Queen Elezabeth Death: ಮಹಾರಾಣಿ ನಿಧನದ ನಂತರ ಬದಲಾಗಲಿದೆ ಇಂಗ್ಲೆಂಡ್ ಕರೆನ್ಸಿ, ರಾಷ್ಟ್ರಗೀತೆ, ಪಾಸ್​ಪೋರ್ಟ್​​

ಇಷ್ಟು ದಿನ ರಾಣಿಯ ಚಲಾವಣೆಯಲ್ಲಿದ್ದ ಹೆಸರು ಮತ್ತು ಚಿತ್ರಗಳ ಜಾಗದಲ್ಲಿ ಹೊಸ ರಾಜನ ಹೆಸರು ಮತ್ತು ಚಿತ್ರಗಳು ಕಾಣಿಸಿಕೊಳ್ಳಲಿವೆ.

Queen Elezabeth Death: ಮಹಾರಾಣಿ ನಿಧನದ ನಂತರ ಬದಲಾಗಲಿದೆ ಇಂಗ್ಲೆಂಡ್ ಕರೆನ್ಸಿ, ರಾಷ್ಟ್ರಗೀತೆ, ಪಾಸ್​ಪೋರ್ಟ್​​
ಬ್ರಿಟನ್​ನ ಕರೆನ್ಸಿ ಪೌಂಡ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 09, 2022 | 11:36 AM

ಲಂಡನ್: ಬ್ರಿಟನ್​ನ ಮಹಾರಾಣಿ ಕ್ವೀನ್ ಎಲಿಜಬೆತ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಇಂಗ್ಲೆಡ್​ನ ಆಡಳಿತದಲ್ಲಿ ಹಲವು ಮಹತ್ವದ ಬದಲಾವಣೆಗಳಾಗಲಿವೆ. ರಾಷ್ಟ್ರಗೀತೆ, ಕರೆನ್ಸಿ ನೋಟ್​, ನಾಣ್ಯಗಳು, ಅಂಚೆಚೀಟಿ, ಅಂಚೆಪೆಟ್ಟಿಗೆ ಮತ್ತು ಪಾಸ್​ಪೋರ್ಟ್​ಗಳು ಬದಲಾಗಲಿವೆ. ಯುನೈಟೆಡ್​ ಕಿಂಗ್​ಡಮ್ ಎಂದು ಕರೆಯಲಾಗುವ ದ್ವೀಪ ಸಮೂಹ ಮತ್ತು ವಿಶಾಲ ಕಾಮನ್​ವೆಲ್ತ್​ ದೇಶಗಳಲ್ಲಿ ಜನರ ಬದುಕಿನ ಮೇಲೆ ಪ್ರಭಾವ ಬೀರುವ ಸಂಸ್ಥೆಗಳು ಮತ್ತು ಚಿಹ್ನೆಗಳು ಬದಲಾಗಲಿವೆ. ಇಷ್ಟು ದಿನ ರಾಣಿಯ ಚಲಾವಣೆಯಲ್ಲಿದ್ದ ಹೆಸರು ಮತ್ತು ಚಿತ್ರಗಳ ಜಾಗದಲ್ಲಿ ಹೊಸ ರಾಜನ ಹೆಸರು ಮತ್ತು ಚಿತ್ರಗಳು ಕಾಣಿಸಿಕೊಳ್ಳಲಿವೆ.

ಕರೆನ್ಸಿಯಲ್ಲಿ ಬದಲಾವಣೆ

ಹೊಸ ರಾಜನ ಚಿತ್ರವು ಬ್ರಿಟನ್​ನ ನಾಣ್ಯಗಳು ಮತ್ತು ಬ್ಯಾಂಕ್​ನೋಟ್​ಗಳ ಮೇಲೆ ಕಾಣಿಸಿಕೊಳ್ಳಲಿದೆ. ಈಸ್ಟ್​ ಕೆರೆಬಿಯನ್ ಡಾಲರ್ ಕಾಯಿನ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳ ಕರೆನ್ಸಿ ಹಾಗೂ ನಾಣ್ಯಗಳ ಮೇಲಿನ ಚಿತ್ರವೂ ಬದಲಾಗಲಿದೆ.

ಬ್ರಿಟನ್​ನ ಕರೆನ್ಸಿಯಾದ ಸ್ಟಲಿಂಗ್​ ಪೌಂಡ್​ನ 450 ನೋಟುಗಳು ಮಹಾರಾಣಿ ಎಲಿಜಬೆತ್ ಚಿತ್ರದೊಂದಿಗೆ ಚಲಾವಣೆಯಲ್ಲಿವೆ. ಹೊಸದಾಗಿ ರಾಜಮನೆತನದ ಮುಖ್ಯಸ್ಥರಾದವರ ಹೆಸರಿನೊಂದಿಗೆ ಈ ನೋಟುಗಳನ್ನು ಪರಿಷ್ಕರಿಸಲಾಗುವುದು ಎಂದು ಬ್ರಿಟನ್​ನ ಜನಪ್ರಿಯ ದಿನಪತ್ರಿಕೆ ‘ದಿ ಗಾರ್ಡಿಯನ್’ ವರದಿ ಮಾಡಿದೆ. ಹೊಸ ರಾಜನ ಚಿತ್ರದೊಂದಿಗಿನ ನೋಟುಗಳು ಪೂರ್ಣಪ್ರಮಾನದಲ್ಲಿ ಚಲಾವಣೆಗೆ ಬರಲು 2 ವರ್ಷ ಬೇಕಾಗಬಹುದು ಎಂದು ಬ್ಯಾಂಕ್​ ಆಫ್ ಇಂಗ್ಲೆಂಡ್ ಹೇಳಿದೆ. ಇತ್ತೀಚೆಗಷ್ಟೇ 50 ಪೌಂಡ್ ಮುಖಬೆಲೆಯ ಹೊಸ ಸಿಂಥೆಟಿಕ್ ನೋಟುಗಳನ್ನು ಚಲಾವಣೆ ತರಲೂ ಬ್ಯಾಂಕ್ ಆಫ್ ಇಂಗ್ಲೆಂಡ್ ಇಷ್ಟೇ ಅವಧಿ ತೆಗೆದುಕೊಂಡಿತ್ತು.

1952ರಲ್ಲಿ ಎಲಿಜಬೆತ್​ ಬ್ರಿಟನ್​ನ ಮಹಾರಾಣಿಯಾಗಿ ಪದವಿ ಸ್ವೀಕರಿಸಿದ ನಂತರ ಬ್ರಿಟನ್​ನಲ್ಲಿ ನಾಣ್ಯ-ನೋಟುಗಳನ್ನು ಬದಲಿಸಿ, ಹೊಸ ನಾಣ್ಯ-ನೋಟುಗಳನ್ನು ಚಲಾವಣೆಗೆ ತರಲು 8 ವರ್ಷ ಬೇಕಾಗಿತ್ತು. ಅಂದರೆ 1960ರ ನಂತರ ಹೊಸ ಮಹಾರಾಣಿ ಎಲಿಜಬೆತ್ ಮುಖಚಿತ್ರದೊಂದಿಗಿನ ನಾಣ್ಯ-ನೋಟುಗಳು ಚಲಾವಣೆಗೆ ಬಂದವು. ಹೊಸ ರಾಜನ ಯಾವ ಚಿತ್ರವನ್ನು ಕರೆನ್ಸಿ ಮೇಲೆ ಬಳಸಬಹುದು ಎನ್ನುವುದನ್ನು ಬಕಿಂಗ್​ಹ್ಯಾಮ್ ಅರಮನೆ ಅನುಮೋದಿಸಬೇಕಿದೆ. ಬ್ರಿಟನ್​ನ ಎಲ್ಲ ಅಂಚೆಚೀಟಿಗಳೂ ನಂತರ ಬದಲಾಗಲಿವೆ.

ರಾಷ್ಟ್ರಗೀತೆಯ ಮೊದಲ ಸಾಲು

ಬ್ರಿಟನ್​ನ ರಾಷ್ಟ್ರಗೀತೆಯ ಮೊದಲ ಸಾಲು ಈಗ ‘ಗಾಡ್​ ಸೇವ್​ ದ ಕ್ವೀನ್’ (ದೇವರು ರಾಣಿಯನ್ನು ರಕ್ಷಿಸಲಿ) ಎಂದು ಇದೆ. ಮುಂದೆ ಇದು ‘ಗಾಡ್ ಸೇವ್​ ದ ಕಿಂಗ್’ (ದೇವರು ರಾಜನನ್ನು ರಕ್ಷಿಸಲಿ) ಎಂದು ಬದಲಾಗುತ್ತದೆ. ಇದೇ ಹಾಡನ್ನು ನ್ಯೂಝಿಲೆಂಡ್​ ರಾಷ್ಟ್ರಗೀತೆಯಾಗಿ ಮತ್ತು ಆಸ್ಟ್ರೇಲಿಯಾ, ಕೆನಡಾ ದೇಶಗಳು ರಾಜ ಮನೆತನಗಳ ಗೀತೆಗಳಾಗಿ ಬಳಕೆ ಮಾಡುತ್ತವೆ.

ಬ್ರಿಟನ್ ಪಾಸ್​ಪೋರ್ಟ್​

ಬ್ರಿಟನ್​ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯು ರಾಜಮನೆತನದ ಮುಖ್ಯಸ್ಥರ ಹೆಸರಿನಲ್ಲಿ ಪಾಸ್​ಪೋರ್ಟ್​ ವಿತರಿಸುತ್ತದೆ. ಇದರಲ್ಲಿ ಈವರೆಗೆ, ‘Her Britannic Majesty’s Secretary of State Requests and requires in the Name of Her Majesty all those whom it may concern to allow the bearer to pass freely without let or hindrance, and to afford the bearer such assistance and protection as may be necessary” ಎಂಬ ಉಲ್ಲೇಖ ಇರುತ್ತಿತ್ತು. ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಝಿಲೆಂಡ್​ ದೇಶಗಳು ನೀಡುತ್ತಿದ್ದ ಪಾಸ್​ಪೋರ್ಟ್​ಗಳಲ್ಲಿಯೂ ಇದೇ ಉಲ್ಲೇಖ ಇರುತ್ತಿತ್ತು. ಮುಂದಿನ ದಿನಗಳಲ್ಲಿ ಇದರಲ್ಲಿ ಸ್ತ್ರೀಲಿಂಗ ಸೂಚಕ ‘Her’ ಪದದ ಬದಲು, ಪುಲ್ಲಿಂಗ ಸೂಚಕ ‘His’ ಪದ ಬಳಕೆಯಾಗಲಿದೆ.

ಇತರ ಮಹತ್ವದ ಬದಲಾವಣೆಗಳು

‘Her Majesty’s’ ಎಂಬ ಸಂಬೋಧನೆಯೊಂದಿಗೆ ಅರಂಭವಾಗುವ ಸರ್ಕಾರದ ಇಲಾಖೆಗಳಲ್ಲಿಯೂ ಅಗತ್ಯ ಬದಲಾವಣೆಗಳು ಕಂಡುಬರಲಿವೆ. ಖಜಾನೆ ಮತ್ತು ಸುಂಕ ಹಾಗೂ ಅಬಕಾರಿ ಇಲಾಖೆಯಲ್ಲಿ ಬದಲಾವಣೆಗಳು ಎದ್ದು ಕಾಣಲಿವೆ. ಸೇನೆಯಲ್ಲಿ ಹೊಸದಾಗಿ ಸೇರ್ಪಡೆಯಾದವರು ರಾಣಿಯ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸುವುದು, ರಾಣಿಯ ಹೆಸರಿನಲ್ಲಿ ಯುದ್ಧನೌಕೆಗಳಿಗೆ ಹೆಜ್ಜೆ ಇಡುವ ಪರಂಪರೆ ಬದಲಾಗಲಿದೆ.

ಬಕಿಂಗ್​ಹ್ಯಾಮ್ ಪ್ಯಾಲೇಸ್​ನ ಹೊರಗೆ ನಿಯೋಜಿಸುವ ಸೈನಿಕ ತುಕಡಿಯ ಹೆಸರು ಇಷ್ಟು ದಿನ ‘ದಿ ಕ್ವೀನ್ಸ್​ ಗಾರ್ಡ್​’ ಎಂದೇ ಇತ್ತು. ಇದರ ಹೆಸರು ಸಹ ಇನ್ನು ಮುಂದೆ ಬದಲಾಗಲಿದೆ. ಪೊಲೀಸರು ತಮ್ಮ ಕರ್ತವ್ಯವನ್ನು ‘ರಾಣಿಯ ಶಾಂತಿ ಕಾಪಾಡುವುದು’ (Preserving the queen’s peace) ಎಂದು ಕರೆದುಕೊಳ್ಳುತ್ತಿದ್ದರು. ಈ ಆಶಯವು ಸಹ ಇನ್ನು ಮುಂದೆ ಬದಲಾಗಲಿದೆ. ಕಾನೂನು ಸೇವೆಯ ವೃತ್ತಿಯಲ್ಲಿರುವವರು ‘ರಾಣಿಯ ವಕೀಲರು’ (Queen’s Counsel – QC) ಎಂದು ಕರೆದುಕೊಳ್ಳುವ ಬದಲು, ‘ರಾಜನ ವಕೀಲರು’ (King’s Counsel – KC) ಎಂದು ಕರೆದುಕೊಳ್ಳುತ್ತಾರೆ. ಹೈಕೋರ್ಟ್​ಗಳಲ್ಲಿರುವ ‘ಕ್ವೀನ್ ವಿಭಾಗೀಯ ಪೀಠ’ಗಳು ಇನ್ನು ಮುಂದೆ ‘ಕಿಂಗ್ ವಿಭಾಗೀಯ ಪೀಠ’ಗಳಾಗುತ್ತವೆ.

ಆರೋಪ ಒಪ್ಪಿಕೊಂಡು ಸರ್ಕಾರದ ಸಾಕ್ಷಿಗಳಾಗಿ ಬದಲಾಗುವವರು ಇನ್ನು ಮುಂದೆ ‘ರಾಣಿಯ ಸಾಕ್ಷಿಗಳು’ ಆಗುವುದಿಲ್ಲ. ‘ರಾಜನ ಸಾಕ್ಷಿಗಳು’ ಆಗುತ್ತಾರೆ. ಕೈದಿಗಳನ್ನು ಇನ್ನು ಮುಂದೆ ‘ರಾಣಿಯ ಮರ್ಜಿ’ಗೆ ತಕ್ಕಂತೆ ಬಿಡುಗಡೆ ಮಾಡುವುದಿಲ್ಲ. ಬದಲಾಗಿ ‘ರಾಜನ ಮರ್ಜಿ’ಗೆ ತಕ್ಕಂತೆ ಬಿಡುಗಡೆ ಮಾಡುತ್ತಾರೆ. ಲಂಡನ್​ನಲ್ಲಿರುವ ‘ಹರ್ ಮ್ಯಾಜೆಸ್ಟಿಸ್ ಥಿಯೇಟರ್’ ಇನ್ನು ಮುಂದೆ ‘ಹಿಸ್ ಮ್ಯಾಜೆಸ್ಟಿಸ್’ ಎಂದಾಗುತ್ತದೆ.

Published On - 11:36 am, Fri, 9 September 22

ತಾಜಾ ಸುದ್ದಿ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ಕಳೆದುಕೊಂಡಿದ್ದರ ಕುರಿತು ಚಿಂತಿಸುತ್ತ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್