ರಾಜಸ್ಥಾನ: ಧಾನ್ಯ ಸಂಗ್ರಹಿಸುವ ಕಂಟೇನರ್​ನೊಳಗೆ ಸಿಲುಕಿ 5 ಮಕ್ಕಳು ಸಾವು

|

Updated on: Mar 22, 2021 | 2:04 PM

ಭಾನುವಾರ ಆಟವಾಡುತ್ತಿದ್ದ ಮಕ್ಕಳು ಕಂಟೇನರ್​ನೊಳಗೆ ನುಗ್ಗಿದ್ದು, ಅದರ ಬಾಗಿಲು ಮುಚ್ಚಿಕೊಂಡಿತ್ತು. ಮಕ್ಕಳಿಗೆ ಬಾಗಿಲು ತೆಗೆಯಲು ಸಾಧ್ಯವಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಜಸ್ಥಾನ: ಧಾನ್ಯ ಸಂಗ್ರಹಿಸುವ ಕಂಟೇನರ್​ನೊಳಗೆ ಸಿಲುಕಿ 5 ಮಕ್ಕಳು ಸಾವು
ರಾಜಸ್ಛಾನದ ಪೊಲೀಸ್
Follow us on

ಬಿಕಾನೇರ್: ರಾಜಸ್ಥಾನದ ಬಿಕಾನೇರ್​ನ ಹಿಮ್ಮತಸರ್ ಗ್ರಾಮದಲ್ಲಿ ಧಾನ್ಯ ಸಂಗ್ರಹಿಸುವ ಕಂಟೇನರ್​ನೊಳಗೆ ಸಿಲುಕಿದ 5 ಮಕ್ಕಳು ಉಸಿರುಗಟ್ಟಿ ಸಾವಿಗೀಡಾದ ಘಟನೆ ನಡೆದಿದೆ. ಭಾನುವಾರ ಆಟವಾಡುತ್ತಿದ್ದ ಮಕ್ಕಳು ಕಂಟೇನರ್​ನೊಳಗೆ ನುಗ್ಗಿದ್ದು, ಅದರ ಬಾಗಿಲು ಮುಚ್ಚಿಕೊಂಡಿತ್ತು. ಮಕ್ಕಳಿಗೆ ಬಾಗಿಲು ತೆಗೆಯಲು ಸಾಧ್ಯವಾಗದೆ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸೇವಾರಾಮ್ (4), ರವೀನಾ (7) , ರಾಧಾ (5), ಪೂನಂ(8) ಮತ್ತು ಮಾಲಿ ಎಂಬ ಮಕ್ಕಳು ಕಂಟೇನರ್ ನೊಳಗೆ ಸಿಲುಕಿದ್ದ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಪ್ರೀತಿ ಚಂದ್ರ ಹೇಳಿದ್ದಾರೆ.

ಈ ಮಕ್ಕಳ ಅಮ್ಮ ಮನೆಗೆ ಬಂದಾಗ ಮಕ್ಕಳು ಅಲ್ಲಿರಲಿಲ್ಲ. ಮಕ್ಕಳಿಗಾಗಿ ಹುಡುಕಾಟ ನಡೆಸಿ ಕಂಟೇನರ್ ಬಾಗಿಲು ತೆರೆದಾಗ ಅದರೊಳಗೆ ಮಕ್ಕಳು ಪತ್ತೆಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದು ಘಟನೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಮಣ್ಣಿನ ರಾಶಿ ಬಿದ್ದು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ರಾಜಸ್ಥಾನದ ಜುನ್​ಜುನು ಜಿಲ್ಲೆಯಲ್ಲಿ ಶನಿವಾರ ಸಂಜೆ ಮಕ್ಕಳು ಆಟವಾಡುತ್ತಿದ್ದಾಗ ಮಣ್ಣು ಕುಸಿದು ಬಿದ್ದಿತ್ತು. ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಈ ಘಟನೆಯಲ್ಲಿ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಒಂದು ಮಗುವಿಗೆ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಾವಿಗೀಡಾದ ಮಕ್ಕಳು ಪ್ರಿನ್ಸ್ (7), ಸುರೇಶ್ (7) ಮತ್ತು ಸೋನಾ (10) ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.


ಮಕ್ಕಳ ಸಾವಿಗೆ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಸಂತಾಪ ಸೂಚಿಸಿದ್ದಾರೆ. ಈ ಸಾವು ಹೃದಯ ವಿದ್ರಾವಕ. ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಗಾಯಗೊಂಡಿರುವ ಮಗು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲೊಂದು ದುರಂತ ಘಟನೆ.. ಟ್ರಕ್ ಹರಿದು 15 ಕಾರ್ಮಿರ ಸಾವು

Published On - 2:03 pm, Mon, 22 March 21