Viral News: ಫಸ್ಟ್​​​ ನೈಟ್​​​ ನಡೆಯುವುದಕ್ಕೂ ಮುನ್ನ, ಶೋಭನದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಶೋಭನದ ಕೋಣೆಯಲ್ಲಿದ್ದ ವರ ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರಿಸಿಲ್ಲ. ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆಗ ವಧು ಮಾಹಿತಿಯನ್ನು ಮನೆಯವರಿಗೆ ಮಾಹಿತಿ ತಿಳಿಸಿದ್ದಾಳೆ. ಎಲ್ಲರೂ ಅಲ್ಲಿಗೆ ಬಂದು ನೋಡಿದಾಗ

Viral News: ಫಸ್ಟ್​​​ ನೈಟ್​​​ ನಡೆಯುವುದಕ್ಕೂ ಮುನ್ನ, ಶೋಭನದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ
ಶೋಭನದ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ
Image Credit source: amarujala.com
ಸಾಧು ಶ್ರೀನಾಥ್​

Updated on: Jun 02, 2023 | 3:32 PM

ಅದು ಮೊದಲ ರಾತ್ರಿಯ ಸುಸಂದರ್ಭ (First Night), ಕುಟುಂಬ ಸದಸ್ಯರು ನವ ವಧುವನ್ನು ಹಾಲಿನ ಲೋಟದೊಂದಿಗೆ ಶೋಭನದ ಕೋಣೆಗೆ ಸಿಂಗಾರಗೊಂಡ ನವ ವಧುವನ್ನು ಕಳುಹಿಸುತ್ತಾರೆ. ಸೀನ್​​ ಕಟ್ ಮಾಡಿದರೆ.. ಎಷ್ಟು ಬಾರಿ ಬಾಗಿಲು ತಟ್ಟಿದರೂ.. ವರ ಮಹಾಶಯ (bridegroom) ಇರುವ ಕೊಠಡಿಯ ಒಳಗಿಂದ ಪ್ರತಿಕ್ರಿಯೆ ಎಂಬುದೇ ಇಲ್ಲ. ಕೂಡಲೇ ಸಂಬಂಧಿಕರಿಗೆ ವಿಷಯ ಮುಟ್ಟಿಸುತ್ತಾಳೆ ನವ ವಧು. ಉಳಿದವರೆಲ್ಲಾ ಓಡೋಡಿಬಂದು ನೋಡಿದಾಗ.. ಎದುರಿಗಿದ್ದ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ (Tragedy). ನಿಜವಾಗಿ ಏನಾಯಿತು ಅಂದರೆ…

ಉತ್ತರ ಪ್ರದೇಶದ (Uttar pradesh) ಕನೌಜ್ ಜಿಲ್ಲೆಯ ಮಚರಿಯಾ ಗ್ರಾಮದ ಮನೋಜ್ ಯಾದವ್ ಎಂಬ ಯುವಕ ಮೇ 26 ರಂದು ಗೋಲ್ಡ್ ಎಂಬ ಯುವತಿಯನ್ನು ವಿವಾಹವಾದರು. ಮೇ 28ರಂದು ಕುಟುಂಬಸ್ಥರು ಶೋಭನಕ್ಕೆ ಶುಭ ಮುಹೂರ್ತ ನಿಗದಿ ಮಾಡಿದ್ದಾರೆ. ಸಂಪ್ರದಾಯದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬ ಸದಸ್ಯರು ರಾತ್ರಿ 10 ಗಂಟೆ ಸುಮಾರಿಗೆ ವಧುವನ್ನು ಶೋಭನದ ಕೋಣೆಗೆ ಕಳುಹಿಸಿದ್ದಾರೆ.

Also Read:  ರಸ್ತೆಯಲ್ಲಿ ದಿಢೀರನೆ ಕಾರು ನಿಲ್ಲಿಸಿ, ಏಕಾಏಕಿ ಬಾಗಿಲು ತೆರೆದ ಚಾಲಕ: ಪಕ್ಕದಲ್ಲಿಯೇ ಬೈಕ್ ಮೇಲೆ ಹೋಗುತ್ತಿದ್ದ ಮಗು… ಬಾರದ ಲೋಕಕ್ಕೆ ಪಯಣ

ಆದರೆ ಕೋಣೆಯಲ್ಲಿರುವ ವರ ಎಷ್ಟು ಬಾರಿ ಬಾಗಿಲು ಬಡಿದರೂ ಉತ್ತರಿಸಿಲ್ಲ. ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಇದರೊಂದಿಗೆ ವಧು ಮನೆಯವರಿಗೆ ಮಾಹಿತಿ ತಿಳಿಸಿದ್ದಾಳೆ. ಅಲ್ಲಿಗೆ ಬಂದಾಗ ವರ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಾಣುತ್ತದೆ. ಇದರಿಂದ ಇಡೀ ಕುಟುಂಬ ದುರಂತದ ಶಾಕ್​​ ತುತ್ತಾಗುತ್ತದೆ. ಅಸಲಿಗೆ ವರನ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:13 pm, Fri, 2 June 23

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us