AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021:ದಿನಗೂಲಿ ಕಾರ್ಮಿಕನ ಪತ್ನಿ, ಬಿಜೆಪಿಯ ಮಹಿಳಾ ಅಭ್ಯರ್ಥಿ; ಮನೆಯಲ್ಲಿ ಶೌಚಾಲಯವೂ ಇಲ್ಲ

ಮಾರ್ಚ್ 8ರಂದು ನನ್ನ ಊರಿನ ಜನರು ಟಿವಿಯಲ್ಲಿ ವಾರ್ತೆ ನೋಡಿ ನನಗೆ ಟಿಕೆಟ್ ಘೋಷಣೆಯಾಗಿದೆ ಎಂದು ತಿಳಿಸಿದರು. ನನಗೆ ಟಿಕೆಟ್ ಸಿಕ್ಕಿದೆ ಎಂದರೆ ಬಿಜೆಪಿ ಬಡವರಿಗೂ ಪ್ರಾಶಸ್ತ್ಯ ನೀಡುತ್ತಿದೆ ಎಂದೇ ಅರ್ಥ’ ಎನ್ನುತ್ತಾರೆ ಚಂದನಾ.

West Bengal Elections 2021:ದಿನಗೂಲಿ ಕಾರ್ಮಿಕನ ಪತ್ನಿ, ಬಿಜೆಪಿಯ ಮಹಿಳಾ ಅಭ್ಯರ್ಥಿ; ಮನೆಯಲ್ಲಿ ಶೌಚಾಲಯವೂ ಇಲ್ಲ
ತಮ್ಮ ಪತಿ, ಮಕ್ಕಳೊಂದಿಗೆ ಸೋಲ್ತಾರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದನಾ (ಚಿತ್ರಕೃಪೆ: ಪಾರ್ಥಾ ಪೌಲ್, ದಿ ಇಂಡಿಯನ್ ಎಕ್ಸ್​ಪ್ರೆಸ್)
Follow us
guruganesh bhat
|

Updated on:Mar 18, 2021 | 12:25 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಯೋರ್ವರ ಕುರಿತು ತಿಳಿದುಕೊಂಡರೆ ನಿಮಗೆ ಅಚ್ಚರಿಯಾಗದೇ ಇರಲಾರದು. ಬಂಗಾಳದ ಸಾಲ್ತೋರಾ ವಿಧಾನಸಭಾ ಕ್ಷೇತ್ರದಲ್ಲಿ  ಚಂದನಾ ಬೌರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.  ಹುಲ್ಲಿನ ಮೇಲ್ಛಾವಣಿಯ ಮಣ್ಣಿನ ಮನೆಯಲ್ಲಿ ಸ್ವಂತದ್ದು ಎಂದು ಇರುವುದು ನಾಲ್ಕು ಕುರ್ಚಿ. ಒಂದಷ್ಟು ಸ್ಟೀಲ್ ಡಬ್ಬ. ಮಿಕ್ಕ ಎಲ್ಲವೂ ಬಿಜೆಪಿ ಕಾರ್ಯಕರ್ತರು ಕೊಟ್ಟಿರುವುದು. ಅಲ್ಲದೇ ಚಂದನಾ ಅವರ ಬಳಿ ನಗದು ಮತ್ತು ಬ್ಯಾಂಕ್ ಠೇವಣಿ ಕೂಡಿ ಇರುವುದು ₹31,985 ಮಾತ್ರ. ಅಷ್ಟೇ ಅಲ್ಲ, ಅವರ ಮನೆಯಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಮತ್ತು ಶೌಚಾಲಯವೂ ಇಲ್ಲ.  ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಸಾಲ್ತೋರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದನಾ ಬೌರಿ ಅವರೇ ಪಶ್ಚಿಮ ಬಂಗಾಳದ ಎಲ್ಲ ಚುನಾವಣಾ ಅಭ್ಯರ್ಥಿಗಳಿಗಿಂತ ಅತ್ಯಂತ ಬಡ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಈ ಕುರಿತು ‘ದಿ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಚಂದನಾ ಬೌರಿ ಅವರ ಪತಿ ಸೃಬನ್ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಮಳೆಗಾಲದಲ್ಲಿ ಕೆಲಸದ ಲಭ್ಯತೆ ಕಡಿಮೆಯಾದಾಗ ಚಂದನಾ ಬೌರಿ ಅವರೂ ಪತಿಯ ಕೆಲಸಕ್ಕೆ ಹೆಗಲುಕೊಡುತ್ತಾರೆ. ಅಲ್ಲದೇ ಸೃಬನ್ ಮತ್ತು ಚಂದನಾ ಬೌರಿ ದಂಪತಿಗಳು ಉದ್ಯೋಗ ಖಾತ್ರಿ ಯೋಜನೆಯ ಕಾರ್ಡನ್ನೂ ಹೊಂದಿದ್ದಾರೆ.

ಸಾಲ್ತೋರಾ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದರೂ ಚಂದನಾ ಅವರ ಮನೆಯಲ್ಲಿ ಶೌಚಾಲಯವೂ ಇಲ್ಲ ಎಂದರೆ ಆಶ್ಚರ್ಯವಾಗಬಹುದು. ಸೋಲ್ತಾನಾ ಮತಕ್ಷೇತ್ರ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಚಂದನಾ ಅವರು ಹಿಂದಿನಿಂದಲೂ ಮನೆಯಲ್ಲಿ ಶೌಚಾಲಯ ನಿರ್ಮಿಸಲು ಹೋರಾಡುತ್ತಲೇ ಬಂದಿದ್ದರು. ಕೊನೆಗೂ, ಹಿಂದಿನ ವರ್ಷ ಪ್ರಧಾನಮಂತ್ರಿ ಗ್ರಾಮೀಣ ಆವಾಸ ಯೋಜನೆಯ ಮೊದಲ ಕಂತಿನಲ್ಲಿ ₹60,000 ಹಣ ಅವರಿಗೆ ಮಂಜೂರಾಗಿದೆ.

ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಿರುವ ಸಾಲ್ತೋರಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್​ನ ಸ್ವಪನ್ ಬರೂಯ್ ಕಳೆದ ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು, ಅದೂ 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಟಿಎಂಸಿ ಸ್ವಪನ್ ಅವರಿಗೆ ಟಿಕೆಟ್ ನೀಡದೆ ತನ್ನ ಅಭ್ಯರ್ಥಿಯನ್ನು ಬದಲಿಸಿದೆ. ಈ ಚುನಾವಣೆಯಲ್ಲಿ ಟಿಎಂಸಿಯಿಂದ ಸಂತೋಷ್ ಕುಮಾರ್ ಮಂಡಲ್ ಸ್ಪರ್ಧಿಸುತ್ತಿದ್ದಾರೆ.

ಟಿಕೆಟ್ ಸಿಕ್ಕಿರುವುದೇ ತಿಳಿದಿರಲಿಲ್ಲ.. ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದನಾ, ‘ನಾನು ಬಿಜೆಪಿಯ ಜಿಲ್ಲಾ ಮಟ್ಟದ ಹಿರಿಯ ಸದಸ್ಯರಾಗಿ ಜವಾಬ್ದಾರಿ ಹೊತ್ತಿದ್ದೆ. ಸೋಲ್ತಾರಾ ಕ್ಷೇತ್ರದ ಟಿಕೆಟ್ ದೊರೆಯುವುದೆಂಬ ಚಿಕ್ಕ ಊಹೆಯೂ ಇರಲಿಲ್ಲ. ಪ್ರತಿದಿನ ಮುಂಜಾವಿನಲ್ಲಿ ಕೇಸರಿ ಸೀರೆ ಧರಿಸಿ ಟಿಎಂಸಿಯ ಭ್ರಷ್ಟಾಚಾರ ವಿರೋಧಿಸಿ ಪ್ರಚಾರ ಮಾಡುತ್ತಿದ್ದೆ. ಮಾರ್ಚ್ 8ರಂದು ನನ್ನ ಊರಿನ ಜನರು ಟಿವಿಯಲ್ಲಿ ವಾರ್ತೆ ನೋಡಿ ನನಗೆ ಟಿಕೆಟ್ ಘೋಷಣೆಯಾಗಿದೆ ಎಂದು ತಿಳಿಸಿದರು. ನನಗೆ ಟಿಕೆಟ್ ಸಿಕ್ಕಿದೆ ಎಂದರೆ ಬಿಜೆಪಿ ಬಡವರಿಗೂ ಪ್ರಾಶಸ್ತ್ಯ ನೀಡುತ್ತಿದೆ ಎಂದೇ ಅರ್ಥ’ ಎಂದಿದ್ದಾರೆ.

ಇಬ್ಬರು ಮಕ್ಕಳ ತಾಯಿಯೂ ಆಗಿರುವ ಚಂದನಾ, ಈ ಮೊದಲು ಮಕ್ಕಳ ಲಾಲನೆ ಪಾಲನೆ ಮಾಡಿದ ನಂತರ ಪ್ರಚಾರದ ಮೆರವಣಿಗೆಗಳಿಗೆ ತೆರಳುತ್ತಿದ್ದರು. ಆದರೆ ಈಗ ಟಿಕೆಟ್ ಘೋಷಣೆಯಾಗಿರುವುದರಿಂದ ಸಾರ್ವಜನಿಕವಾಗಿ ಇನ್ನಷ್ಟು ಕಾಣಿಸಿಕೊಳ್ಳಬೇಕಿದೆ. ಹೀಗಾಗಿ ನನ್ನ ಕುಟುಂಬದ ಇತರರು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಚಂದನಾ ಅವರಿಗೆ ಓದುವ ಅತೀವ ಹಂಬಲವಿತ್ತು. ಆದರೆ ಹೈಸ್ಕೂಲ್ ಮುಗಿಸುವ ಹೊತ್ತಿಗೆ ಅವರ ತಂದೆ ಮೃತಪಟ್ಟರು. 11ನೇ ತರಗತಿ ಮುಗಿಸುವ ಹೊತ್ತಿಗೆ ಅವರ ಮದುವೆಯಾಯಿತು. ಮದುವೆಯಾದ ನಂತರ ಪತಿಯ ಆರೋಗ್ಯ ಕೆಟ್ಟಿತ್ತು. ಆದರೂ ಪರೀಕ್ಷೆ ಬರೆದು ಉತ್ತೀರ್ಣರಾದರು. 12ನೇ ತರಗತಿಯ ಓದುವಾಗ ಅವರು ಗರ್ಭಿಣಿಯಾದರು. ಹೀಗಾಗಿ ಶಿಕ್ಷಣ ಅಲ್ಲಿಗೆ ಮೊಟಕುಗೊಂಡಿತು ಎಂದು ಅವರು ತಮ್ಮ ಕಥೆಯನ್ನು ಹೇಳಿಕೊಳ್ಳುತ್ತಾರೆ. ಮಕ್ಕಳಿಗಾದರೂ ಉನ್ನತ ವಿದ್ಯಾಭ್ಯಾಸ ಮಾಡಿಸಬೇಕು ಎಂಬ ವಿಶ್ವಾಸ ಅವರಲ್ಲಿದೆ.

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ

ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ

Published On - 12:13 pm, Thu, 18 March 21

ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಅದೇ ದಿನ ಪ್ರಿಯಕರನ ವಿವಾಹವಾದ್ಲು!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
IPL 2025: ಇದೇ ಕಾರಣಕ್ಕೆ ಟಿಮ್​ ಡೇವಿಡ್​ಗೆ ರನ್ನರ್ ನೀಡಲಾಗಿಲ್ಲ..!
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ
Daily Devotional: ಕುಟುಂಬ ಕಲಹಕ್ಕೆ ಈ ಮಂತ್ರವೇ ಪರಿಹಾರ