Breaking ಪುಣೆಯಲ್ಲಿ ಭಾರತೀಯ ವಾಯುಪಡೆಯ ಲಘು ವಿಮಾನ ಪತನ, ಪೈಲಟ್​ಗೆ ಗಾಯ

| Updated By: ರಶ್ಮಿ ಕಲ್ಲಕಟ್ಟ

Updated on: Jul 25, 2022 | 2:15 PM

ಮಹಾರಾಷ್ಟ್ರದ ಪುಣೆಯಲ್ಲಿ ತರಬೇತಿ ನಿರತ ಲಘು ವಿಮಾನ ಪತನವಾಗಿದ್ದು ಸಣ್ಣಪುಟ್ಟ ಗಾಯಗಳಿಂದ ಮಹಿಳಾ ಪೈಲಟ್​ ಪಾರಾಗಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಲಘು ವಿಮಾನ ಪತನವಾಗಿತ್ತು.

Breaking ಪುಣೆಯಲ್ಲಿ ಭಾರತೀಯ ವಾಯುಪಡೆಯ ಲಘು ವಿಮಾನ ಪತನ, ಪೈಲಟ್​ಗೆ ಗಾಯ
ಪುಣೆಯಲ್ಲಿ ಲಘು ವಿಮಾನ ಪತನ
Follow us on

ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ ಭಾರತೀಯ ವಾಯುಪಡೆಯ ತರಬೇತು ನಿರತ  ಲಘು  ವಿಮಾನ ಪತನವಾಗಿದ್ದು ಪೈಲಟ್ ಗೆ ಗಾಯವಾಗಿದೆ. ವಿಮಾನದ ಮಹಿಳಾ ಪೈಲಟ್ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ​ ಪಾರಾಗಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಲಘು ವಿಮಾನ ಪತನವಾಗಿದೆ.  ಇಂದು  ಬೆಳಗ್ಗೆ   11.30ಕ್ಕೆ  ಪುಣೆಯ  ಇಂದಾಪುರ್ ತಾಲೂಕಿನ ಕದ್ಭನ್ ವಾಡಿ ಗ್ರಾಮದಲ್ಲಿನ ಹೊಲದಲ್ಲಿ ತರಬೇತು  ನಿರತ ವಿಮಾನ ಪತನವಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ. ಈ ಘಟನೆಯಲ್ಲಿ 22 ಹರೆಯದ ಮಹಿಳಾ ಪೈಲಟ್​​ಗೆ ಗಾಯಗಳಾಗಿವೆ.

Published On - 1:11 pm, Mon, 25 July 22