AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್​​ ಸುದ್ದಿ: ಫೆಬ್ರವರಿಯಿಂದ ಟಿಕೆಟ್​​ ದರ ಹೆಚ್ಚಳ?

ನಮ್ಮ ಮೆಟ್ರೋ ಟಿಕೆಟ್​​ ದರ ಫೆಬ್ರವರಿಯಿಂದ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ನಮ್ಮ ಮೆಟ್ರೋ ದೇಶದಲ್ಲೇ ದುಬಾರಿ ಮೆಟ್ರೋ ಎಂಬ ಹಣೆಪಟ್ಟಿ ಹೊಂದಿದ್ದು , ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಮತ್ತಷ್ಟು ಹೊರೆ ಆಗಲಿದೆ. ಈ ನಿರ್ಧಾರಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಐಷಾರಾಮಿ ಸೇವೆಗಿಂತ ಕೈಗೆಟುಕುವ ಸಾರಿಗೆ ಅಗತ್ಯ ಎಂದಿದ್ದಾರೆ.

ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್​​ ಸುದ್ದಿ: ಫೆಬ್ರವರಿಯಿಂದ ಟಿಕೆಟ್​​ ದರ ಹೆಚ್ಚಳ?
ನಮ್ಮ ಮೆಟ್ರೋ
ಪ್ರಸನ್ನ ಹೆಗಡೆ
|

Updated on: Jan 12, 2026 | 11:53 AM

Share

ಬೆಂಗಳೂರು, ಜನವರಿ 12: ನೀವು ಮೆಟ್ರೋ ಪ್ರಿಯರಾ? ಪ್ರತಿನಿತ್ಯ ಅವುಗಳಲ್ಲೇ ಓಡಾಡ್ತೀರಾ? ಹಾಗಿದ್ರೆ ಹೆಚ್ಚಿನ ದರ ನೀಡಲು ಸಿದ್ಧರಾಗಿ. ಹೌದು, ಫೆಬ್ರವರಿಯಿಂದ ನಮ್ಮ ಮೆಟ್ರೋ ರೈಲುಗಳ ಪ್ರಯಾಣದರ ಏರಿಕೆ ಸಾಧ್ಯತೆ ಇದೆ. ಮೆಟ್ರೋ ಟಿಕೆಟ್​​ ದರವನ್ನು ಪ್ರತಿವರ್ಷ ಗರಿಷ್ಠ ಶೇ.5ರಷ್ಟು ಹೆಚ್ಚಿಸಲು ಫೇರ್​​ ಫಿಕ್ಸೇಶನ್​​ ಕಮಿಟಿ (FFC) ಶಿಫಾರಸ್ಸು ಮಾಡಿರುವ ಕಾರಣ, ದಿನನಿತ್ಯದ ಪ್ರಯಾಣಕ್ಕೆ ಮೆಟ್ರೋ ರೈಲು ಅವಲಂಬಿಸಿರುವವರಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದೆ.

2025ರ ಫೆಬ್ರವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ದರಗಳನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿತ್ತು. ಕೆಲ ಮಾರ್ಗಗಳಲ್ಲಿ ಶೇ.71ರಷ್ಟು ದರ ಹೆಚ್ಚಿಸಿ ಒಂದು ವರ್ಷ ಇನ್ನೇನು ಕಳೆಯುತ್ತಿದೆ. ಈ ಹೊತ್ತಲ್ಲಿ ಬಿಎಂಆರ್​​ಸಿಎಲ್​​ ಮತ್ತೊಂದು ಶಾಕ್​​ ಕೊಡುತ್ತಾ ಎನ್ನವ ಪ್ರಶ್ನೆಯೀಗ ಉದ್ಭವಿಸಿದೆ. ಈಗಿರುವ ದರಗಳಿಂದಲೇ ನಮ್ಮ ಮೆಟ್ರೋ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ವ್ಯವಸ್ಥೆ ಎನಿಸಿಕೊಂಡಿದೆ. ಈ ನಡುವೆ ಮತ್ತೆ ದರ ಏರಿಕೆಯಾದಲ್ಲಿ ಪ್ರಯಾಣಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳೋದು ಗ್ಯಾರಂಟಿ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​

ಪ್ರತಿವರ್ಷ ನಮ್ಮ ಮೆಟ್ರೋ ರೈಲುಗಳ ಟಿಕೆಟ್​​ ದರ ಪರಿಷ್ಕರಣೆಗೆ ಪ್ರಯಾಣಿಕರಿಂದ ತಿವ್ರ ಆಕ್ಷೇಪ ವ್ಯಕ್ತವಾಗಿದೆ. ಸಾರ್ವಜನಿಕ ಸಾರಿಗೆ ಸಾಮಾನ್ಯ ನಾಗರಿಕರ ಕೈಗೆಟಕದಂತಾಗುತ್ತಿದೆ. ಮೆಟ್ರೋ ಪ್ರಯಾಣ ಅಗ್ಗವಾಗಿರಬೇಕು, ಐಷಾರಾಮಿ ಸೇವೆಯಾಗಬಾರದು ಎಂದು ದಿನನಿತ್ಯದ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಟಿಕೆಟ್​​ ದರ ಹೆಚ್ಚಳವಾದ್ರೆ ಇದು ಗಾಯದ ಮೇಲೆ ಉಪ್ಪು ಎರಚಿದಂತೆ ಎಂದು ಮತ್ತೊಬ್ಬರು ಹೇಳಿದ್ದಾರೆ. ತುಂಬಿ ತುಳುಕುತ್ತಿರುವ ರೈಲುಗಳು, ಆಮೆ ಗತಿಯಲ್ಲಿ ಸಾಗುತ್ತಿರುವ ಹೊಸ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣದ ನಡುವೆ ದರ ಏರಿಕೆ ಮಾತ್ರ ಆಗುತ್ತಲೇ ಇರುವುದು ಪ್ರಯಾಣಿಕರನ್ನುಕೆರಳಿಸಿದೆ.

ಮೆಟ್ರೋ ಸೇವೆ ಅಗ್ಗವಲ್ಲದೇ ಇರಬಹುದು, ಆದರೆ ರೈಲುಗಳು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ತುಂಬಿ ಓಡಾಡುವಾಗ ಇದನ್ನು ಐಷಾರಾಮಿ ಸೇವೆ ಎಂದು ಕರೆಯುವುದು ಹಾಸ್ಯಾಸ್ಪದ. ಈಗಾಗಲೇ ಸುಮಾರು ಶೇ. 32ರಷ್ಟು ಹೆಚ್ಚುವರಿ ಹಣವನ್ನು ಪ್ರಯಾಣಿಕರು ಪಾವತಿಸುತ್ತಿದ್ದಾರೆ. ಅನ್ಯಾಯಕರ ದರಗಳನ್ನು ಮೌನವಾಗಿ ಒಪ್ಪಿಕೊಳ್ಳುತ್ತಿರುವುದೇ ಮತ್ತೊಮ್ಮೆ ದರ ಏರಿಕೆಗೆ ಬಿಎಂಆರ್‌ಸಿಎಲ್‌ಗೆ ಧೈರ್ಯ ನೀಡುತ್ತಿದೆ. ಮೆಟ್ರೋಗೆ ಹೆಚ್ಚು ಹಣ ಕೊಡಿ, ಇಲ್ಲವೇ ಟ್ರಾಫಿಕ್‌ನಲ್ಲಿ ಗಂಟೆಗಳ ಕಾಲ ಸಿಲುಕಿರಿ ಎಂಬ ಸ್ಥಿತಿ ಸದ್ಯ ಬೆಂಗಳೂರಲ್ಲಿದ್ದು, ಇವೆರಡು ಸನ್ನಿವೇಶಗಳಲ್ಲಿಯೂ ಬೆಲೆ ತೆರುತ್ತಿರೋದು ಮಾತ್ರ ಸಾರ್ವಜನಿಕರೇ ಎಂದು ಪ್ರಯಾಣಿಕರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.