ಏಪ್ರಿಲ್​-ಮೇ ತಿಂಗಳಿನಲ್ಲಿ ಪ್ರಯಾಣಿಕರ ದಟ್ಟಣೆ ಕುಸಿತ; ಸಾಮಾನ್ಯ ರೈಲುಗಳು ಬಹುತೇಕ ಅರ್ಧದಷ್ಟು ಕಡಿಮೆ

|

Updated on: May 30, 2021 | 10:21 AM

ಈ ವರ್ಷದ ಮೇ ತಿಂಗಳಿನಲ್ಲಿ ಇದುವರೆಗೆ 1.76 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಕೈಗೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜನರ ಸಂಚಾರ ಕಡಿಮೆಯಾಗುವುದರ ಮೂಲಕ ರೈಲಿನಲ್ಲಿ ಪ್ರಯಾಣ ಕೈಗೊಳ್ಳುವ ಬೇಡಿಕೆ ಕಡಿಮೆ ಆದ್ದರಿಂದ ರೈಲುಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡು ಬಂದಿದೆ.

ಏಪ್ರಿಲ್​-ಮೇ ತಿಂಗಳಿನಲ್ಲಿ ಪ್ರಯಾಣಿಕರ ದಟ್ಟಣೆ ಕುಸಿತ; ಸಾಮಾನ್ಯ ರೈಲುಗಳು ಬಹುತೇಕ ಅರ್ಧದಷ್ಟು ಕಡಿಮೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಿಸುತ್ತಿದ್ದಂತೆಯೇ ಅನಗತ್ಯ ಸಂಚಾರ ಕಡಿಮೆ ಆಯಿತು. ಅದರಲ್ಲಿರೂ ರೈಲುಗಳಲ್ಲಿ ಜನರ ಓಡಾಟ ಕಡಿಮೆಯಾಗುತ್ತಾ ಸಾಗಿತು. ಈ ವರ್ಷ ಏಪ್ರಿಲ್​ ತಿಂಗಳಿನಲ್ಲಿ ಸುಮಾರು 3.27 ಕೋಟಿ ಜನರು ರೈಲಿನ ಮೂಲಕ ದೂರದ ಪ್ರಯಾಣವನ್ನು ಕೈಗೊಂಡಿದ್ದಾರೆ. ಅದೇ ಕಳೆದ 2019 ನೇ ವರ್ಷದ ಏಪ್ರಿಲ್​ ತಿಂಗಳಿನಲ್ಲಿ ಸರಿಸುಮಾರು 30 ಕೋಟಿ ಜನರು ರೈಲಿನಲ್ಲಿ ಪ್ರಯಾಣ ಕೈಗೊಂಡಿದ್ದರು.

ಈ ವರ್ಷದ ಮೇ ತಿಂಗಳಿನಲ್ಲಿ ಇದುವರೆಗೆ 1.76 ಕೋಟಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣ ಕೈಗೊಂಡಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜನರ ಸಂಚಾರ ಕಡಿಮೆಯಾಗುವುದರ ಮೂಲಕ ರೈಲಿನಲ್ಲಿ ಪ್ರಯಾಣ ಕೈಗೊಳ್ಳುವ ಬೇಡಿಕೆ ಕಡಿಮೆ ಆದ್ದರಿಂದ ರೈಲುಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡು ಬಂದಿದೆ. ಸಾಮಾನ್ಯವಾಗಿ 1,500 ರೈಲುಗಳು ಸಂಚರಿಸುತ್ತಿದ್ದು, ಇದೀಗ 865ಕ್ಕೆ ಇಳಿಕೆ ಮಾಡಲಾಗಿದೆ.

ಸಾಂಕ್ರಾಮಿಕ ಸಮಯದ 2020ರ ಆರಂಭದಲ್ಲಿ ಪ್ರತಿದಿನ 1,768 ರೈಲುಗಳು ಸಂಚಾರ ಕೈಗೊಳ್ಳುತ್ತಿದ್ದವು. ದೆಹಲಿ, ಮಹಾರಾಷ್ಟ್ರ ಮತ್ತು ಗುಜರಾತ್​ನಂತಹ ಕೈಗಾರಿಕಾ ಕೆಂದ್ರಗಳಿಗೆ ವಿಶೇಷ ರೈಲು ಸಂಚಾರವನ್ನು ರೂಪಿಸಲಾಗಿತ್ತು. ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್​ ಮತ್ತು ಒಡಿಶಾದ ವಲಸಿಗರು ಪುನಃ ತಮ್ಮ ಊರುಗಳಿಗೆ ರೈಲುಗಳ ಮೂಲಕವಾಗಿ ಮರಳಿದ್ದರು.

ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್​ ತಿಂಗಳಿನಿಂದ ರೈಲುಗಳಲ್ಲಿ ಸಂಚರಿಸುವವರ ಪ್ರಯಾಣಿಕರ ಸಂಖ್ಯೆ ಕುಸಿಯಲು ಪ್ರಾರಂಭಿಸಿದವು. ಏಪ್ರಿಲ್​ 1ರಿಂದ ಸುಮಾರು 2.72 ಕೋಟಿ ಜನರು ದೂರದ ಪ್ರಯಾಣ ರೈಲುಗಳಲ್ಲಿ ಸಂಚರಿಸಿದ್ದಾರೆ. ಹಾಗೂ ಎಸಿ ಅಲ್ಲದ ಸ್ಲೀಪರ್​ಗಳಲ್ಲಿ ಸುಮಾರು 1.65 ಕೋಟಿ ಜನರು ಪ್ರಯಾಣ ಕೈಗೊಂಡಿದ್ದಾರೆ. 2019-20ರ ಸಮಯದಲ್ಲಿ ಸುಮಾರು 800 ಕೋಟಿ ಪ್ರಯಾಣಿಕರು ದೂರ ಸಂಚಾರವನ್ನು ರೈಲುಗಳಲ್ಲಿ ಪ್ರಯಾಣಿಸಿದ್ದರು. ಆದರೀಗ 2020-2021ರಲ್ಲಿ 122 ಕೋಟಿ ಪ್ರಯಾಣಿಕರು ಸಂಚಾರ ಕೈಗೊಂಡಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ರೈಲುಗಳ ಸೇವೆಗಳನ್ನು ಸ್ಥಗಿತಗೊಳಿಸುವುದರ ಬದಲಾಗಿ ವಿಶೇಷ ರೈಲುಗಳ ಸಂಚಾರದ ಪ್ರಾರಂಭವು ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣ ಕೈಗೊಳ್ಳುವವರಿಗೆ  ಮನೆಗೆ ಮರಳಲು ಸಹಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೊರೊನಾ ಸೋಕಿನ ಎರಡನೇ ಅಲೆಯು ಪರಿಸ್ಥಿತಿಯನ್ನು ಬದಲಾಯಿಸಿತು. ನಾಗರಿಕರಿಗೆ ಯಾವುದೇ ಅಗತ್ಯ ಕಾರಣಗಳಿಂದಾಗಿ ಭಾರತದ ಯಾವುದೇ ಭಾಗಕ್ಕೆ ಸಂಚರಿಸಲು ಅದರಲ್ಲಿಯೂ ಬಹುಬೇಗ ಪ್ರಯಾಣ ಕೈಗೊಳ್ಳಲು ಸಹಾಯವಾಗುತ್ತದೆ’ ಎಂದು ರೈಲ್ವೆ ಸಚಿವಾಲಯ ವಕ್ತಾರ ಡಿಜೆ ನರೈನ್​ ಹೇಳಿದರು.

ಇದನ್ನೂ ಓದಿ: 

Cyclone Yaas ಯಾಸ್ ಚಂಡಮಾರುತದಿಂದಾಗಿ 25 ರೈಲು ರದ್ದುಗೊಳಿಸಿದ ಪೂರ್ವ ರೈಲ್ವೆ

ಹಾಸನದಲ್ಲಿ ರೈಲಿಗೆ ಸಿಲುಕಿ ಕಾಡಾನೆ ಸಾವು; ರಾತ್ರೋ ರಾತ್ರಿ ತೆರವು ಕಾರ್ಯಾಚರಣೆ ನಡೆಸಿದ ರೈಲ್ವೆ ಇಲಾಖೆ

Published On - 10:12 am, Sun, 30 May 21