AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆಯ ನಿವೃತ್ತ ಉದ್ಯೋಗಿ ಸಾವು, ಮಗಳ ದೇಹದಲ್ಲಿ ಮಾಂಸವೇ ಇಲ್ಲ, ಕೇರ್​ ಟೇಕರ್ ಆಗಿ ನೇಮಕಗೊಂಡಿದ್ದವರು ಮಾಡಿದ್ದೇನು?

ಮಹೋಬಾದಲ್ಲಿ ಹೃದಯ ಕಲಕುವ ಘಟನೆ. ನಿವೃತ್ತ ರೈಲ್ವೆ ಉದ್ಯೋಗಿ ಓಂಪ್ರಕಾಶ್ ಮತ್ತು ಮಾನಸಿಕ ಅಸ್ವಸ್ಥ ಮಗಳನ್ನು ಆರೈಕೆದಾರರು ಸುಮಾರು ಐದು ವರ್ಷಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ. ನಿರ್ಲಕ್ಷ್ಯದಿಂದ ಓಂಪ್ರಕಾಶ್ ಸಾವನ್ನಪ್ಪಿದ್ದು, ಮಗಳು ರಶ್ಮಿ ಅಸ್ಥಿಪಂಜರದಂತೆ ಪತ್ತೆಯಾಗಿದ್ದಾಳೆ. ಕುಟುಂಬ ನ್ಯಾಯಕ್ಕೆ ಒತ್ತಾಯಿಸಿದೆ. ಈ ದೌರ್ಜನ್ಯ ಸಮಾಜಕ್ಕೆ ಕನ್ನಡಿ ಹಿಡಿದಿದೆ

ರೈಲ್ವೆಯ ನಿವೃತ್ತ ಉದ್ಯೋಗಿ ಸಾವು, ಮಗಳ ದೇಹದಲ್ಲಿ ಮಾಂಸವೇ ಇಲ್ಲ, ಕೇರ್​ ಟೇಕರ್ ಆಗಿ ನೇಮಕಗೊಂಡಿದ್ದವರು ಮಾಡಿದ್ದೇನು?
ಓಂಪ್ರಕಾಶ್
ನಯನಾ ರಾಜೀವ್
|

Updated on: Dec 30, 2025 | 8:44 AM

Share

ಮಹೋಬಾ, ಡಿಸೆಂಬರ್ 30: ಕೆಲವು ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಮಗಳು ಮಾನಸಿಕ ಅಸ್ವಸ್ಥೆ, ಏನು ಮಾಡಬೇಕೆಂದು ತೋಚದೆ ರೈಲ್ವೆಯ ನಿವೃತ್ತ ಉದ್ಯೋಗಿ ಕೇರ್ ಟೇಕರ್ ನೇಮಿಸಿಕೊಂಡಿದ್ದರು. ಅವರು ಆರೈಕೆದಾರರಾಗಿರಲಿಲ್ಲ, ಬದಲಾಗಿ ಪ್ರಾಣವನ್ನೇ ತೆಗೆಯುವ ಹಂತಕರಾಗಿದ್ದರು.

ಸುಮಾರು ಐದು ವರ್ಷಗಳ ಕಾಲ ಕೇರ್ ಟೇಕರ್ ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರು. ಹೀಗಾಗಿ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವರ ಮಗಳ ಸ್ಥಿತಿ ಚಿಂತಾಜನಕವಾಗಿದೆ. ಮಗಳ ದೇಹದಲ್ಲಿ ಒಂದಿಷ್ಟು ಮಾಂಸವೂ ಇಲ್ಲದೆ ನಿತ್ರಾಣಳಾಗಿದ್ದಾಳೆ. ಓಂಪ್ರಕಾಶ್ ಸಿಂಗ್ ರಾಥೋಡ್ (70), ಭಾರತೀಯ ರೈಲ್ವೆಯಲ್ಲಿ ಮಾಜಿ ಹಿರಿಯ ಗುಮಾಸ್ತರಾಗಿದ್ದರು.

2016 ರಲ್ಲಿ ಅವರ ಪತ್ನಿ ನಿಧನರಾದ ನಂತರ, ಓಂಪ್ರಕಾಶ್ ಮಾನಸಿಕ ಅಸ್ವಸ್ಥೆಯಾಗಿದ್ದ 27 ವರ್ಷದ ಮಗಳು ರಶ್ಮಿಯೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ಮನೆಯನ್ನು ನಿರ್ವಹಿಸಲು, ಕುಟುಂಬವು ರಾಮ್ ಪ್ರಕಾಶ್ ಕುಶ್ವಾಹ ಮತ್ತು ಅವರ ಪತ್ನಿ ರಾಮದೇವಿ ಎಂಬ ದಂಪತಿಗಳನ್ನು ಆರೈಕೆದಾರರನ್ನಾಗಿ ನೇಮಿಸಿಕೊಂಡಿತು.

ಮತ್ತಷ್ಟು ಓದಿ:ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು

ಮನೆಯ ಉಸ್ತುವಾರಿಗಳು ಕ್ರಮೇಣ ಮನೆಯ ಸಂಪೂರ್ಣ ನಿಯಂತ್ರಣವನ್ನು ಪಡೆದರು. ಆ ದಂಪತಿ ಓಂಪ್ರಕಾಶ್ ಮತ್ತು ರಶ್ಮಿ ಅವರನ್ನು ನೆಲ ಮಹಡಿಯ ಕೋಣೆಗಳಲ್ಲಿ ಬಂಧಿಸಿ, ಮೇಲಿನ ಭಾಗವನ್ನು ತಾವೇ ಆಕ್ರಮಿಸಿಕೊಂಡು ಆರಾಮವಾಗಿ ವಾಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಓಂಪ್ರಕಾಶ್ ಸಾವಿನ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ ನಂತರ ಸೋಮವಾರ ಈ ದೌರ್ಜನ್ಯ ಬೆಳಕಿಗೆ ಬಂದಿತು. ಸಂಬಂಧಿಕರು ಮನೆಗೆ ತಲುಪಿದಾಗ, ಅವರಿಗೆ ಆತಂಕಕಾರಿ ದೃಶ್ಯಗಳು ಎದುರಾಗಿದ್ದವು. ಓಂಪ್ರಕಾಶ್ ಅವರ ದೇಹವು ಅತ್ಯಂತ ದುರ್ಬಲವಾಗಿದ್ದು, ದೀರ್ಘಕಾಲದ ನಿರ್ಲಕ್ಷ್ಯದ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವಿವರಿಸಲಾಗಿದೆ. ರಶ್ಮಿ ಕತ್ತಲೆಯ ಕೋಣೆಯಲ್ಲಿ ಬೆತ್ತಲೆಯಾಗಿ, ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಹಸಿವಿನಿಂದಾಗಿ ರಶ್ಮಿ ಅಸ್ಥಿಪಂಜರದ ಸ್ಥಿತಿಗೆ ತಲುಪಿದ್ದಾಳೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆಕೆಯ ದೇಹದಲ್ಲಿ ಯಾವುದೇ ಮಾಂಸ ಉಳಿದಿರಲಿಲ್ಲ ಕೇವಲ ಒಂದು ಅಸ್ಥಿಪಂಜರದ ಚೌಕಟ್ಟು ಮಾತ್ರ ಉಳಿದಿತ್ತು. ಓಂಪ್ರಕಾಶ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಘಟನೆಯಿಂದ ತಾವು ದಿಗ್ಭ್ರಮೆಗೊಂಡಿದ್ದೇವೆ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಓಂಪ್ರಕಾಶ್ ಅವರನ್ನು ಒಳ್ಳೆಯ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತಾರೆ. ರಶ್ಮಿ ಈಗ ಕುಟುಂಬ ಸದಸ್ಯರ ಆರೈಕೆಯಲ್ಲಿದ್ದಾರೆ, ಅವರು ಇದಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ