LAC: ಚೀನಾ ಗಡಿಯುದ್ದಕ್ಕೂ ಬಲ ಹೆಚ್ಚಿಸಿಕೊಳ್ಳುತ್ತಿರುವ ಭಾರತೀಯ ಸೇನೆ; ಆರ್ಟಿಲರಿ, ರಾಕೆಟ್​, ಡ್ರೋಣ್​​ ನಿಯೋಜನೆ

ಚೀನಾ ಗಡಿ ಪ್ರವೇಶಿಸಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಆರ್ಟಿಲರಿ ಗನ್ (ಫಿರಂಗಿ), ಡ್ರೋಣ್​ಗಳು, ದೂರಗಾಮಿ ರಾಕೆಟ್​ಗಳು, ಟ್ಯಾಂಕ್​ಗಳನ್ನು ಭಾರತೀಯ ಸೇನೆಯು ನಿಯೋಜಿಸಿದೆ.

LAC: ಚೀನಾ ಗಡಿಯುದ್ದಕ್ಕೂ ಬಲ ಹೆಚ್ಚಿಸಿಕೊಳ್ಳುತ್ತಿರುವ ಭಾರತೀಯ ಸೇನೆ; ಆರ್ಟಿಲರಿ, ರಾಕೆಟ್​, ಡ್ರೋಣ್​​ ನಿಯೋಜನೆ
ಚೀನಾ ಗಡಿಯಲ್ಲಿ ಭಾರತೀಯ ಸೇನೆ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 24, 2022 | 8:38 AM

ದೆಹಲಿ: ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಭಾರತೀಯ ಸೇನೆಯು ಬಲ ಹೆಚ್ಚಿಸಿಕೊಳ್ಳುತ್ತಿದೆ. ಗಡಿಯಲ್ಲಿ ರಸ್ತೆ, ಸೇತುವೆಯಂಥ ಮೂಲ ಸೌಕರ್ಯಗಳನ್ನು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಪಡಿಸಲೂ ಸರ್ಕಾರವು ಮುಂದಾಗಿದೆ. ಲಡಾಖ್​ನಲ್ಲಿ ಚೀನಾ ಗಡಿ ಪ್ರವೇಶಿಸಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಆರ್ಟಿಲರಿ ಗನ್ (ಫಿರಂಗಿ), ಡ್ರೋಣ್​ಗಳು, ದೂರಗಾಮಿ ರಾಕೆಟ್​ಗಳು, ಟ್ಯಾಂಕ್​ಗಳು, ಬೇಹುಗಾರಿಕಾ ವೈಮಾನಿಕ ಸಾಧನಗಳು, ಸಂಘರ್ಷದ ವೇಳೆ ಬಳಕೆಯಾಗುವ ವಾಹನಗಳನ್ನು (Futuristic Infantry Combat Vehicles – FICVs) ಗಡಿಯಲ್ಲಿ ದೊಡ್ಡಮಟ್ಟದಲ್ಲಿ ನಿಯೋಜಿಸಲಾಗಿದೆ. ಸುಮಾರು ಎರಡೂವರೆ ವರ್ಷಗಳಿಂದ (30 ತಿಂಗಳು) ಭಾರತ ಮತ್ತು ಚೀನಾ ಸೇನೆಗಳು ಗಡಿಯಲ್ಲಿ ಮುಖಾಮುಖಿಯಾಗಿ ಸನ್ನದ್ಧ ಸ್ಥಿತಿಯಲ್ಲಿವೆ. ಗಡಿಯಾಚೆಗೆ ಚೀನಾ ಸೇನೆಯ ಚಲನವಲನಗಳನ್ನು ಭಾರತ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ.

ವಿವಾದಿತ ವಾಸ್ತವ ನಿಯಂತ್ರಣ ರೇಖೆಯಲ್ಲಿರುವ (Line of Actual Control – LAC) ಮುಂಚೂಣಿ ಸೇನಾ ಠಾಣೆಗಳನ್ನು ಸುಧಾರಿಸಲು ಭಾರತ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಹಲವು ಪರಿಕರಗಳನ್ನು ತುರ್ತಾಗಿ ಖರೀದಿಸಲಾಗುತ್ತಿದೆ. ಚೀನಾ ಗಡಿಯ ಅಗತ್ಯಗಳನ್ನು ಈಡೇರಿಸಲು ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಲಾಗಿದ್ದು, ಫೀಲ್ಡ್ ಕಮಾಂಡರ್​ಗಳು ಮುಂದಿಡುವ ಬೇಡಿಕೆಗಳನ್ನು ಆದ್ಯತೆ ಮೇರೆ ಪರಿಗಣಿಸಲಾಗುತ್ತಿದೆ. ಹಲವು ಹೊಸ ಯೋಜನೆಗಳನ್ನೂ ರಕ್ಷಣಾ ಇಲಾಖೆಯು ರೂಪಿಸಿದ್ದು, ಸೇನೆಯ ಸಾಮರ್ಥ್ಯ ಹೆಚ್ಚಿಸಲು ನಿರ್ಧರಿಸಲಾಗಿದೆ.

ಲಡಾಖ್ ವಲಯದ ಚೀನಾ ಗಡಿಯಲ್ಲಿ ರಸ್ತೆ ಹಾಗೂ ಇತರ ಮೂಲ ಸೌಕರ್ಯಗಳನ್ನು ಸುಧಾರಿಸಲು ಭಾರತ ಸರ್ಕಾರವು ಗಮನ ಹರಿಸುತ್ತಿದೆ. ಸಮುದ್ರಮಟ್ಟದಿಂದ 18,000 ಅಡಿಗಳಷ್ಟು ಎತ್ತರದಲ್ಲಿ ಸೇನಾ ಪಡೆಗಳಿಗೆ ಅತ್ಯಾಧುನಿಕ ಗುಡಾರಗಳನ್ನು ನಿರ್ಮಿಸಲಾಗಿದೆ. ಗುಡ್ಡಗಳ ಮೇಲೆ ಕುಂಟೆಗಳನ್ನು ರೂಪಿಸಿದ್ದು, ಸೈನಿಕರಿಗೆ ಕುಡಿಯುವ ನೀರಿನ ಅಗತ್ಯವನ್ನು ಇವು ಈಡೇರಿಸುತ್ತವೆ. ಅತ್ಯಗತ್ಯ ಸಂದರ್ಭದಲ್ಲಿ ಮುಂಚೂಣಿ ಠಾಣೆಗಳು ಹಾಗೂ ಗಡಿ ಪ್ರದೇಶಕ್ಕೆ ಕ್ಷಿಪ್ರಗತಿಯಲ್ಲಿ ತುಕಡಿಗಳನ್ನು ರವಾನಿಸಲು ಸಾಧ್ಯವಾಗುವಂತೆ ಬ್ಯಾರಕ್​ಗಳನ್ನು ನಿರ್ಮಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

ಶಸ್ತ್ರಾಸ್ತ್ರಗಳು ಹಾಗೂ ಯುದ್ಧೋಪಕರಣಗಳನ್ನು ಸುರಕ್ಷಿತವಾಗಿ ದಾಸ್ತಾನು ಮಾಡಿಕೊಳ್ಳಲು ವ್ಯವಸ್ಥೆ ರೂಪಿಸಲಾಗಿದೆ. ಟ್ಯಾಂಕ್​, ಶೆಲ್, ವಿಮಾನ-ಹೆಲಿಕಾಪ್ಟರ್​ಗಳ ಹಾರಾಟಕ್ಕೆ ಅವಕಾಶ ಕಲ್ಪಿಸುವ ಏರ್​ಫೀಲ್ಡ್​ಗಳು, ಹೊಸ ರಸ್ತೆ, ಸೇತುವೆ, ಸುರಂಗ, ಗೌಪ್ಯ ಭೂಗರ್ಭ ಗೋದಾಮುಗಳನ್ನು ಈ ಪ್ರದೇಶದಲ್ಲಿ ರೂಪಿಸಲಾಗಿದೆ. ಚಳಿಗಾಲದ ಪ್ರತಿಕೂಲ ಹವಾಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ, ಇತರೆಡೆಯಿಂದ ನೆರವು ಸಿಗುವವರೆಗೆ, ಹಲವು ದಿನಗಳವರೆಗೆ ಗಡಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವಂತೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಲಾಗಿದೆ.

‘ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಗಮನ ಹರಿಸುತ್ತಿರುವುದು ಶ್ಲಾಘನೀಯ ಸಂಗತಿ. ಶಾಂತಿಕಾಲದಲ್ಲಿ ಪರಿಣಾಮಕಾರಿಯಾಗಿ ಗಡಿ ನಿರ್ವಹಿಸಲು ರಸ್ತೆ, ಸೇತುವೆಯಂಥ ಮೂಲ ಸೌಕರ್ಯಗಳು ಅತ್ಯಗತ್ಯ’ ಎಂಬ ಭಾರತೀಯ ಸೇನೆಯ ಉತ್ತರ ವಿಭಾಗದಲ್ಲಿ ಕಮಾಂಡರ್ ಆಗಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಡಿ.ಎಸ್.ಹೂಡಾ ಅವರ ಹೇಳಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್​’ಗೆ ವರದಿ ಮಾಡಿದೆ.

ಮೇ 2020ರ ಭಾರತ ಮತ್ತು ಚೀನಾ ನಡುವೆ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆ. ಹಲವು ಬಾರಿ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿದ್ದು, ಎರಡೂ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿವೆ. ಆದರೆ ಟಿಬೆಟ್​ ಪ್ರಸ್ಥಭೂಮಿಯಲ್ಲಿ ಚೀನಾ ಮಿಲಿಟರಿ ಬಲ ಹೆಚ್ಚಿಸಿಕೊಳ್ಳುತ್ತಿರುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಭಾರತವು ಚಳಿಗಾಲದಲ್ಲಿಯೂ ಸೇನಾ ನಿಯೋಜನೆ ಕಡಿಮೆ ಮಾಡುತ್ತಿಲ್ಲ. ಗಡಿಯಲ್ಲಿ ಶಾಶ್ವತವಾಗಿ ಸೇನೆಯನ್ನು ನಿಯೋಜಿಸಲು ಅನುವಾಗುವಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಮುಂದಾಗಿದೆ.

‘ಚೀನಾ ಆಡಳಿತಕ್ಕೆ ಅರ್ಥವಾಗುವುದು, ಅವರು ಗೌರವ ಕೊಡುವುದು ಕೇವಲ ಬಲಕ್ಕೆ ಮಾತ್ರ. ಗಡಿಯಲ್ಲಿ ಅವರ ಸೇನಾ ಬಲವನ್ನು ಸಮರ್ಥವಾಗಿ ಎದುರಿಸುವಷ್ಟು ಬಲವನ್ನು ಭಾರತೀಯ ಸೇನೆಯೂ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಅಪಾಯ ತಪ್ಪಿದ್ದಲ್ಲ. ಮುಂಚೂಣಿ ನೆಲೆಗಳಲ್ಲಿ ಎರಡೂ ದೇಶಗಳ ಸೈನಿಕರು ಕಣ್ಣಳತೆಯ ದೂರದಲ್ಲಿದ್ದಾರೆ. ಹೀಗಾಗಿ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಭಾರತಕ್ಕೆ ಅನಿವಾರ್ಯ’ ಎಂದು ಅಭಿಪ್ರಾಯಪಡುತ್ತಾರೆ ಲೆಫ್ಟಿನೆಂಟ್ ಜನರಲ್ ವಿನೋದ್ ಭಾಟಿಯಾ.

Published On - 8:37 am, Thu, 24 November 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ