ದೆಹಲಿ ಆಗಸ್ಟ್ 04: ಸತ್ಯ ಗೆಲ್ಲುತ್ತದೆ, ನನ್ನ ಹಾದಿ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ನಮ್ಮ ಜೊತೆ ನಿಂತ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಮೋದಿ ಉಪನಾಮ (Modi Surname Case) ಟೀಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ (Supreme Court) ಮಧ್ಯಂತರ ತಡೆ ನೀಡಿದ ನಂತರ ರಾಹುಲ್ ಇಂದು(ಶುಕ್ರವಾರ) ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ್ದಾರೆ. “ಆಜ್ ನಹೀ ತೋಹ್ ಕಲ್, ಕಲ್ ನಹೀ ತೋ ಪರ್ಸೋ ಸಚ್ ಕಿ ಜೀತ್ ಹೋತಿ ಹೈ ( ಇವತ್ತು ಅಲ್ಲದಿದ್ದರೆ ನಾಳೆ, ನಾಳೆ ಅಥವಾ ನಾಡಿದ್ದು ಸತ್ಯ ಗೆದ್ದೇ ಗೆಲ್ಲುತ್ತದೆ). ನನ್ನ ಹಾದಿ ಸ್ಪಷ್ಟವಾಗಿದೆ. ನಾನು ಏನು ಮಾಡಬೇಕು ಮತ್ತು ನನ್ನ ಕೆಲಸ ಏನು ಎಂದು ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇದೆ. ನಮಗೆ ಸಹಾಯ ಮಾಡಿದ ಜನರಿಗೆ ನಾನು ಧನ್ಯವಾದಗಳು . ಜನರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಏನೇ ಬಂದರೂ ಭಾರತದ ಕಲ್ಪನೆಯನ್ನು ರಕ್ಷಿಸುವ ನನ್ನ ಕರ್ತವ್ಯ ಎಂದಿನಂತೆಯೇ ಇರುತ್ತದೆ ಎಂದು ರಾಹುಲ್ ಗಾಂಧಿ ಇದಕ್ಕಿಂತ ಮುಂಚೆ ಟ್ವೀಟ್ ಮಾಡಿದ್ದರು.
2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಅವರ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ ನಂತರ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಛಿ ನಡೆಸಿದ್ದಾರೆ. ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ‘ಪ್ರಜಾಪ್ರಭುತ್ವ, ಸಂವಿಧಾನದ ಗೆಲುವು’ .ನಾನು ಸುಪ್ರೀಂಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
LIVE: Congress Party briefing by Shri @kharge, Shri @RahulGandhi, Shri @DrAMSinghvi, Shri @adhirrcinc and Shri @Jairam_Ramesh on Supreme Court’s verdict in Shri @RahulGandhi‘s defamation case. https://t.co/i2oabIzoM5
— Congress (@INCIndia) August 4, 2023
ಇದು ರಾಹುಲ್ ಗಾಂಧಿಯವರ ಗೆಲುವು ಮಾತ್ರವಲ್ಲ, ಭಾರತದ ಜನತೆಯ ಗೆಲುವು. ರಾಹುಲ್ ಗಾಂಧಿಯವರು ಸತ್ಯ ಮತ್ತು ದೇಶದ ಹಿತಾಸಕ್ತಿಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 4 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಪಾದಯಾತ್ರೆ ನಡೆಸಿ ಸಮಾಜದ ಎಲ್ಲಾ ವರ್ಗದ ಜನರನ್ನು ಭೇಟಿ ಮಾಡಿದ್ದಾರೆ, ಅವರ ಆಶೀರ್ವಾದ ನಮ್ಮ ಮೇಲಿದೆ. ರಾಹುಲ್ ಗಾಂಧೀಜಿಯನ್ನು ಅನರ್ಹಗೊಳಿಸಲು ಕೇವಲ 24 ಗಂಟೆಗಳು ಬೇಕಾಯಿತು, ಈಗ ಅವರನ್ನು ಯಾವಾಗ ಮರುಸ್ಥಾಪಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ. ಇದು ಜನರ ಗೆಲುವು, ಮತದಾರರ ಗೆಲುವು. ಇದು ವಯನಾಡ್ ಜನತೆಯ ಗೆಲುವು ಎಂದು ಖರ್ಗೆ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ಶಿಕ್ಷೆಯನ್ನು ತಡೆಹಿಡಿಯುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, “ನಮ್ಮಲ್ಲಿ ಆಗ ಚೈತನ್ಯ ತುಂಬಿದೆ. ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಕಾದು ನೋಡಿ, ರಾಹುಲ್ ಗಾಂಧಿ ‘ಬಾಜಿಗರ್’ಆಗುತ್ತಾರೆ. ಸತ್ಯಕ್ಕೆ ಜಯ ಸಿಗಲಿದೆ… ನ್ಯಾಯಾಂಗದ ಮೇಲಿನ ಜನರ ನಂಬಿಕೆ ಇಂದು ಬಲಗೊಂಡಿದೆ ಎಂದು ಹೇಳಿದ್ದಾರೆ.,
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಂಬಂಧಿಸಿದಂತೆ ಸುಪ್ರೀಂ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ರಾಹುಲ್ ಗಾಂಧಿಗೆ ಅವರ ಬಂಗಲೆಯನ್ನು ಖಾಲಿ ಮಾಡಲು ಒಂದು ತಿಂಗಳ ಸಮಯ ನೀಡಿಲ್ಲ ಎಂದು ಸುಪ್ರೀಂ ಹೇಳಿದೆ. ನ್ಯಾಯಾಲಯಗಳು ನೀಡಿದ ಶಿಕ್ಷೆ ಸೂಕ್ತವಲ್ಲ. ಕೊನೆಗೆ ಸತ್ಯವೇ ಗೆದ್ದಿತು ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್; ಶಿಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
ರಾಹುಲ್ ಗಾಂಧಿ ಸಂಸತ್ತಿಗೆ ಮರಳಿದಾಗ ಪ್ರಶ್ನೆಗಳ ಬಿರುಗಾಳಿ ಏಳಲಿದೆ. ಈಗ ಸಂಸತ್ತಿನಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಹುಲ್ ಗಾಂಧಿಯವರ ದೊಡ್ಡ ಧ್ವನಿಯನ್ನು ಬಹಳ ಉತ್ಸುಕತೆಯಿಂದ ಕೇಳಲು ನಾವು ಸಿದ್ಧರಿದ್ದೇವೆ ಎಂದು ಡಾ ಎಎಂ ಸಿಂಘ್ವಿ ಹೇಳಿದ್ದಾರೆ
‘ಮೋದಿ’ ಉಪನಾಮ ಟೀಕೆ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಅಪರಾಧಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ನಂತರ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Fri, 4 August 23