ಗುಜರಾತ್: ಬಾಕಿ ಸಂಬಳವನ್ನು ಕೇಳಿದ್ದಕ್ಕೆ ದಲಿತ ಸಿಬ್ಬಂದಿ ಬಾಯಿಗೆ ಚಪ್ಪಲಿ ಹಾಕಿದ ಮಹಿಳಾ ಉದ್ಯಮಿ
ಬಾಕಿ ಸಂಬಳವನ್ನು ಕೊಡುವಂತೆ ಕೇಳಿದ್ದಕ್ಕೆ ಮಹಿಳಾ ಉದ್ಯಮಿಯೊಬ್ಬರು ಮಾಜಿ ಉದ್ಯೋಗಿಯೊಬ್ಬರ ಬಾಯಿಗೆ ಚಪ್ಪಲಿ ಹಾಕಿರುವ ಘಟನೆ ಗುಜರಾತ್ನ ಮಾರ್ಬಿಯಲ್ಲಿ ನಡೆದಿದೆ. ಬಾಕಿ ಹಣ ಕೊಡಿ ಎಂದಿದ್ದಕ್ಕೆ ದಲಿತ ಉದ್ಯೋಗಿಯ ಬಾಯಿಗೆ ಚಪ್ಪಲಿಯಿಟ್ಟು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ಇದೀಗ ಉದ್ಯಮಿ ವಿರುದ್ಧ ಪ್ರಕರಣ ದಾಖಲಾಗಿದೆ.

ನೀಲೇಶ್ ದಲ್ಸಾನಿಯಾ ಎಂಬುವವರು ವರ ಹಿರಿಯ ಸಹೋದರ ಮೆಹುಲ್ ಮತ್ತು ಅವರ ನೆರೆಯ ಭವೇಶ್ ಮಕ್ವಾನಾ ಅವರು ವಿಭೂತಿ ಪಟೇಲ್ ನಡೆಸುತ್ತಿರುವ ಖಾಸಗಿ ಸಂಸ್ಥೆಯಾದ ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (RIPL) ಕಚೇರಿಗೆ ಸುಮಾರು 7 ಗಂಟೆಗೆ ಹೋಗಿದ್ದಾರೆ.
ನೀಲೇಶ್ ಅವರು ಅಕ್ಟೋಬರ್‌ನಲ್ಲಿ ಆರ್‌ಐಪಿಎಲ್‌ನ ರಫ್ತು ವಿಭಾಗದಲ್ಲಿ ಕೆಲಸ ಮಾಡಿದ್ದರು 16 ದಿನಗಳ ಸಂಬಳವನ್ನು ಕೇಳಿದ್ದರು. ವಿಭೂತಿಯ ಸಹೋದರ ಎಂದು ಗುರುತಿಸಿಕೊಂಡ ಓಂ ಪಟೇಲ್, ನೀಲೇಶ್ ಮೇಲೆ ಹಲ್ಲೆ ನಡೆಸಿದ್ದಾನೆ.
ಮತ್ತಷ್ಟು ಓದಿ: ರಾಯಚೂರು: ಮಾರಕಾಸ್ತ್ರಗಳಿಂದ ಕೊಚ್ಚಿ, ಮುಂಗೈ ತುಂಡರಸಿ ದಲಿತ ಮುಖಂಡನ ಬರ್ಬರ ಹತ್ಯೆ
ವಿಭೂತಿ ಕಚೇರಿಯಲ್ಲಿ ಮ್ಯಾನೇಜರ್ ಆಗಿದ್ದ ಪರೀಕ್ಷಿತ್ ಪಟೇಲ್ ವಿಭೂತಿ ಮತ್ತು ಇತರ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ಆತನನ್ನು ಲಿಫ್ಟ್‌ಗೆ ಎಳೆದೊಯ್ದು, ವಾಣಿಜ್ಯ ಕಟ್ಟಡದ ಟೆರೇಸ್‌ಗೆ ಕರೆದೊಯ್ದು ಬೆಲ್ಟ್‌ನಿಂದ ಹೊಡೆದಿದ್ದಾರೆ ಮತ್ತು ಒದ್ದಿದ್ದಾರೆ ಎಂದಿದ್ದಾರೆ.
ವಿಭೂತಿ ಪಟೇಲ್ ಚಪ್ಪಲಿಯನ್ನು ಬಾಯಲ್ಲಿ ಹಿಡಿದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಒಂದೊಮ್ಮೆ ಧೈರ್ಯ ಮಾಡಿ ದೂರು ದಾಖಲಿಸಿದ್ದಲ್ಲಿ ಜೀವಂತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದರು.
ನೀಲೇಶ್ ಅವರನ್ನು ಅಮಾನವೀಯವಾಗಿ ಥಳಿಸಲಾಗಿದೆ, ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಫ್ಐಆರ್ ದಾಖಲಿಸಿದ್ದೇವೆ ಆರೋಪಿಯನ್ನು ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಮೊರ್ಬಿ ಪೊಲೀಸ್ ಉಪ ವರಿಷ್ಠಾಧಿಕಾರಿ ಪ್ರತಪಾಲ್ ಸಿನ್ಹ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ