
ಹೈದರಾಬಾದ್, ಅಕ್ಟೋಬರ್ 27: ಪ್ರೀತಿ ಕುರುಡು ಅಂತಾರೆ. ಅದು ಬಹುತೇಕ ಪ್ರಕರಣಗಳಲ್ಲಿ ನಿಜವೂ ಆಗಿದೆ. ಯುವಕನೊಬ್ಬನ ಮೇಲೆ ಕ್ರಶ್ ಹೊಂದಿದ್ದ ಇಬ್ಬರು ಮಹಿಳೆಯರು ಆತನಿಗಾಗಿ ಜಗಳವಾಡಿದ್ದಾರೆ. ಒಂಗೋಲ್‌ನಲ್ಲಿ ಅಡುಗೆ ಕೆಲಸ ಮಾಡುವ ಇಬ್ಬರು ಮಹಿಳೆಯರು ಸ್ನೇಹಿತರಾಗಿದ್ದರು. ಇಬ್ಬರೂ ವಿವಾಹಿತರಾಗಿದ್ದರು. ಅವರಿಬ್ಬರೂ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ವಿವಾಹೇತರ ಸಂಬಂಧ (Extra Marital Affair) ಹೊಂದಿದ್ದು, ಇಬ್ಬರೂ ಈ ವಿಷಯ ಯಾರಿಗೂ ಗೊತ್ತಿಲ್ಲ ಎಂಬಂತೆ ಸಾಮಾನ್ಯವಾಗಿಯೇ ಬದುಕುತ್ತಿದ್ದರು.
ಆದರೆ, ಇತ್ತೀಚೆಗೆ ಇಬ್ಬರು ಮಹಿಳೆಯರ ನಡುವೆ ಆ ಯುವಕನಿಗಾಗಿ ಜಗಳಗಳು ಪ್ರಾರಂಭವಾದವು. ಈ ಕಾರಣದಿಂದಾಗಿ ಯುವಕ ಅವರಲ್ಲಿ ಓರ್ವ ಮಹಿಳೆಯಿಂದ ದೂರವಾದನು. ಇದಾದ ನಂತರ ಜಗಳ ನಡೆದು, ಆಕೆ ಈ ವಿಷಯದಲ್ಲಿ ಕೇಸ್ ದಾಖಲಿಸಿದಳು. ಪೊಲೀಸರು ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಳಿಯನ ಜೊತೆ ಅಕ್ರಮ ಸಂಬಂಧ ಆರೋಪ: ಮಹಿಳೆ ಮೇಲೆ ಕುಟುಂಬಸ್ಥರಿಂದಲೇ ಅಮಾನವೀಯ ಕೃತ್ಯ
ಪೊಲೀಸರ ಪ್ರಕಾರ, ಒಂಗೋಲ್‌ನ ಚಂದ್ರಾಯ ನಗರದಲ್ಲಿ ವಾಸಿಸುವ ಸ್ನೇಹಿತರಾದ ಇಬ್ಬರು ಮಹಿಳೆಯರು ಅಡುಗೆ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಅಲ್ಲಿ ಕೆಲಸ ಮಾಡುವ ಯುವಕನ ಮೇಲೆ ಮೋಹಗೊಂಡು ಅವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಈ ಲೈಂಗಿಕ ಸಂಬಂಧದಿಂದಾಗಿ ಇಬ್ಬರು ಮಹಿಳೆಯರ ನಡುವೆ ಜಗಳ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 25ರಂದು ಅವರಲ್ಲಿ ಒಬ್ಬಳನ್ನು ಅಪಹರಿಸಿ, ಆಕೆಯನ್ನು ಹಿಂಸಿಸಿ, ಬಟ್ಟೆಗಳನ್ನು ಬಿಚ್ಚಿ, ಹಲ್ಲೆ ನಡೆಸಲಾಗಿತ್ತು. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು. ಅದು ವೈರಲ್ ಆಗಿತ್ತು.
ಇದಾದ ನಂತರ ಆ ಮಹಿಳೆ ತನ್ನ ಸ್ನೇಹಿತನ ಸಹಾಯದಿಂದ ತಪ್ಪಿಸಿಕೊಂಡು, ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ನಡೆದ ಘಟನೆ ತಿಳಿಸಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Mon, 27 October 25