AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price on November 24: ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿನಿಂದ ಯಥಾಸ್ಥಿತಿಯಲ್ಲಿದೆ ಪೆಟ್ರೋಲ್, ಡೀಸೆಲ್ ಬೆಲೆ

Fuel Price Today: ಭಾರತದ ರಾಜಧಾನಿ ದೆಹಲಿಯಲ್ಲಿ ಇಂದು (ಗುರುವಾರ) ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.62 ರೂ. ಆಗಿದೆ.

Petrol Price on November 24: ಭಾರತದ ಪ್ರಮುಖ ನಗರಗಳಲ್ಲಿ 6 ತಿಂಗಳಿನಿಂದ ಯಥಾಸ್ಥಿತಿಯಲ್ಲಿದೆ ಪೆಟ್ರೋಲ್, ಡೀಸೆಲ್ ಬೆಲೆ
ಪೆಟ್ರೋಲ್ ಬೆಲೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 24, 2022 | 9:04 AM

Fuel Price on November 24: ಇಂದು (ಗುರುವಾರ) ದೇಶದಾದ್ಯಂತ ಹೊಸ ಪೆಟ್ರೋಲ್ (Petrol Price)-ಡೀಸೆಲ್ ಬೆಲೆಗಳನ್ನು (Diesel Price) ಬಿಡುಗಡೆ ಮಾಡಲಾಗಿದೆ. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲಿಯಂ ಕಂಪನಿಗಳು ಇಂಧನದ ಬೆಲೆಯನ್ನು ಬಿಡುಗಡೆ ಮಾಡುತ್ತವೆ. ಇಂದು ನವೆಂಬರ್ 24ರಂದು ದೇಶಾದ್ಯಂತ ಇಂಧನದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮೇ 22ರಿಂದ ದೇಶಾದ್ಯಂತ ತೈಲದ ಬೆಲೆ ಸ್ಥಿರವಾಗಿದೆ.

ಭಾರತದ ರಾಜಧಾನಿ ದೆಹಲಿಯಲ್ಲಿ ವಾರದ ನಾಲ್ಕನೇ ದಿನವಾದ ಇಂದು (ಗುರುವಾರ) ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.62 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 106.31 ರೂ. ಮತ್ತು 1 ಲೀಟರ್ ಡೀಸೆಲ್ ಬೆಲೆ ಲೀಟರ್‌ಗೆ 94.27 ರೂ. ಆಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಐದೂವರೆ ತಿಂಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ. OPEC ರಾಷ್ಟ್ರಗಳು ಕಚ್ಚಾ ಉತ್ಪಾದನೆಯಲ್ಲಿ ಕಡಿತದ ಘೋಷಣೆ ಮಾಡಿದ ನಂತರ ಕಚ್ಚಾ ತೈಲದಲ್ಲಿ ಏರಿಳಿತಗಳಾಗಿತ್ತು. ನವೆಂಬರ್ 1ರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ತೈಲಕ್ಕೆ 40 ಪೈಸೆ ಪರಿಹಾರವನ್ನು ನೀಡುವ ನಿರೀಕ್ಷೆಯಿತ್ತು. ಆದರೆ ಕಂಪನಿಗಳು ಇದನ್ನು ಮಾಡಲಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 6 ತಿಂಗಳಿನಿಂದ ಪೆಟ್ರೋಲ್ -ಡೀಸೆಲ್ ಬೆಲೆ ಸ್ಥಿರವಾಗಿದೆ. ಇದು ಜನಸಾಮಾನ್ಯರಿಗೆ ನೆಮ್ಮದಿ ತಂದಿದೆ.

ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂ. ಮತ್ತು ಡೀಸೆಲ್‌ಗೆ 6 ರೂ. ಕಡಿತಗೊಳಿಸಿದ್ದರಿಂದ ಮೇ ತಿಂಗಳಲ್ಲಿ ಇಂಧನದ ಬೆಲೆಯಲ್ಲಿ ಕೊಂಚ ಏರಿಳಿತ ಕಂಡುಬಂದಿತ್ತು. ಪರಿಷ್ಕೃತ ದರಗಳ ಪ್ರಕಾರ, ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಗಳು ಹೀಗಿವೆ…

ಇದನ್ನೂ ಓದಿ: Petrol Price on November 18: ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಕುಸಿತ; ಈ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ದುಬಾರಿ

ದೆಹಲಿಯಲ್ಲಿ ಪೆಟ್ರೋಲ್ 96.72 ರೂ. ಮತ್ತು ಡೀಸೆಲ್ ಲೀಟರ್‌ಗೆ 89.62 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 106.31 ರೂ. ಮತ್ತು ಡೀಸೆಲ್ ಲೀಟರ್‌ಗೆ 94.27 ರೂ. ಚೆನ್ನೈನಲ್ಲಿ ಪೆಟ್ರೋಲ್ 102.63 ರೂ. ಮತ್ತು ಡೀಸೆಲ್ ಲೀಟರ್‌ಗೆ 94.24 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ 106.03 ರೂ. ಮತ್ತು ಡೀಸೆಲ್ ಲೀಟರ್‌ಗೆ 92.76 ರೂ. ನೊಯ್ಡಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.65 ರೂ. ಮತ್ತು ಡೀಸೆಲ್ 89.82 ರೂ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.57 ರೂ. ಮತ್ತು ಡೀಸೆಲ್ 89.76 ರೂ. ಜೈಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 108.48 ರೂ. ಮತ್ತು ಡೀಸೆಲ್ 93.72 ರೂ. ತಿರುವನಂತಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.71 ರೂ. ಮತ್ತು ಡೀಸೆಲ್ 96.52 ರೂ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.24 ರೂ. ಮತ್ತು ಡೀಸೆಲ್ 94.04 ರೂ. ಗುರುಗ್ರಾಮದಲ್ಲಿ 97.18 ರೂ. ಮತ್ತು ಡೀಸೆಲ್ ಲೀಟರ್‌ಗೆ 90.05 ರೂ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 101.94 ರೂ. ಮತ್ತು ಡೀಸೆಲ್ 87.89 ರೂ. ಭುವನೇಶ್ವರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 103.19 ರೂ. ಮತ್ತು ಡೀಸೆಲ್ 94.76 ರೂ. ಚಂಡೀಗಢದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 96.20 ರೂ. ಮತ್ತು ಡೀಸೆಲ್ 84.26 ರೂ. ಹೈದರಾಬಾದ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 109.66 ರೂ. ಮತ್ತು ಡೀಸೆಲ್ 97.82 ರೂ. ಆಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ 24 ಗಂಟೆಗಳಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು ಒಂದು ಡಾಲರ್‌ಗಳಷ್ಟು ಕುಸಿದಿದೆ. ಮೇ 22ರಂದು ತೈಲದ ಬೆಲೆಯಲ್ಲಿ ಕೊನೆಯ ಬದಲಾವಣೆಯಾಗಿತ್ತು. 5 ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿರುವುದು ಇದೇ ಮೊದಲು. ಮೇ 22ರಂದು ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದರಿಂದಾಗಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಯಿತು. ಇದರ ನಂತರ, ಮಹಾರಾಷ್ಟ್ರದಲ್ಲಿ ತೈಲದ ಮೇಲಿನ ವ್ಯಾಟ್ ಅನ್ನು ಕಡಿಮೆಗೊಳಿಸಲಾಯಿತು. ಇದರಿಂದಾಗಿ ಇಂಧನ ಬೆಲೆ ಕಡಿಮೆಯಾಯಿತು.

ಇದನ್ನೂ ಓದಿ: Petrol Price on November 22: ಕೊಂಚ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಗೆ ಮತ್ತೆ ಬ್ರೇಕ್; ಇಂದಿನ ಇಂಧನದ ದರ ಹೀಗಿದೆ

ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳು ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. OMCಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿವೆ.

ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿದ ನಂತರ ದರವನ್ನು ನಿಗದಿಪಡಿಸುತ್ತವೆ. ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ SMS ಮೂಲಕ ಪರಿಶೀಲಿಸಬಹುದು. ನೀವು ಇಂಡಿಯನ್ ಆಯಿಲ್‌ನ ಗ್ರಾಹಕರಾಗಿದ್ದರೆ, ನೀವು RSP ಡೀಲರ್ ಕೋಡ್ ಅನ್ನು ಬರೆಯುವ ಮೂಲಕ 9224992249 ಸಂಖ್ಯೆಗೆ SMS ಕಳುಹಿಸಬಹುದು ಮತ್ತು ನೀವು HPCL ಗ್ರಾಹಕರಾಗಿದ್ದರೆ ನೀವು HPPRICE ಡೀಲರ್ ಕೋಡ್ ಅನ್ನು ಟೈಪ್ ಮಾಡುವ ಮೂಲಕ 9222201122 ಸಂಖ್ಯೆಗೆ SMS ಕಳುಹಿಸಬಹುದು. BPCL ಗ್ರಾಹಕರು ಡೀಲರ್ ಕೋಡ್ ಅನ್ನು ನಮೂದಿಸುವ ಮೂಲಕ 9223112222ಗೆ RSP ಕಳುಹಿಸಬಹುದು. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವ್ಯಾಟ್ ಮತ್ತು ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳಲ್ಲಿನ ವ್ಯತ್ಯಾಸವು ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ಮಿನಿಸ್ಟರ್ ಜಮೀರ್ ಅಹ್ಮದ್ ಖಾನ್ ಸಾಹಬ್​ ಕೋ ಗುಸ್ಸಾ ಕ್ಯೋಂ ಆತಾ ಹೈ?
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ರಿಹ್ಯಾಬ್ ಸೆಂಟರ್​ಗಳ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಮರದ ಕೊಂಬೆ ಬಿದ್ದು ಅಕ್ಷಯ್​ ಬ್ರೈನ್ ಡೆಡ್:ಮೊಮ್ಮಗನಿಗಾಗಿ ಅಜ್ಜ-ಅಜ್ಜಿ ಪೂಜೆ
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಭಾಗಿಯಾಗಿರಲಿಲ್ಲ: ಅಧಿಕಾರಿಗಳು
ಕಾರ್ಯಕ್ರಮದಲ್ಲಿ ಶಿವಕುಮಾರ್​ಗೆ ಭಾರೀ ಕರತಾಡನ ಮತ್ತು ಶಿಳ್ಳೆ
ಕಾರ್ಯಕ್ರಮದಲ್ಲಿ ಶಿವಕುಮಾರ್​ಗೆ ಭಾರೀ ಕರತಾಡನ ಮತ್ತು ಶಿಳ್ಳೆ
ನಂದಿನಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿದೆ: ಸಿಟಿ ರವಿ
ನಂದಿನಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಮಳಿಗೆಗಳನ್ನು ಸ್ಥಾಪಿಸಿದೆ: ಸಿಟಿ ರವಿ
ರಾಜಾ ರಘುವಂಶಿ ಹನಿಮೂನ್​ಗೆಂದು ಮನೆಯಿಂದ ಹೊರಟ ವಿಡಿಯೋ
ರಾಜಾ ರಘುವಂಶಿ ಹನಿಮೂನ್​ಗೆಂದು ಮನೆಯಿಂದ ಹೊರಟ ವಿಡಿಯೋ
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ರಸ್ತೆ ಮೇಲೆ 15 ಅಡಿ ನೀರು
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ರಸ್ತೆ ಮೇಲೆ 15 ಅಡಿ ನೀರು
ಸ್ವಚ್ಛ ಬೆಂಗಳೂರು ಕಾರ್ಯಕ್ರಮ ಶೀಘ್ರದಲ್ಲಿ ಜಾರಿಗೊಳ್ಳಲಿದೆ: ಶಿವಕುಮಾರ್
ಸ್ವಚ್ಛ ಬೆಂಗಳೂರು ಕಾರ್ಯಕ್ರಮ ಶೀಘ್ರದಲ್ಲಿ ಜಾರಿಗೊಳ್ಳಲಿದೆ: ಶಿವಕುಮಾರ್
ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!
ನೈಟ್ ರೈಡರ್ಸ್ ವಿರುದ್ಧ 11 ರನ್​ಗಳಿಂದ ಗೆದ್ದ ಗ್ಲೆನ್ ಮ್ಯಾಕ್ಸ್​ವೆಲ್..!