ಎಐಎಡಿಎಂಕೆ ನಾಯಕರ ವಿರುದ್ಧ ಅರ್ಜಿ ಹಿಂಪಡೆದ ಟಿಟಿವಿ ದಿನಕರನ್
Tami Nadu Elections 2021: ಸದ್ಯ ಎಐಎಡಿಎಂಕೆ ಪಕ್ಷ ನಾಯಕರಾಗಿ ಗುರುತಿಸಿಕೊಂಡಿರುವ ಕೆ. ಪಳನಿಸ್ವಾಮಿ, ಓ. ಪನ್ನೀರಸೆಲ್ವಂ, ದಿಂಡಿಗುಲ್ ಸಿ ಶ್ರೀನಿವಾಸನ್, ಎಸ್. ಸೆಮ್ಮಲೈ ಮತ್ತು ಮಧುಸೂದನ್ ಅವರುಗಳು ಪಕ್ಷದ ಸದಸ್ಯರೇ ಅಲ್ಲ ಎಂದು ದಿನಕರನ್ ದೂರಿದ್ದರು.
ಚೆನ್ನೈ: ಎಐಎಡಿಎಂಕೆಯ ಮುಖಂಡರೆಂದು ಘೋಷಿಸಿಕೊಂಡಿರುವ ಕೆ.ಪಳನಿಸ್ವಾಮಿ, ಓ. ಪನ್ನೀರಸೆಲ್ವಂ, ದಿಂಡಿಗಲ್. ಸಿ. ಶ್ರೀನಿವಾಸನ್, ಎಸ್. ಸೆಮ್ಮಲೈ ಮತ್ತು ಮಧುಸೂದನ್ ಅವರುಗಳು ಎಐಎಡಿಎಂಕೆ ಪಕ್ಷಕ್ಕೆ ಸೇರಿಲ್ಲ. ಹೀಗಾಗಿ ಪಕ್ಷದಲ್ಲಿ ಅವರ ನಾಯಕತ್ವ ವಹಿಸುವಂತಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ದೂರನ್ನು ಶಶಿಕಲಾ ಆಪ್ತ ಟಿಟಿವಿ ದಿನಕರನ್ ಹಿಂಪಡೆದಿದ್ದಾರೆ. 2017ರಲ್ಲಿ ನಡೆದಿದ್ದ ಎಐಎಡಿಎಂಕೆಯ ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳನ್ನು ಪ್ರಶ್ನಿಸಿ ದಿನಕರನ್ ಕೋರ್ಟ್ ಮೊರೆಹೋಗಿದ್ದರು. ಈ ಅರ್ಜಿಯನ್ನು ಏಪ್ರಿಲ್ 9ರಂದು ವಿಚಾರಣೆ ನಡೆಸುವುದಾಗಿ ಕೋರ್ಟ್ ತಿಳಿಸಿತ್ತು.
ಸದ್ಯ ಎಐಎಡಿಎಂಕೆ ಪಕ್ಷ ನಾಯಕರಾಗಿ ಗುರುತಿಸಿಕೊಂಡಿರುವ ಕೆ. ಪಳನಿಸ್ವಾಮಿ, ಓ. ಪನ್ನೀರಸೆಲ್ವಂ, ದಿಂಡಿಗಲ್ ಸಿ ಶ್ರೀನಿವಾಸನ್, ಎಸ್. ಸೆಮ್ಮಲೈ ಮತ್ತು ಮಧುಸೂದನ್ ಅವರುಗಳು ಪಕ್ಷದ ಸದಸ್ಯರೇ ಅಲ್ಲ ಎಂದು ದಿನಕರನ್ ದೂರಿದ್ದರು. ಅಲ್ಲದೇ ಶಶಿಕಲಾ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯ ಹುದ್ದೆಯಿಂದ ಕೆಳಗಿಳಿಸಲು ಈ ನಾಯಕರು ಕೈಗೊಂಡ ಕ್ರಮಗಳು ಅಕ್ರಮ ಎಂದು ಸಹ ಶಶಿಕಿಲಾ ಆಪ್ತ ದಿನಕರನ್ ಸಲ್ಲಿಸಿದ್ದ ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು. ಪಕ್ಷದ ನೀತಿ ನಿಯಮಗಳಿಗೆ ವಿರುದ್ಧವಾಗಿ ಈ ನಾಯಕರು ಶಶಿಕಲಾರನ್ನು ಮಣಿಸುವ ಕೆಲಸ ಮಾಡಿದ್ದಾರೆ ಎಂದು ಟಿ ಟಿ ವಿ ದಿನಕರನ್ ದೂರಿ ಮದ್ರಾಸ್ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಟಿಟಿವಿ ದಿನಕರನ್ ನಾಯಕತ್ವದ ಎಎಂಎಂಕೆ ಅಭ್ಯರ್ಥಿಗಳು ಎಎಂಎಂಕೆ (AMMK) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಶಾಸಕ ಮತ್ತು ಸಂಸದರ ಹೆಸರು ಇದೆ. ಮಾಜಿ ಸಚಿವರಾದ ಜಿ.ಸೆಂಥಮಿಳನ್ ಮತ್ತು ಪಳನಿಯಪ್ಪನ್ ಅವರು ಸೈದಪೇಟ್ ಮತ್ತು ಪಾಪಿರೆಡ್ಡಿಪಟ್ಟಿಯಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಸಿ.ಷಣ್ಮುಗವೇಲು ಅವರು ಮಾಜತುಲಗಂ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಪ್ರಮುಖ ರಾಜಕಾರಣಿಗಳಾದ ಶಾಸಕ ಎನ್.ಜಿ. ಪಾರ್ಥಿಬನ್ (ಶೋಲಿಂಗೂರು), ಎಂ.ರಂಗಸ್ವಾಮಿ (ಪಾಪನಾಶನಂ), ಕೆ.ಕೆ. ಉಮದೇವನ್ (ತಿರುಪತ್ತೂರು) ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಶಶಿಕಲಾ ಖುದ್ದು 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ, ದಿನಕರನ್ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಚಿನ್ನಮ್ಮನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಾಯಶಃ ತಯಾರಿರುವ ಪಳನಿಸ್ವಾಮಿ ಮತ್ತು ಕಂಪನಿ ದಿನಕರನ್ ಅವರನ್ನು ದೂರವಿಡಲು ಪ್ರಯತ್ನಿಸುತ್ತಿದೆ. ಅವರಿಗದು ಸಾಧ್ಯವಾಗಬಹುದೇ ಎನ್ನುವುದೇ ಕಾದು ನೋಡಬೇಕಿರುವ ಅಂಶ.
ಇದನ್ನೂ ಓದಿ:
ಬಿಜೆಪಿಯಿಂದ ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಅಣ್ಣಾಮಲೈ, ಖುಷ್ಬೂಗೆ ಅವಕಾಶ