IND vs WI: ಭಾರತ- ವಿಂಡೀಸ್ ನಡುವೆ ಸರಣಿ ನಿರ್ಧಾರಕ ಪಂದ್ಯ; ಸರಣಿ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್ ಪಡೆ
IND-W vs WI-W 2nd ODI: ಭಾರತ ಮತ್ತು ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ವಡೋದರಾದಲ್ಲಿ ಡಿಸೆಂಬರ್ 24 ರಂದು ನಡೆಯಲಿದೆ. ಭಾರತ 1-0 ಮುನ್ನಡೆಯಲ್ಲಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಗೆಲ್ಲುವ ಗುರಿ ಹೊಂದಿದೆ. ಮೊದಲ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ಅನ್ನು 211 ರನ್‌ಗಳಿಂದ ಸೋಲಿಸಿತ್ತು. ಈ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟಿ20 ಸರಣಿಯ ಜೊತೆಗೆ ಏಕದಿನ ಸರಣಿಯನ್ನೂ ಗೆಲ್ಲುವ ಇರಾದೆಯಲ್ಲಿ ಭಾರತ ಇದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಮಂಗಳವಾರ ಅಂದರೆ ಡಿಸೆಂಬರ್ 24 ರಂದು ವಡೋದರಾದಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ ಮಹಿಳಾ ತಂಡ 1-0 ಮುನ್ನಡೆ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ತಂಡವನ್ನು 211 ರನ್ ಗಳಿಂದ ಸೋಲಿಸಿತ್ತು. ಹೀಗಾಗಿ ನಾಳೆ ನಡೆಯುವ ಸರಣಿ ನಿರ್ಧಾರಕ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದರೆ, ಟಿ20 ಸರಣಿಯ ಜೊತೆಗೆ ಏಕದಿನ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಇತ್ತ ವೆಸ್ಟ್ ಇಂಡೀಸ್ ತಂಡ ಈ ಪಂದ್ಯದಲ್ಲಿ ಗೆದ್ದರೆ ಸರಣಿ 1-1 ರಿಂದ ಸಮಬಲಗೊಳ್ಳಲಿದೆ. ಹೀಗಾಗಿ ಟಿ20 ಸರಣಿ ಸೋತಿರುವ ವಿಂಡೀಸ್ ಪಡೆ ಏಕದಿನ ಸರಣಿಯಲ್ಲಾದರೂ ಗೆಲುವಿನ ರುಚಿ ನೋಡುವ ಇರಾದೆಯಲ್ಲಿದೆ.
ಇನ್ನು ಉಭಯ ತಂಡಗಳ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಮೃತಿ ಮಂಧಾನ ಅವರ 91 ರನ್ ಮತ್ತು ಹರ್ಲೀನ್ ಡಿಯೋಲ್ ಅವರ 44 ರನ್‌ಗಳ ನೆರವಿನಿಂದ 314 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು.ಇದಕ್ಕೆ ಪ್ರತಿಯಾಗಿ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಭಾರತದ ಬೌಲಿಂಗ್ ಎದುರು ಸಂಪೂರ್ಣ ಶರಣಾಗಿ ಕೇವಲ 26.3 ಓವರ್‌ಗಳಲ್ಲಿ 103 ರನ್ ಗಳಿಸಿ ಆಲೌಟ್ ಆಗಿತ್ತು. ವೆಸ್ಟ್ ಇಂಡೀಸ್ ಪರ ಎಫಿ ಫೆಚರ್ 24 ರನ್ ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಭಾರತದ ಪರ ರೇಣುಕಾ ಸಿಂಗ್ ಠಾಕೂರ್ 5 ವಿಕೆಟ್, ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದರು.
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ವಡೋದರಾದ ಕೊಂಟ್ಬಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಯಾವ ಸಮಯಕ್ಕೆ ಪ್ರಾರಂಭವಾಗಲಿದೆ?
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಟಾಸ್ 1 ಗಂಟೆಗೆ ನಡೆಯಲಿದೆ.
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು?
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಸ್ಪೋರ್ಟ್ಸ್ 18 ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ.
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ವೀಕ್ಷಿಸಬೇಕು?
ಭಾರತ vs ವೆಸ್ಟ್ ಇಂಡೀಸ್ ಮಹಿಳಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಮೊಬೈಲ್‌ನಲ್ಲಿ Jio ಸಿನಿಮಾ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ.
ಉಭಯ ತಂಡಗಳು
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ಸ್ಮೃತಿ ಮಂಧಾನ, ಉಮಾ ಚೆಟ್ರಿ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಸೈಮಾ ಠಾಕೋರ್, ಟೈಟಾಸ್ ಸಾಧು, ರೇಣುಕಾ ಠಾಕೂರ್ ಸಿಂಗ್, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಮಿನ್ನು ಮಣಿ, ತೇಜಲ್ ಹಸ್ಬಾನಿಸ್ ಮತ್ತು ಹರ್ಲಿನ್ ಡಿಯೋಲ್.
ವೆಸ್ಟ್ ಇಂಡೀಸ್ ಮಹಿಳಾ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಶೆಮೈನ್ ಕ್ಯಾಂಪ್‌ಬೆಲ್ಲೆ, ಆಲಿಯಾ ಅಲ್ಲೆನೆ, ಶಾಮಿಲಿಯಾ ಕೊನ್ನೆಲ್, ನೆರಿಸ್ಸಾ ಕ್ರಾಫ್ಟನ್, ಡಿಯಾಂಡ್ರಾ ಡಾಟಿನ್, ಅಫಿ ಫ್ಲೆಚರ್, ಶಬಿಕಾ ಗಜ್ನಬಿ, ಚಿನೆಲ್ಲೆ ಹೆನ್ರಿ, ಜೈದಾ ಜೇಮ್ಸ್, ಕಿಯಾನಾ ಜೋಸೆಫ್, ಮ್ಯಾಂಡಿ ಮಾಂಗ್ರು, ಅಶ್ಮಿನಿ ಮುನಿಸರ್, ಕರಿಷ್ಮಾ ರಾಮ್ಹರಾಕ್, ರಶಾದಾ ವಿಲಿಯಮ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 pm, Mon, 23 December 24