ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ: ದರ್ಶನ ಅವಧಿ ವಿಸ್ತರಣೆ

|

Updated on: Jun 28, 2020 | 2:34 PM

ತಿರುಪತಿ: ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೋಟ್ಯಂತರ ಭಕ್ತರನ್ನು ಹೊಂದಿರುವ ಬಾಲಾಜಿಯ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಕೊರೊನಾದಿಂದಾಗಿ ಬಂದ್ ಆಗಿದ್ದ ದೇವಾಲಯ ಈಗ ಭಕ್ತರಿಂದ ಮತ್ತೆ ತುಂಬಿ ತುಳುಕುತ್ತಿದೆ. ಭಕ್ತರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ತಿಮ್ಮಪ್ಪನ ದೇವಾಲಯದ ದರ್ಶನ ಅವಧಿ ವಿಸ್ತರಣೆ ಮಾಡಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ತಿರುಪತಿ ಭಕ್ತರು ದರ್ಶನ ಮಾಡುವ ಅವಧಿಯನ್ನು ರಾತ್ರಿ […]

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ:  ದರ್ಶನ ಅವಧಿ ವಿಸ್ತರಣೆ
ತಿರುಪತಿ ತಿರುಮಲ
Follow us on

ತಿರುಪತಿ: ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ವಿಶ್ವದ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೋಟ್ಯಂತರ ಭಕ್ತರನ್ನು ಹೊಂದಿರುವ ಬಾಲಾಜಿಯ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಕೊರೊನಾದಿಂದಾಗಿ ಬಂದ್ ಆಗಿದ್ದ ದೇವಾಲಯ ಈಗ ಭಕ್ತರಿಂದ ಮತ್ತೆ ತುಂಬಿ ತುಳುಕುತ್ತಿದೆ. ಭಕ್ತರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.

ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿ ತಿಮ್ಮಪ್ಪನ ದೇವಾಲಯದ ದರ್ಶನ ಅವಧಿ ವಿಸ್ತರಣೆ ಮಾಡಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ತಿರುಪತಿ ಭಕ್ತರು ದರ್ಶನ ಮಾಡುವ ಅವಧಿಯನ್ನು ರಾತ್ರಿ 9 ಗಂಟೆಯ ವರೆಗೆ ಹೆಚ್ಚಿಸಿದೆ. ಈ ಮೊದಲು ರಾತ್ರಿ 7 ಗಂಟೆಯ ವರೆಗೆ ಅವಧಿ ನಿಗದಿ ಮಾಡಲಾಗಿತ್ತು. ಈಗ ರಾತ್ರಿ 9 ಗಂಟೆಯವರೆಗೂ ಭಕ್ತರಿಗೆ ದರ್ಶನಕ್ಕೆ ಟಿಕೆಟ್​ಗಳನ್ನು ನೀಡಲಾಗುತ್ತಿದೆ. ಇದಲ್ಲದೇ ಪ್ರತಿ ದಿನಕ್ಕೆ ಭಕ್ತರಿಗೆ ದರ್ಶನ ನೀಡುವ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಈಗ ಪ್ರತಿದಿನ 13 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

Published On - 2:33 pm, Sun, 28 June 20