International Coastal Cleanup Day: ದೇಶಾದ್ಯಂತ 75 ದಿನಗಳಲ್ಲಿ 75 ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನ

| Updated By: Rakesh Nayak Manchi

Updated on: Jun 17, 2022 | 10:08 AM

ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ 75 ದಿನಗಳಲ್ಲಿ 75 ಸಮುದ್ರ ತೀರಗಳನ್ನು ಸ್ವಚ್ಛತೆ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಅಭಿಯಾನವು ಜು.3ರಿಂದ ಆರಂಭವಾಗಲಿದೆ.

International Coastal Cleanup Day: ದೇಶಾದ್ಯಂತ 75 ದಿನಗಳಲ್ಲಿ 75 ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನ
ಸಾಂಕೇತಿಕ ಚಿತ್ರ
Follow us on

ದೆಹಲಿ: ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮಾಚರಣೆಯ ಆಜಾದಿ ಕಾ ಅಮೃತ್ ಮಹೋತ್ಸವದ ಪ್ರಯುಕ್ತ ದೇಶಾದ್ಯಂತ 75 ದಿನಗಳಲ್ಲಿ 75 ಸಮುದ್ರ ತೀರಗಳನ್ನು ಸ್ವಚ್ಛತೆ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ‘ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ 2022’ ಅಭಿಯಾನದ ಸಿದ್ಧತೆಗಳ ಪರಿಶೀಲನೆಗಾಗಿ ಭೂ ವಿಜ್ಞಾನ ಸಚಿವಾಲಯದ ಪ್ರಧಾನ ಕಚೇರಿಯ ಪೃಥ್ವಿ ಭವನದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

ಈ ಬಾರಿಯ ವಾರ್ಷಿಕ ಕಾರ್ಯಕ್ರಮವು ಪ್ರತಿ ವರ್ಷದ ಸೆಪ್ಟೆಂಬರ್ 3ನೇ ಶನಿವಾರದ ಬದಲಾಗಿ ಸೆ.17ರಂದು ಬರುತ್ತಿದೆ. 2022ರ ಜುಲೈ 3 ರಿಂದ ಸೆಪ್ಟೆಂಬರ್ 17 ರವರೆಗೆ 75 ದಿನಗಳ ಕಾಲ ದೇಶಾದ್ಯಂತ 75 ಸಮುದ್ರ ತೀರಗಳಲ್ಲಿ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು. ಆದ್ರೆ ಕಾಕತಾಳೀಯವೆಂಬಂತೆ ಸ್ವಚ್ಛತೆಯ ಕಾರಣಕ್ಕಾಗಿ ಪ್ರವರ್ತಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಇದೇ ದಿನವಿದೆ. ಈ ಕಾರ್ಯಕ್ರಮವು ದೇಶದ ಸ್ವಾತಂತ್ರ್ಯದ 75ನೇ ವರ್ಷದ ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯೊಂದಿಗೆ ಹೊಂದಿಕೊಂಡಿದೆ ಎಂದರು.

ಇದನ್ನೂ ಓದಿ: PM Narendra Modi: ಗುಜರಾತ್​​ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ; 21,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

ಸ್ವಚ್ಛ ಸಾಗರ, ಸುರಕ್ಷಿತ ಸಾಗರಕ್ಕೆ ಸಹಭಾಗಿತ್ವ ಅಗತ್ಯ
ಇದು ಮೊದಲ ಬಾರಿಗೆ ಮತ್ತು ದೀರ್ಘಾವಧಿಯ ಕರಾವಳಿ ಸ್ವಚ್ಛತಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎಂದ ಕೇಂದ್ರ ಸಚಿವರು, ಕರಾವಳಿ ಭಾಗ ಮಾತ್ರವಲ್ಲದೆ ದೇಶದ ಇತರ ಭಾಗಗಳ ಏಳಿಗೆಗಾಗಿ ಸ್ವಚ್ಛ ಸಾಗರ, ಸುರಕ್ಷಿತ ಸಾಗರ ಎಂಬ ಸಂದೇಶ ಸಾರಲು ಶ್ರೀಸಾಮಾನ್ಯರ ಸಹಭಾಗಿತ್ವ ಅತ್ಯಗತ್ಯ ಎಂದರು.

ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ, ಕರಾವಳಿಯೇತರ ಪ್ರದೇಶಗಳು ಸಹ ವಿವಿಧ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಇತರ ಸಂಸ್ಥೆಗಳಲ್ಲಿ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಗಳು ಅಥವಾ ಇತರೆ ವಿಭಾಗಗಳ ಮೂಲಕ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದಂದು ಸ್ಥಳೀಯ ಜನರಿಗೆ ಸಂದೇಶವನ್ನು ಪ್ರಸಾರ ಮಾಡಲು ಕಾರ್ಯಕ್ರಮ ಯೋಜಿಸಬೇಕು. ಕರಾವಳಿಯ ಸ್ವಚ್ಛತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಜ್ಞಾನ ಮತ್ತು ಮಾಹಿತಿಯನ್ನು ಹಂಚಿಕೊಳ್ಳುವುದು ದೇಶದ ಒಟ್ಟಾರೆ ಹಿತಾಸಕ್ತಿಯಾಗಿದೆ ಎಂದರು.

ಇದೇ ವೇಳೆ ಕೇಂದ್ರ ಸಚಿವರು ಕಾರ್ಯಕ್ರಮದ ಲೋಗೋ, ಜಾಹೀರಾತು, ಟ್ಯಾಗ್ ಲೈನ್ ಮತ್ತು ಅದಕ್ಕೆ ಸಂಬಂಧಿಸಿದ ಇತರ ಅಂಶಗಳನ್ನು ಪೂರ್ವವೀಕ್ಷಣೆ ಮಾಡಿದರು. ಸಭೆಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗಳ ಡಿಜಿ, ಭೂ ವಿಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ತೊಡಗಿರುವ ಇತರ ಸಂಸ್ಥೆಗಳು ಭಾಗವಹಿಸಿದ್ದವು.

ಇದನ್ನೂ ಓದಿ: Agnipath Scheme: ಅಗ್ನಿಪಥ್ ಯೋಜನೆಯ ಅಗ್ನಿವೀರರ ಗರಿಷ್ಠ ವಯೋಮಿತಿ 23 ವರ್ಷಕ್ಕೆ ಏರಿಕೆ; ಶೀಘ್ರದಲ್ಲೇ ನೇಮಕಾತಿ ಶುರು

1,500 ಟನ್ ಕಸವನ್ನು ತೆಗೆದುಹಾಕುವ ಗುರಿ
75 ದಿನಗಳ ಸುದೀರ್ಘ ಕಾರ್ಯಕ್ರಮವು ಜುಲೈ 3ರಂದು ಪ್ರಾರಂಭವಾಗುತ್ತದೆ. ಕರಾವಳಿ ರಾಜ್ಯಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ಪಾಲ್ಗೊಳ್ಳಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಈ ಅಭಿಯಾನದ ಮೂಲಕ ಸಮುದ್ರ ತೀರದಿಂದ 1,500 ಟನ್ ಕಸವನ್ನು ತೆಗೆದುಹಾಕುವ ಗುರಿ ಹೊಂದಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ

ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ