
ಒಡಿಶಾ, ಜನವರಿ 01: ಅಂದು ಆ ಕತ್ತಲೆಯ ಕಾಡಿನಲ್ಲಿದ್ದಿದ್ದು ಮೂವರಷ್ಟೇ. ತಂದೆ ಶವವಾಗಿ ಬಿದ್ದಿದ್ದರೆ, ತಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಯಾವುದೂ ಸಹಜವಾಗಿರಲಿಲ್ಲ. ಮಗನ ಎದುರೇ ಇಬ್ಬರೂ ವಿಷ ಸೇವಿಸಿದ್ದರು. ಈ ಘಟನೆ ಒಡಿಶಾದಲ್ಲಿ ನಡೆದಿದೆ. ಸತ್ತ ತಂದೆ ಮತ್ತು ವಿಷ ಸೇವಿಸಿ ಪ್ರಜ್ಞಾಹೀನಳಾಗಿ ಬಿದ್ದಿದ್ದ ತಾಯಿಯ ಪಕ್ಕದಲ್ಲಿ ಐದು ವರ್ಷದ ಬಾಲಕ ಕುಳಿತು ಇಡೀ ರಾತ್ರಿ ಕಳೆದಿದ್ದ. ಇರಲು ಮನೆ ಇರಲಿಲ್ಲ, ಏನು ನಡೆಯುತ್ತಿದೆ ಎನ್ನುವ ಅರಿವು ಇರಲಿಲ್ಲ.
ಪೊಲೀಸರ ವರದಿ ಪ್ರಕಾರ, ಬಾಲಕನ ಪೋಷಕರು ದುಷ್ಮಂತ್ ಮಾಝಿ ಮತ್ತು ಅವರ ಪತ್ನಿ ರಿಂಕಿ ಮಾಝಿ ಎಂದು ಗುರುತಿಸಲಾಗಿದೆ. ರಿಂಕಿಯ ಪೋಷಕರ ಮನೆಗೆ ಹೋಗಿ ತಮ್ಮ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅವರ ನಡುವೆ ಜಗಳ ನಡೆದಿತ್ತು.
ಪ್ರಯಾಣದ ಸಮಯದಲ್ಲಿ, ಅವರು ಮೋಟಾರ್ ಸೈಕಲ್ ಅನ್ನು ರಸ್ತೆಬದಿಯ ಬಳಿ ನಿಲ್ಲಿಸಿ ಸುಮಾರು ಒಂದು ಕಿಲೋಮೀಟರ್ ನಡೆದು ಹತ್ತಿರದ ಕಾಡಿಗೆ ಹೋದರು. ಅಲ್ಲಿ ದಂಪತಿ ಕೀಟನಾಶಕ ಎಂದು ನಂಬಲಾದ ವಿಷಕಾರಿ ವಸ್ತುವನ್ನು ಸೇವಿಸಿದರು.
ಸುಮಾರು ಒಂದು ಗಂಟೆಯೊಳಗೆ, ದುಷ್ಮಂತ್ ವಿಷ ಸೇವಿಸಿ ಸಾವನ್ನಪ್ಪಿದರೆ, ಅವರ ಪತ್ನಿ ರಿಂಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಪೋಷಕರು ತಮ್ಮ ಚಿಕ್ಕ ಮಗನಿಗೂ ವಿಷ ನೀಡಿದ್ದರೂ, ಅವನು ಹೇಗೋ ಬದುಕುಳಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಡಿನಲ್ಲಿ ತನ್ನ ಹೆತ್ತವರ ಪಕ್ಕದಲ್ಲಿ ಒಂಟಿಯಾಗಿ ಕುಳಿತು ಬಾಲಕ ಇಡೀ ರಾತ್ರಿ ಕಳೆದಿದ್ದ. ಕತ್ತಲೆ ಮತ್ತು ಚಳಿಯಲ್ಲಿ, ಅವನು ತನ್ನ ತಂದೆಯ ದೇಹ ಮತ್ತು ಪ್ರಜ್ಞಾಹೀನ ತಾಯಿಯ ಹತ್ತಿರವೇ ಇದ್ದ, ಅವರನ್ನು ಅಲುಗಾಡಿಸಲು ಅಥವಾ ಸಹಾಯಕ್ಕಾಗಿ ಕರೆಯಲು ಸಾಧ್ಯವಾಗಲಿಲ್ಲ. ಬೆಳಗ್ಗೆ, ಧೈರ್ಯಶಾಲಿ ಪುಟ್ಟ ಬಾಲಕ ಕಾಡಿನಿಂದ ಹೊರಬಂದು ಹತ್ತಿರದ ರಸ್ತೆಗೆ ನಡೆದು ಹೋಗಿ ಸಹಾಯ ಪಡೆಯಲು ಮುಂದಾಗಿದ್ದ, ಸ್ಥಳೀಯರಿಗೆ ಭಯಾನಕ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾನೆ.
ಮತ್ತಷ್ಟು ಓದಿ: ರೈಲ್ವೆಯ ನಿವೃತ್ತ ಉದ್ಯೋಗಿ ಸಾವು, ಮಗಳ ದೇಹದಲ್ಲಿ ಮಾಂಸವೇ ಇಲ್ಲ, ಕೇರ್ ಟೇಕರ್ ಆಗಿ ನೇಮಕಗೊಂಡಿದ್ದವರು ಮಾಡಿದ್ದೇನು?
ಸ್ಥಳೀಯರು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದರು. ಮಗು, ಅವನ ತಾಯಿ ಮತ್ತು ಅವನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುಃಖಕರವೆಂದರೆ, ರಿಂಕಿ ಮಾಝಿ ಅಂಗುಲ್ ಜಿಲ್ಲೆಯ ಛೇಂಡಿಪಾಡ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ವಿಷ ನೀಡಲಾಗಿದ್ದರೂ, ಮಗು ಬದುಕುಳಿದಿದ್ದು, ವೈದ್ಯಕೀಯ ಆರೈಕೆಯ ನಂತರ ಸ್ಥಿರವಾಗಿದೆ ಎಂದು ವರದಿಯಾಗಿದೆ.
ನಂತರ ಹೆಚ್ಚಿನ ಆರೈಕೆಗಾಗಿ ಅವನನ್ನು ಅವನ ಅಜ್ಜಿಯರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ವರ್ಷದ ಮಕ್ಕಳು ಕತ್ತಲೆಗೆ ಹೆದರುತ್ತಾರೆಂದು ಭಾವಿಸಲಾಗುತ್ತದೆ ಮತ್ತು ಈ ಮುಗ್ಧ ಹುಡುಗ ಇಡೀ ರಾತ್ರಿ ಕತ್ತಲ ಕಾಡಿನಲ್ಲಿಯೇ ಇದ್ದು ಜಯಿಸಿ ಬಂದಿದ್ದ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ