ನಿಮ್ಮ ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರಿದ್ದರೆ ಈ ದೇಶಕ್ಕೆ ಪ್ರಯಾಣಿಸುವಂತಿಲ್ಲ

| Updated By: ಸುಷ್ಮಾ ಚಕ್ರೆ

Updated on: Nov 24, 2022 | 10:54 AM

ಪಾಸ್​ಪೋರ್ಟ್​ನಲ್ಲಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ಹೆಸರುಗಳನ್ನು ಸ್ಪಷ್ಟವಾಗಿ ಘೋಷಿಸಿರಬೇಕು. ಮಧ್ಯದ ಹೆಸರು ಮಾತ್ರ ಇದ್ದರೆ ಯುಎಇಯಲ್ಲಿ ಅದಕ್ಕೆ ಮಾನ್ಯತೆಯಿಲ್ಲ.

ನಿಮ್ಮ ಪಾಸ್​ಪೋರ್ಟ್​ನಲ್ಲಿ ಒಂದೇ ಹೆಸರಿದ್ದರೆ ಈ ದೇಶಕ್ಕೆ ಪ್ರಯಾಣಿಸುವಂತಿಲ್ಲ
ಪಾಸ್‌ಪೋರ್ಟ್‌
Image Credit source: NDTV
Follow us on

ನವದೆಹಲಿ: ಇನ್ನುಮುಂದೆ ನಿಮ್ಮ ಪಾಸ್​ಪೋರ್ಟ್​ನಲ್ಲಿ ಫಸ್ಟ್​ ನೇಮ್ (First Name) ಮತ್ತು ಲಾಸ್ಟ್​ ನೇಮ್ (Last Name) ಇಲ್ಲದೆ ಕೇವಲ ಒಂದೇ ಹೆಸರಿದ್ದರೆ ನೀವು ಯುಎಇ (United Arab Emirates)ಗೆ ವಿಮಾನದಲ್ಲಿ ಪ್ರಯಾಣ ಮಾಡುವಂತಿಲ್ಲ. ಪ್ರವಾಸಕ್ಕೆ ಅಥವಾ ಇತರ ಯಾವುದೇ ರೀತಿಯ ಭೇಟಿಗಾಗಿ ವೀಸಾದಲ್ಲಿ ಪ್ರಯಾಣಿಸುವವರ ಪಾಸ್‌ಪೋರ್ಟ್‌ನಲ್ಲಿ (Passport)  ಒಂದೇ ಹೆಸರಿದ್ದರೆ ಆ ಪ್ರಯಾಣಿಕರಿಗೆ ಯುಎಇಯಲ್ಲಿ ವಾಸ್ತವ್ಯ ಹೂಡಲು ಅನುಮತಿಯಿಲ್ಲ. ಕಳೆದ ಸೋಮವಾರದಿಂದಲೇ ಜಾರಿಗೆ ಬರುವಂತೆ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಅಧಿಕಾರಿಗಳು ಇಂಡಿಗೋ ಏರ್‌ಲೈನ್ಸ್​ಗೆ ತಿಳಿಸಿದ್ದಾರೆ.

ಇದರರ್ಥವೇನೆಂದರೆ, ಪಾಸ್​ಪೋರ್ಟ್​ನಲ್ಲಿ ಪ್ರಯಾಣಿಕರ ಮೊದಲ ಮತ್ತು ಕೊನೆಯ ಹೆಸರುಗಳನ್ನು ಸ್ಪಷ್ಟವಾಗಿ ಘೋಷಿಸಿರಬೇಕು. ಮಧ್ಯದ ಹೆಸರು ಮಾತ್ರ ಇದ್ದರೆ ಯುಎಇಯಲ್ಲಿ ಅದಕ್ಕೆ ಮಾನ್ಯತೆಯಿಲ್ಲ.

ಇದನ್ನೂ ಓದಿ: ಕೇವಲ ಪಾಸ್​ಪೋರ್ಟ್​ ಇದ್ದರೆ ಸಾಕು, ವೀಸಾವಿಲ್ಲದೆ ಭಾರತದಿಂದ ಪ್ರಯಾಣಿಸಬಹುದಾದ ದೇಶಗಳಿವು

ಯುಎಇ ಅಧಿಕಾರಿಗಳ ಸೂಚನೆಗಳ ಪ್ರಕಾರ, ನವೆಂಬರ್ 21ರಿಂದ ಜಾರಿಗೆ ಬರುವಂತೆ ಪ್ರವಾಸಿ, ವಿಸಿಟಿಂಗ್ ಅಥವಾ ಇತರ ಯಾವುದೇ ರೀತಿಯ ವೀಸಾದಡಿ ಪ್ರಯಾಣಿಸುವವರು ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಒಂದೇ ಹೆಸರನ್ನು ಹೊಂದಿದ್ದರೆ ಆ ಪ್ರಯಾಣಿಕರಿಗೆ ಯುಎಇಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಹೀಗಾಗಿ, ಪಾಸ್​ಪೋರ್ಟ್​ನಲ್ಲಿ ಆ ರೀತಿಯ ದೋಷ ಇರುವವರು ಕೂಡಲೆ ಅದನ್ನು ಸರಿಪಡಿಸಬೇಕು.

ಹೆಚ್ಚಿನ ವಿವರಗಳಿಗಾಗಿ ತಮ್ಮ ಖಾತೆ ವ್ಯವಸ್ಥಾಪಕರನ್ನು ಸಂಪರ್ಕಿಸಲು ಅಥವಾ ಅವರ ವೆಬ್‌ಸೈಟ್ goindigo.comಗೆ ಭೇಟಿ ನೀಡುವಂತೆ ವಿಮಾನಯಾನ ಸಂಸ್ಥೆಯು ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ