ಅಂದರೆ ಮೊದಲ ಕೊರೊನಾ ಅಲೆಯ ಅನ್​ಲಾಕ್​ ಬಳಿಕ (ಜೂನ್ 2020 ರಲ್ಲಿ )ಕೊವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹಲವಾರು ನಿರ್ಬಂಧಗಳೊಂದಿಗೆ ಈ ದೇವಾಲಯವನ್ನು ತೆರೆಯಲಾಯಿತು. ಅದರಂತೆ ಟಿಕೆಟ್ ಸಂಗ್ರಹಣೆ, ಪ್ರಸಾದಗಳ ಮಾರಾಟ, ವಸತಿ ಸೌಕರ್ಯಗಳು ಮತ್ತು ಹುಂಡಿ ಸಂಗ್ರಹಗಳು ಸೇರಿದಂತೆ ಒಟ್ಟಾರೆ ಆದಾಯದ ಮೇಲೆ ಪರಿಣಾಮ ಬೀರಿತು. ಆ ಪ್ರಕಾರ 100-150 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

ಕೊವಿಡ್​ಗೂ ಮುನ್ನ60,000ದಿಂದ ಒಂದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಸರಾಸರಿ ಹುಂಡಿ ಸಂಗ್ರಹವು ಪ್ರತಿದಿನ ಸುಮಾರು 3.5 ರಿಂದ 5 ಕೋಟಿ ರೂಪಾಯಿವರೆಗೆ ಸಂಗ್ರಹವಾಗುತ್ತಿತ್ತು. ಮೊದಲನೇ ಅಲೆಯ ಲಾಕ್​ಡೌನ್​ ಮುಗಿದ ನಂತರ ಹಂತ ಹಂತವಾಗಿ ಹುಂಡಿ ಆದಾಯ ಹೆಚ್ಚಾಗಿದ್ದು, ಜೂನ್‌ನಲ್ಲಿ ದೇವಾಲಯಕ್ಕೆ 1.1 ಕೋಟಿ ರೂಪಾಯಿ, ಜುಲೈ 16.69 ಕೋಟಿ ರೂಪಾಯಿ, ಆಗಸ್ಟ್ 18.43 ಕೋಟಿ ರೂಪಾಯಿ, ಸೆಪ್ಟೆಂಬರ್ 32.04 ಕೋಟಿ ರೂಪಾಯಿ, ಅಕ್ಟೋಬರ್ 47.52 ಕೋಟಿ ರೂಪಾಯಿ, ನವೆಂಬರ್ 61.29 ಕೋಟಿ ರೂಪಾಯಿ, ಡಿಸೆಂಬರ್ 79.64 ಕೋಟಿ ರೂಪಾಯಿ ಸಂಗ್ರಹವಾಗಿದೆ.

ದೇಶಾದ್ಯಂತ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆ, ತಿರುಮಲದ ಬಾಲಾಜಿ ದೇವಸ್ಥಾನದ ಹುಂಡಿ ಹಣದ ಸಂಗ್ರಹವು 2021ರ ಜನವರಿಯಲ್ಲಿ 83.92 ಕೋಟಿ ರೂಪಾಯಿ ಮತ್ತು ಫೆಬ್ರವರಿಯಲ್ಲಿ 90.45 ಕೋಟಿ ರೂಪಾಯಿ, ಮಾರ್ಚ್ ಹುಂಡಿ ಸಂಗ್ರಹವು 12 ತಿಂಗಳಲ್ಲಿ ಮೊದಲ ಬಾರಿಗೆ 100 ಕೋಟಿ ಗಡಿ ದಾಟಿತು ಮತ್ತು ಆ ಮೂಲಕ 104.42 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗಿತ್ತು. ಆದರೆ ಮತ್ತೆ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಪುನಃ ಈಗ ಅನ್​ಲಾಕ್​ ಆಗಿ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

ಇದನ್ನೂ ಓದಿ: ತಿರುಪತಿಯಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹ; ಅನ್​ಲಾಕ್​ ನಂತರ ತಿಮ್ಮಪ್ಪನ ಸನ್ನಿಧಿಗೆ ಹರಿದುಬಂತು ಭಕ್ತಸಾಗರ

Male Mahadeshwara Temple: ಏಳು ಮಲೆ ಮಾದಪ್ಪನ ಹುಂಡಿಯಲ್ಲಿ ರೂ 2.33 ಕೋಟಿ ಸಂಗ್ರಹ

Follow Us
TV9 Web
TV9 Web

TV9 Kannada

Read More
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಅಂಬೇಡ್ಕರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ!
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ  ಹಿರಿಯ ಪತ್ರಕರ್ತನಿಗೆ ಸಿಸಿಬಿ ಗ್ರಿಲ್​​
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕೆಎಸ್ಒಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ಮಾಸ್ ಕಾಪಿ!
ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ
ಕರ್ನಾಟಕ ಸ್ಟಿಂಗ್ ಸಮರ ಹೈಕಮಾಂಡ್ ಅಂಗಳಕ್ಕೆ
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್