ತಿರುಪತಿ: ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) 2023ರ ಜನವರಿ ತಿಂಗಳಿನ ‘ಅಂಗ ಪ್ರದಕ್ಷಿಣಂ’ಗೆ ಸಂಬಂಧಿಸಿದ ಟಿಕೆಟ್‌ಗಳ ವಿತರಣೆ ಇಂದಿನಿಂದ (ಡಿಸೆಂಬರ್ 29) ಆರಂಭವಾಗಲಿದೆ. ಭಕ್ತರು ತಿರುಪತಿ ತಿರುಮಲ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್ಲೈನ್ ಟಿಕೆಟ್‌ಗಳನ್ನು ಪಡೆಯಬಹುದು.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, 2023ರ ಜನವರಿ 1ರಿಂದ 14ರವರೆಗೆ ವೈಕುಂಠ ದ್ವಾರ ದರ್ಶನ ಮತ್ತು ಇತರ ಉತ್ಸವಗಳು ನಡೆಯಲಿವೆ. 2023ರ ಜನವರಿ 28ರಂದು ತಿರುಮಲದಲ್ಲಿ ರಥ ಸಪ್ತಮಿ ಆಚರಣೆಯ ಹಿನ್ನೆಲೆಯಲ್ಲಿ ಅಂಗ ಪ್ರದಖಿನಾಮ ಕೋಟಾದ ಟಿಕೆಟ್‌ಗಳು ಲಭ್ಯವಿರುವುದಿಲ್ಲ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.
ಅಂಗಪ್ರದಕ್ಷಿಣಂ ಎಂದರೇನು?:
ಅಂಗ ಎಂದರೆ ಇಡೀ ದೇಹ, ಪ್ರದಕ್ಷಿಣಂ ಎಂದರೆ ದೇವಸ್ಥಾನವನ್ನು ಸುತ್ತುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ದೇಹದ ಉರುಳುಸೇವೆ ಮಾಡುತ್ತಾ ವೆಂಕಟೇಶ್ವರನನ್ನು ಸುತ್ತುವುದು ಎಂದು ಇದರರ್ಥ. ಇದನ್ನು ಭಕ್ತಿಯ ಒಂದು ರೂಪ, ಅತ್ಯಂತ ಪವಿತ್ರ ಸೇವೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು
ಅಂಗಪ್ರದಕ್ಷಿಣಂ ಬಗ್ಗೆ ತಿಳಿಯಬೇಕಾದ ವಿಷಯಗಳು ಇಲ್ಲಿವೆ:
– ಭಕ್ತರು ಆಧಾರ್ ಕಾರ್ಡ್ ಮತ್ತು ತಮ್ಮ ಪೂರ್ವ-ಬುಕ್ ಮಾಡಿದ ಟಿಕೆಟ್‌ಗಳನ್ನು ತೆಗೆದುಕೊಂಡು ಹೋಗಬೇಕು. ಅವುಗಳನ್ನು ಪಾಲಿಥಿನ್ ಕವರ್‌ನಲ್ಲಿ ಹಾಕಬೇಕು. ಇದರಿಂದ ಅವು ಒದ್ದೆಯಾಗುವುದಿಲ್ಲ.
– ಟಿಕೆಟ್ ಅನ್ನು ಹಿಂದಿನ ದಿನದಂದು ತೆಗೆದುಕೊಳ್ಳಬೇಕು. ಅಂದರೆ ನೀವು ಸೇವೆ ಮಾಡುವ ಹಿಂದಿನ ದಿನದಂದು ಟಿಕೆಟ್ ಪಡೆಯಬೇಕು.
– ಪ್ರತಿ ಭಕ್ತರಿಗೆ ನಿಗದಿತ ಸಮಯದ ಅಂತರದೊಂದಿಗೆ ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ ಪ್ರವೇಶಿಸಲು ದೇವಾಲಯದಲ್ಲಿ ಅನುಮತಿ ನೀಡಲಾಗುತ್ತದೆ.
– ತಿರುಪತಿ ದೇವಾಲಯಕ್ಕೆ ಪೂಜೆಗೆ ಬರುವ ಎಲ್ಲಾ ಯಾತ್ರಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು.
– ಭಕ್ತರು ದೇವಸ್ಥಾನದ ಮುಂಭಾಗಕ್ಕೆ ತೆರಳಿ ಪುಷ್ಕರಿಣಿಯಲ್ಲಿ ಮುಳುಗಿ, ಶುದ್ಧಗೊಳ್ಳುತ್ತಾರೆ.