ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್

Sahadev Mane
| Updated By: Ganapathi Sharma

Updated on: Dec 23, 2024 | 2:04 PM

ವಿಧಾನ ಪರಿಷತ್ ಕಲಾಪದ ವೇಳೆ ಬಿಜೆಪಿ ಎಂಎಲ್​ಸಿ ಸಿಟಿ ರವಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದಕ್ಕೆ ಸಂಬಂಧಿಸಿದ ವಿಡಿಯೋವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಬಿಡುಗಡೆ ಮಾಡಿದರು. ಜತೆಗೆ, ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಡಿಯೋ ಇಲ್ಲಿದೆ.

ಬೆಳಗಾವಿ, ಡಿಸೆಂಬರ್ 23: ಬಿಜೆಪಿ ಎಂಎಲ್​ಸಿ ಸಿಟಿ ರವಿ ವಿಧಾನ ಪರಿಷತ್ ಕಲಾಪದಲ್ಲಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಹುಲ್ ಗಾಂಧಿ ಅವರನ್ನು ನೀವು (ಸಿಟಿ ರವಿ) ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನಾನು ನಿಮ್ಮ ಬಳಿ ಮೂವರು ಮುಗ್ದ ಜನರನ್ನು ಅಪಘಾತ ಮಾಡಿ ಹತ್ಯೆ ಮಾಡಿದ್ದೀರಲ್ಲವೇ, ನಿಮ್ಮನ್ನು ಕೊಲೆಗಾರ ಎನ್ನಲೇ ಎಂದಿದ್ದಕ್ಕೆ ತಾನೆ ನೀವು (ಸಿಟಿ ರವಿ) ನನಗೆ ಆ ಪದವನ್ನು ಬಳಸಿದ್ದು? ನೆನಪಿಲ್ಲವಾ? ಈಗೇನು ನಾಟಕ ಮಾಡುತ್ತಿದ್ದೀರಾ… ಅಬ್ಬ ಅಷ್ಟೊಂದು ದೊಡ್ಡ ಪಟ್ಟಿ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೀರಾ? ನಿಮ್ಮನ್ನು ಮಹಿಳೆಯರು ಕ್ಷಮಿಸಲ್ಲ ಎಂದು ಹೆಬ್ಬಾಳ್ಕರ್ ಕಿಡಿ ಕಾರಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ