AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​

ಪ್ರಯಾಣಿಕರಿಗೆ ನಮ್ಮ ಮೆಟ್ರೋ ಡಬಲ್​​ ಗುಡ್​​ನ್ಯೂಸ್​​ ಕೊಟ್ಟಿದ್ದು, ಈ ವರ್ಷ ಎರಡು ಹೊಸ ಮಾರ್ಗಗಳು ಓಪನ್​​ ಆಗಲಿವೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಾರ್ಗಗಳ ಜೊತೆಗೆ, ಕಾಳೇನ ಅಗ್ರಹಾರದಿಂದ ನಾಗವಾರದ ಪಿಂಕ್ ಲೈನ್ ಮತ್ತು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ ಬ್ಲ್ಯೂ ಲೈನ್ ಸೇವೆ ಆರಂಭಿಸುವುದರಿಂದ ನಗರದ ಟ್ರಾಫಿಕ್ ಸಮಸ್ಯೆ ಬಹುತೇಕ ತಗ್ಗುವ ನಿರೀಕ್ಷೆಯೂ ಇದೆ.

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​
ನಮ್ಮ ಮೆಟ್ರೋ
ಕಿರಣ್​ ಸೂರ್ಯ
| Edited By: |

Updated on:Jan 06, 2026 | 7:01 AM

Share

ಬೆಂಗಳೂರು, ಜನವರಿ 06: ಕೊರೊನಾ ಬಳಿಕ ಕೊಂಚ ಇಳಿಕೆಯಾಗಿದ್ದ ಬೆಂಗಳೂರಿನ ಟ್ರಾಫಿಕ್​​ ಸಮಸ್ಯೆ ಈಗ ಮತ್ತೆ ಹಳೆಯ ಸ್ಥಿತಿಗೆ ಮರಳಿದೆ. ಪ್ರತಿದಿನ ವಾಹನ ದಟ್ಟಣೆ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿರುವ ಸಿಲಿಕಾನ್​ ಸಿಟಿ ಮಂದಿಗೆ ನಮ್ಮ ಮೆಟ್ರೋ ಗುಡ್​​ನ್ಯೂಸ್​​ ಕೊಟ್ಟಿದ್ದು, ಒಂದಲ್ಲ ಎರಡು ಹೊಸ ಮಾರ್ಗಗಗಳು ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಿವೆ. ಈಗಾಗಲೇ ಸೇವೆ ಒದಗಿಸುತ್ತಿರುವ ಹಸಿರು, ಗುಲಾಬಿ ಮತ್ತು ಹಳದಿ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರದಿಂದ ನಗರದ ಟ್ರಾಫಿಕ್​​ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿದೆ.

ಯಾವೆಲ್ಲ ಹೊಸ ಮಾರ್ಗ ಓಪನ್​?

2026ರ ಅಂತ್ಯದ ಒಳಗೆ ಪಿಂಕ್​ ಮತ್ತು ಬ್ಲ್ಯೂ ಲೈನ್​​ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಓಪನ್ ಆದರೆ, ಡಿಸೆಂಬರ್​​ ವೇಳೆಗೆ ಬ್ಲ್ಯೂ ಲೈನ್​​ನ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ. ಕಾಳೇನ ಅಗ್ರಹಾರ ಟು ನಾಗವಾರ ಸಂಪರ್ಕಿಸುವ ಪಿಂಕ್ ಲೈನ್​​ 21.25 ಕಿ.ಮೀ. ವಿಸ್ತೀರ್ಣವಿದ್ದು, ಆ ಪೈಕಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 7.5 ಕಿ.ಮೀ.ಯ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್​​ಗಳು ಮೇನಲ್ಲಿ ಓಪನ್ ಆಗಲಿದೆ. ನವೆಂಬರ್​​ನಲ್ಲಿ ತಾವರೆಕೆರೆ ಟು ನಾಗವಾರ 12 ಅಂಡರ್ ಗ್ರೌಂಡ್ ಮೆಟ್ರೋ ಸ್ಟೇಷನ್​​ಗಳ ಕಾರ್ಯಾಚರಣೆ ಶುರುವಾಗಲಿದೆ.  ಪಿಂಕ್ ಲೈನ್​​ಗಾಗಿ ಈಗಾಗಲೇ BEMLನಿಂದ ಒಂದು ಡ್ರೈವರ್ಲೆಸ್ ರೈಲು ಕೂಡ ಬಂದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ; ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಬ್ಲೂ ಲೈನ್​​ನ ಸಿಲ್ಕ್ ಬೋರ್ಡ್ ಟು ಕೆ.ಆರ್.ಪುರಂ ಮಾರ್ಗ ಈ ವರ್ಷ ಡಿಸೆಂಬರ್​​ ವೇಳೆಗೆ ಓಪನ್ ಆಗಲಿದೆ. ಇದು 17.75 ಕಿ.ಮೀ. ಮಾರ್ಗದಲ್ಲಿ, 13 ಸ್ಟೇಷನ್​​ಗಳಿವೆ. ನೀಲಿ ಮಾರ್ಗವು ಒಟ್ಟು 58.19 ಕಿ.ಮೀ. ವಿಸ್ತೀರ್ಣವಿದ್ದು, ಮೊದಲ ಹಂತ 2026ರ ವರ್ಷಾಂತ್ಯದ ವೇಳೆಗೆ ಕಾರ್ಯಾರಂಭವಾದರೆ, 2027ರಲ್ಲಿ ಎರಡನೇ ಹಂತ ಓಪನ್​​ ಆಗಲಿದೆ. ಈ ಎರಡು ಮಾರ್ಗಗಳು ಕಾರ್ಯಾಚರಣೆ ಆರಂಭಿಸಿದರೆ ನಗರದ ಟ್ರಾಫಿಕ್ ಇಳಿಕೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಮೆಟ್ರೋ ಪ್ರಯಾಣಿಕರು ಕೂಡ ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:56 am, Tue, 6 January 26

Follow Us
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?