Airbus Beluga: ಮುಂಬೈಗೆ ಬಂದಿಳಿದ ಅಪರೂಪದ ತಿಮಿಂಗಿಲ ಆಕಾರದ ವಿಮಾನ, ವಿಸ್ಮಿತರಾದ ಜನ
Chhatrapati Shivaji Maharaj: ಸೂಪರ್ ಟ್ರಾನ್ಸ್‌ಪೋರ್ಟರ್ ಏರ್‌ಬಸ್ ಬೆಲುಗಾ ಮಂಗಳವಾರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಎಸ್‌ಎಂಐಎ) ಬಂದಿಳಿಯಿತು, ಇದನ್ನು ಗಮನಿಸಿದ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಆಶ್ಚರ್ಯಗೊಂಡಿದ್ದಾರೆ, ಈ ವಿಮಾನ ಎಲ್ಲರನ್ನೂ ಒಂದು ಸೆಳೆಯುವಂತೆ ಮಾಡಿದೆ.
ಮುಂಬೈ: ಸೂಪರ್ ಟ್ರಾನ್ಸ್‌ಪೋರ್ಟರ್ ಏರ್‌ಬಸ್ ಬೆಲುಗಾ (Airbus Beluga) ಮಂಗಳವಾರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ (Chhatrapati Shivaji Maharaj) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಸಿಎಸ್‌ಎಂಐಎ) ಬಂದಿಳಿಯಿತು, ಇದನ್ನು ಗಮನಿಸಿದ ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಆಶ್ಚರ್ಯಗೊಂಡಿದ್ದಾರೆ, ಈ ವಿಮಾನ ಎಲ್ಲರನ್ನೂ ಒಂದು ಸೆಳೆಯುವಂತೆ ಮಾಡಿದೆ. A300-600ST ಸೂಪರ್ ಟ್ರಾನ್ಸ್‌ಪೋರ್ಟರ್ ಎಂದೂ ಕರೆಯಲ್ಪಡುವ ಏರ್‌ಬಸ್ ಬೆಲುಗಾ, ಏರ್ ಕಾರ್ಗೋವನ್ನು ಸಾಗಿಸಲು ಇದನ್ನು ಬಳಸಲಾಗಿದೆ. ಏರ್‌ಬಸ್ ವೆಬ್‌ಸೈಟ್‌ನ ಪ್ರಕಾರ, ಈ ವಿಮಾನಗಳು 1990ರ ದಶಕದ ಮಧ್ಯಭಾಗದಿಂದ ಕಂಪನಿಯ ಸ್ವಂತ ಕೈಗಾರಿಕಾ ಏರ್‌ಲಿಫ್ಟ್ ಅಗತ್ಯಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಕ್ರಮೇಣ ಆರು ಹೊಸ ಬೆಲುಗಾಎಕ್ಸ್‌ಎಲ್ ಆವೃತ್ತಿಗಳ ಫ್ಲೀಟ್‌ನಿಂದ ಬದಲಾವಣೆಗೊಂಡಿದೆ.
CSMIAಯ ಅಧಿಕೃತ ಟ್ವಿಟರ್ ಪೇಜ್ ಬೃಹತ್ ವಿಮಾನದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದೆ, ಇದು ಎಲ್ಲರಿಗೂ “ವಿಸ್ಮಯ” ಎಂದು ಟ್ಟಿಟ್ ಮಾಡಿದೆ. ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ಮುಂಬೈ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು ಮತ್ತು ನಮ್ಮೆಲ್ಲರನ್ನು ಬೆರಗುಗೊಳಿಸಿದೆ ಎಂದು ಟ್ವೀಟ್ನಲ್ಲಿ ಹೇಳಿದೆ.
ಇದನ್ನು ಓದಿ: ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ಪರಿವರ್ತನೆಯಾದ ಹುಬ್ಬಳ್ಳಿ ವಿಮಾನ ನಿಲ್ದಾಣ : ಪ್ರಲ್ಹಾದ್ ಜೋಶಿ
ಬೆಲುಗಾ ಮುಂದಿನ ಭಾಗ (ವಿಮಾನದ ಮೂಗು) ತಿಮಿಂಗಿಲದ ಆಕಾರದಲ್ಲಿದೆ, ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿ ಒಂದಾಗಿದೆ. ಇದು ಬಾಹ್ಯಾಕಾಶ, ಮಿಲಿಟರಿ, ಏರೋನಾಟಿಕ್ಸ್, ಸಮುದ್ರ ಮತ್ತು ಮಾನವೀಯ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ವಲಯಗಳಿಗೆ ದೊಡ್ಡ ಸರಕುಗಳನ್ನು ಸಾಗಿಸುತ್ತದೆ. ಏರ್‌ಬಸ್ ವೆಬ್‌ಸೈಟ್ ಪ್ರಕಾರ ವಿಮಾನವು 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ. ಭಾನುವಾರ, ವಿಮಾನವು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿಯಿತು, ಈ ವಿಮಾನವು ಜನರನ್ನು ಗಮನ ಸೆಳೆಯುವಂತೆ ಮಾಡಿದೆ.
Look who made a pitstop at @CSMIA_Official! The Airbus Beluga Super Transporter made its first appearance at #MumbaiAirport and left us all awestruck. Tell us what you think of its unique design.#GatewayToGoodness #Beluga #Aviation #PlaneSpotting #AviationDaily #Airbus pic.twitter.com/T4W1OCkduG
— CSMIA (@CSMIA_Official) November 22, 2022
ತಿಮಿಂಗಿಲದ ಆಕಾರದ ವಿಮಾನವು ಇಂಧನ ತುಂಬಲು ಮತ್ತು ಸಿಬ್ಬಂದಿ ವಿಶ್ರಾಂತಿಗಾಗಿ ಅಹಮದಾಬಾದ್‌ನಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಮಧ್ಯರಾತ್ರಿ 12.30 ರ ಸುಮಾರಿಗೆ ಆಗಮಿಸಿತು. ವಿಶ್ವದ ಅತಿದೊಡ್ಡ ವಿಮಾನಗಳಲ್ಲಿ ಒಂದಾದ Airbus Beluga (ನಂ. 3) ಸಿಬ್ಬಂದಿ ವಿಶ್ರಾಂತಿ ಮತ್ತು ಇಂಧನ ತುಂಬುವುದಕ್ಕಾಗಿ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಕೋಲ್ಕತ್ತಾ ವಿಮಾನ ನಿಲ್ದಾಣ ಟ್ವೀಟ್ ಮಾಡಿದೆ. ವಿಮಾನವು ರಾತ್ರಿ 9 ಗಂಟೆಗೆ ನಗರದಿಂದ ಥಾಯ್ಲೆಂಡ್‌ಗೆ ತೆರಳಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:30 am, Thu, 24 November 22