Daily Devotional: ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು

Daily Devotional: ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು

ವಿವೇಕ ಬಿರಾದಾರ
|

Updated on:Dec 23, 2024 | 7:36 AM

ಶಬರಿಮಲೆ ಅಯ್ಯಪ್ಪನ ಮಂಡಲ ವ್ರತದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು ಮತ್ತು ತಪ್ಪಿಸಬೇಕಾದ ತಪ್ಪುಗಳ ಬಗ್ಗೆ ಈ ಲೇಖನ ತಿಳಿಸುತ್ತದೆ. ಕಾರ್ತಿಕ ಮಾಸದಿಂದ ಆರಂಭವಾಗುವ ೪೧ ದಿನಗಳ ಮಂಡಲ ದೀಕ್ಷೆ ಮತ್ತು ಅರ್ಥ ಮಂಡಲ ದೀಕ್ಷೆಯ ಬಗ್ಗೆ ವಿವರಿಸುತ್ತದೆ. ಜ್ಯೋತಿಷಿ ಬಸವರಾಜ ಗುರೂಜಿ ಅವರ ಮಾರ್ಗದರ್ಶನದೊಂದಿಗೆ, ಅಯ್ಯಪ್ಪ ಮಾಲೆ ಧರಿಸುವಾಗ ಮಾಡಬಾರದ ತಪ್ಪುಗಳನ್ನು ಮತ್ತು ಅಯ್ಯಪ್ಪನ ದರ್ಶನದ ಮಹತ್ವವನ್ನು ಈ ಲೇಖನ ವಿವರಿಸುತ್ತದೆ. ಮಕರ ಸಂಕ್ರಾಂತಿಯ ದಿನದ ದರ್ಶನದ ಶುಭಫಲಗಳನ್ನು ಕೂಡ ತಿಳಿಸಲಾಗಿದೆ.

18 ಮೆಟ್ಟಿಲುಗಳ ಮೇಲೆ ಕೂತಿರುವ ಹರಿಹರ ಸುತ ಅಯ್ಯಪ್ಪ ಭಕ್ತೋದ್ಧಾರಕ. ನಂಬಿ ಬಂದ ಭಕ್ತರಿಗೆ ಇಲ್ಲ ಎನ್ನದೆ ಎಲ್ಲವನ್ನು ಕರುಣಿಸುವ ಕಾಮದೇನು. ಮಕರ ಸಂಕ್ರಾಂತಿಯಂದು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಪಡೆದರೆ ಶುಭವಾಗುತ್ತದೆ ಎಂದು ಹೇಳುತ್ತಾರೆ. ಅಯ್ಯಪ್ಪ ಸ್ವಾಮಿ ಭಕ್ತರು ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ. ಅಯ್ಯಪ್ಪ ಮಾಲೆ ಧರಿಸಿದಾಗ ಯಾವೆಲ್ಲ ತಪ್ಪು ಮಾಡಬಾರದು ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Published on: Dec 23, 2024 07:35 AM