ಪಲ್ವಾನ್(Palwan) ಹಾಗೂ ಮಥುರಾ(Mathura) ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ, ಇನ್ನೂ ಕೆಲವು ರೈಲುಗಳು ವಿಳಂಬವಾಗಲಿವೆ ಎಂದು ಭಾರತೀಯ ರೈಲ್ವೆ(Indian Railways) ತಿಳಿಸಿದೆ. ದೆಹಲಿ ಹಾಗೂ ಕೇರಳ ಮಾರ್ಗದಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಈ ರೈಲುಗಳು ಉತ್ತರ ಪ್ರದೇಶದ ಮಥುರಾ ಜಂಕ್ಷನ್ ರೈಲು ನಿಲ್ದಾಣ ಹಾಗೂ ನವೆಂಬರ್ 27 ರಿಂದ ಮಾರ್ಚ್ ವರೆಗೆ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಪಲ್ವಾಲ್-ಮಥುರಾ ಮೂಲಕ ಹಾದು ಹೋಗುತ್ತಿವೆ.
ಈ ಕಾರಣದಿಂದಾಗಿ, ಕೇರಳ ಎಕ್ಸ್‌ಪ್ರೆಸ್ ಸೇರಿದಂತೆ ಕೇರಳ ಮತ್ತು ನವದೆಹಲಿ ನಡುವಿನ ಕೆಲವು ಪ್ರಮುಖ ರೈಲುಗಳ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳನ್ನು ಬೇರೆ ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಇದಲ್ಲದೆ, ಕೆಲವು ರೈಲುಗಳು 40 ನಿಮಿಷದಿಂದ ಒಂದು ಗಂಟೆ ತಡವಾಗಿ ಬರಲಿವೆ ಎಂದು ರೈಲ್ವೆ ಮಾಹಿತಿ ನೀಡಿದೆ.
ರದ್ದುಗೊಂಡ ರೈಲುಗಳ ಸಂಪೂರ್ಣ ಪಟ್ಟಿ
12283 ಎರ್ನಾಕುಲಂ – ನಿಜಾಮುದ್ದೀನ್ ದುರಂತೋ ಎಕ್ಸ್‌ಪ್ರೆಸ್ (ಜನವರಿ 16, 23 ಮತ್ತು 30; ಫೆಬ್ರವರಿ 6)
12284 ನಿಜಾಮುದ್ದೀನ್ – ಎರ್ನಾಕುಲಂ ದುರಂತೋ (ಜನವರಿ 13, 20 ಮತ್ತು 27; ಫೆಬ್ರವರಿ 7)
12483 ಕೊಚುವೇಲಿ – ಅಮೃತಸರ ಸೂಪರ್‌ಫಾಸ್ಟ್ (ಜನವರಿ 17, 24 ಮತ್ತು 31; ಫೆಬ್ರವರಿ 7)
12484 ಅಮೃತಸರ – ಕೊಚುವೇಲಿ ಸೂಪರ್‌ಫಾಸ್ಟ್ (ಜನವರಿ 14, 21 ಮತ್ತು 28; ಫೆಬ್ರವರಿ 4)
12625 ತಿರುವನಂತಪುರಂ – ನವದೆಹಲಿ ಕೇರಳ ಎಕ್ಸ್‌ಪ್ರೆಸ್ (ಜನವರಿ 27 ರಿಂದ ಫೆಬ್ರವರಿ 3)
12626 ನವದೆಹಲಿ – ತಿರುವನಂತಪುರಂ ಕೇರಳ ಎಕ್ಸ್‌ಪ್ರೆಸ್ (ಜನವರಿ 29 ರಿಂದ ಫೆಬ್ರವರಿ 2)
12643 ತಿರುವನಂತಪುರಂ – ನಿಜಾಮುದ್ದೀನ್ ಸ್ವರ್ಣ ಜಯಂತಿ (ಜನವರಿ 9, 16, 23 ಮತ್ತು 30)
12644 ನಿಜಾಮುದ್ದೀನ್ – ತಿರುವನಂತಪುರಂ ಸ್ವರ್ಣ ಜಯಂತಿ (ಜನವರಿ 12, 19 ಮತ್ತು 26; ಫೆಬ್ರವರಿ 2)
12645 ಎರ್ನಾಕುಲಂ – ನಿಜಾಮುದ್ದೀನ್ ಮಿಲೇನಿಯಮ್ ಸೂಪರ್‌ಫಾಸ್ಟ್ (ಜನವರಿ 6, 13, 20 ಮತ್ತು 27; ಫೆಬ್ರವರಿ 3)
12646 ನಿಜಾಮುದ್ದೀನ್ – ಎರ್ನಾಕುಲಂ ಮಿಲೇನಿಯಮ್ ಸೂಪರ್‌ಫಾಸ್ಟ್ (ಜನವರಿ 9, 16, 23 ಮತ್ತು 30; ಫೆಬ್ರವರಿ 6)
22653 ತಿರುವನಂತಪುರಂ – ನಿಜಾಮುದ್ದೀನ್ ಸೂಪರ್‌ಫಾಸ್ಟ್ (ಜನವರಿ 13, 20 ಮತ್ತು 27; ಫೆಬ್ರವರಿ 3
22654 ನಿಜಾಮುದ್ದೀನ್ – ತಿರುವನಂತಪುರಂ ಸೂಪರ್‌ಫಾಸ್ಟ್ (ಜನವರಿ 15, 22 ಮತ್ತು 29; ಫೆಬ್ರವರಿ 5)
22655 ಎರ್ನಾಕುಲಂ – ನಿಜಾಮುದ್ದೀನ್ ಸೂಪರ್‌ಫಾಸ್ಟ್ (ಜನವರಿ 10, 17, 24 ಮತ್ತು 31)
22656 ನಿಜಾಮುದ್ದೀನ್ – ಎರ್ನಾಕುಲಂ ಸೂಪರ್‌ಫಾಸ್ಟ್ (ಜನವರಿ 12, 19 ಮತ್ತು 26; ಫೆಬ್ರವರಿ 2)
22659 ಕೊಚುವೇಲಿ ಋಷಿಕೇಶ ಸೂಪರ್‌ಫಾಸ್ಟ್ (ಜನವರಿ 12, 19 ಮತ್ತು 26; ಫೆಬ್ರವರಿ 2)
22660 ರಿಷಿಕೇಶ – ಕೊಚುವೇಲಿ ಸೂಪರ್‌ಫಾಸ್ಟ್ (ಜನವರಿ 15, 22 ಮತ್ತು 29; ಫೆಬ್ರವರಿ 5)
ಈ ರೈಲುಗಳ ಮಾರ್ಗ ಬದಲು
22659 ಕೊಚುವೇಲಿ ರಿಷಿಕೇಶ ಸೂಪರ್‌ಫಾಸ್ಟ್ (ಡಿಸೆಂಬರ್ 29)
22660 ರಿಷಿಕೇಶ – ಕೊಚುವೇಲಿ ಸೂಪರ್‌ಫಾಸ್ಟ್ (ನವೆಂಬರ್ 27; ಜನವರಿ 1)
12617 ಎರ್ನಾಕುಲಂ – ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್ (ಜನವರಿ 1, ಫೆಬ್ರವರಿ 3)
12618 ನಿಜಾಮುದ್ದೀನ್ – ಎರ್ನಾಕುಲಂ ಮಂಗಳಾ ಎಕ್ಸ್‌ಪ್ರೆಸ್ (ಜನವರಿ 11, ಫೆಬ್ರವರಿ 5)
12217 ಕೊಚುವೇಲಿ – ಚಂಡೀಗಢ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಜನವರಿ 8, 13, 15, 20, 22, 27 ಮತ್ತು 29; ಫೆಬ್ರವರಿ 3)
12218 ಚಂಡೀಗಢ – ಕೊಚುವೇಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಡಿಸೆಂಬರ್ 23 – 27; ಜನವರಿ 3, 10, 12, 17, 19, 24, 26 ಮತ್ತು 31),ಫೆಬ್ರವರಿ 3.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ