AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟಿನ್, ಬೈಡೆನ್ ಕೂಡ ಉದ್ಧವ್ ಠಾಕ್ರೆ ಯಾರೆಂದು ಚರ್ಚಿಸುತ್ತಿದ್ದಾರೆ; ಸಂಜಯ್ ರಾವತ್ ವಿಡಿಯೋ ವೈರಲ್

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣದ ನಡುವಿನ ಜಗಳದ ನಡುವೆ ಮಹಾರಾಷ್ಟ್ರವು ಕರ್ನಾಟಕದೊಂದಿಗೆ ಗಡಿ ಸಮಸ್ಯೆಗೆ ಹೋರಾಡುತ್ತಿರುವಾಗ ಸಂಜಯ್ ರಾವತ್ ಅವರ ವಿಡಿಯೋ ವೈರಲ್ ಆಗಿದೆ.

ಪುಟಿನ್, ಬೈಡೆನ್ ಕೂಡ ಉದ್ಧವ್ ಠಾಕ್ರೆ ಯಾರೆಂದು ಚರ್ಚಿಸುತ್ತಿದ್ದಾರೆ; ಸಂಜಯ್ ರಾವತ್ ವಿಡಿಯೋ ವೈರಲ್
ಉದ್ಧವ್ ಠಾಕ್ರೆ Image Credit source: NDTV
TV9 Web
| Updated By: ಸುಷ್ಮಾ ಚಕ್ರೆ|

Updated on: Dec 29, 2022 | 11:32 AM

Share

ಮುಂಬೈ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin), ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಕಿಂಗ್ ಚಾರ್ಲ್ಸ್ (King Charles) ಕೂಡ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಶಿವಸೇನೆ (Shiv Sena) ಪಕ್ಷದ ನಾಯಕ ಸಂಜಯ್ ರಾವತ್ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿವಿಧ ದೇಶಗಳ ನಾಯಕರು ಉದ್ಧವ್ ಠಾಕ್ರೆ (Uddhav Thackeray) ಬಗ್ಗೆ ಮಾತನಾಡುತ್ತಿದ್ದು, ಅವರು ಏಕನಾಥ್ ಶಿಂಧೆ (Eknath Shinde) ಸರ್ಕಾರದ ವಿರುದ್ಧ ಹೇಗೆ ಹೋರಾಡುತ್ತಿದ್ದಾರೆ ಎಂದು ಚರ್ಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಕಿಂಗ್ ಚಾರ್ಲ್ಸ್ ಮೂವರು ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ವೇಳೆ ಅವರು ಉದ್ಧವ್ ಠಾಕ್ರೆ ಏಕನಾಥ್ ಶಿಂಧೆ ಸರ್ಕಾರದ ವಿರುದ್ಧ ಹೇಗೆ ಹೋರಾಡುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಉದ್ಧವ್ ಠಾಕ್ರೆ ಬಗ್ಗೆ ವಿಚಾರಿಸಿದ್ದಾರೆ ಎಂದು ಸಂಜಯ್ ರಾವತ್ ನಾಗ್ಪುರದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಾಜಕೀಯ ಬೇಡ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ

ಈ ಹಿಂದೆ ಬಿಲ್ ಕ್ಲಿಂಟನ್ ತನ್ನನ್ನು ವಿಚಾರಿಸಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದರು. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಏಕನಾಥ್ ಶಿಂಧೆ, “ಬಿಲ್ ಕ್ಲಿಂಟನ್ ಅವರೊಂದಿಗೆ ವಾಸಿಸುವ ಭಾರತೀಯರೊಬ್ಬರು ಕೆಲವು ತಿಂಗಳ ಹಿಂದೆ ನನ್ನ ಬಳಿಗೆ ಬಂದರು. ಬಿಲ್ ಕ್ಲಿಂಟನ್ ಅವರ ಬಳಿ ಏಕನಾಥ್ ಶಿಂಧೆ ಯಾರು ಎಂದು ಕೇಳಿದ್ದರಂತೆ. ಬಿಲ್ ಕ್ಲಿಂಟನ್ ಏಕನಾಥ್ ಶಿಂಧೆ ಎಷ್ಟು ಕೆಲಸ ಮಾಡುತ್ತಾರೆ? ಯಾವಾಗ ಕೆಲಸ ಮಾಡುತ್ತಾರೆ? ಎಂದೆಲ್ಲ ವಿಚಾರಿಸಿದ್ದರಂತೆ ಎಂದು ಹೇಳಿಕೊಂಡಿದ್ದರು. ಆ ಹೇಳಿಕೆಗೆ ಪ್ರತಿಯಾಗಿ ಸಂಜಯ್ ರಾವತ್ ಟೀಕಾತ್ಮಕವಾಗಿ ಉದ್ಧವ್ ಠಾಕ್ರೆಯ ಬಗ್ಗೆ ಜಾಗತಿಕ ನಾಯಕರು ಚರ್ಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ನಿಲುವು ಖಂಡಿಸಿ ಗಡಿ ಬಗ್ಗೆ ನಿರ್ಣಯ ಮಂಡಿಸಿದ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣದ ನಡುವಿನ ಜಗಳದ ನಡುವೆ ಮಹಾರಾಷ್ಟ್ರವು ಕರ್ನಾಟಕದೊಂದಿಗೆ ಗಡಿ ಸಮಸ್ಯೆಗೆ ಹೋರಾಡುತ್ತಿರುವಾಗ ಸಂಜಯ್ ರಾವತ್ ಅವರ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಕಾರ್ಯಕರ್ತರು ಸಂಜಯ್ ರಾವತ್ ಅವರ ಹಾಸ್ಯಪ್ರಜ್ಞೆಯನ್ನು ಹೊಗಳಿದ್ದಾರೆ. ಬಿಜೆಪಿ ನಾಯಕರು ಅವರನ್ನು ಹಾಸ್ಯನಟ ಕಪಿಲ್ ಶರ್ಮಾಗೆ ಹೋಲಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ