Coronavirus Case Updates: ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾರ್ಭಟ; ಒಂದು ದಿನದಲ್ಲಿ 35 ಸಾವಿರ ಕೇಸ್​ಗಳು ದಾಖಲು..ಮತ್ತೆ ಅಪಾಯದಲ್ಲಿ ಮಹಾರಾಷ್ಟ್ರ

ಹೊರಗಿನಿಂದ ಯಾರೇ ಬಂದರೂ ಅವರಿಗೆ ಏಳು ದಿನಗಳ ಹೋಂ ಕ್ವಾರಂಟೈನ್​ ಕಡ್ಡಾಯ ಎಂದು ಗುಜರಾತ್​ನ ಸೂರತ್​ ಮುನ್ಸಿಪಲ್ ಕಾರ್ಪೋರೇಶನ್ ಹೇಳಿದೆ.

Coronavirus Case Updates: ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾರ್ಭಟ; ಒಂದು ದಿನದಲ್ಲಿ 35 ಸಾವಿರ ಕೇಸ್​ಗಳು ದಾಖಲು..ಮತ್ತೆ ಅಪಾಯದಲ್ಲಿ ಮಹಾರಾಷ್ಟ್ರ
ಕೊರೊನಾ ತಪಾಸಣೆ ಪ್ರಾತಿನಿಧಿಕ ಚಿತ್ರ
Follow us
|

Updated on: Mar 18, 2021 | 12:19 PM

ದೆಹಲಿ: ಭಾರತದಲ್ಲಿ ಕೊರೊನಾತಂಕ ದಿನೇದಿನೆ ಹೆಚ್ಚುತ್ತಿದೆ. 24ಗಂಟೆಗಳಲ್ಲಿ ಬರೋಬ್ಬರಿ 35,871 ಕೊರೊನಾ ಕೇಸ್​ಗಳು ದಾಖಲಾಗಿವೆ. ಕಳೆದ 102 ದಿನಗಳಲ್ಲಿ ಅಂದರೆ ಸುಮಾರು 4 ತಿಂಗಳಲ್ಲಿ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟೊಂದು ಸಂಖ್ಯೆಯ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದು ದಾಖಲಾದ 35,871 ಕೇಸ್​ಗಳಲ್ಲಿ ಮಹಾರಾಷ್ಟ್ರದಿಂದಲೇ 23,179 ಪ್ರಕರಣಗಳು (ಶೇ.65) ವರದಿಯಾಗಿವೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.14 ಕೋಟಿಗೆ ತಲುಪಿದ್ದು, ಸಕ್ರಿಯ ಪ್ರಕರಣಗಳು 2.52 ಲಕ್ಷಕ್ಕೂ ಮಿಗಿಲಾಗಿವೆ.

ಹಾಗೇ 24 ಗಂಟೆಯಲ್ಲಿ ದೇಶದಲ್ಲಿ 172 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಸೋಂಕಿನಿಂದ ಒಟ್ಟೂ ಸಾವನ್ನಪ್ಪಿದವರ ಸಂಖ್ಯೆ 1.59 ಲಕ್ಷ. ಇನ್ನು ಬುಧವಾರ ಇಷ್ಟು ಪ್ರಮಾಣದಲ್ಲಿ ಕೊರೊನಾ ಸೋಂಕು ದಾಖಲಾಗಲು ಮುಖ್ಯ ಕಾರಣ ಮಹಾರಾಷ್ಟ್ರವಾಗಿದ್ದು, ಎರಡನೇ ಸ್ಥಾನದಲ್ಲಿ ಪಂಜಾಬ್ (2,039)​ ರಾಜ್ಯವಿದೆ. ಈ ರಾಜ್ಯದಲ್ಲಿ ಮಾತ್ರ ಕೊರೊನಾ ಮೊದಲ ಅಲೆಗಿಂತ, ಎರಡನೇ ಹಂತದಲ್ಲೇ ಡೆತ್​ ರೇಟ್​ ಹೆಚ್ಚಾಗಿದೆ.

ದೇಶದಲ್ಲಿ ಮಾರ್ಚ್​ 1ರಿಂದ ಕೊರೊನಾ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಯೊಂದಿಗೆ ವರ್ಚ್ಯುವಲ್​ ಮೀಟಿಂಗ್ ನಡೆಸಿದ್ದಾರೆ. ಕೊರೊನಾ ಎರಡನೇ ಹಂತದಲ್ಲಿ ಉತ್ತುಂಗಕ್ಕೆ ಏರುವುದನ್ನು ನಿಯಂತ್ರಿಸಲು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಂತೂ ಕೊರೊನಾ ಕೈಮೀರುತ್ತಿದೆ. ಪ್ರಾರಂಭದ ಹಂತದಿಂದಲೂ ಕೊರೊನಾ ಪ್ರಸರಣದಲ್ಲಿ ಮುಂಚೂಣಿಯಲ್ಲಿರುವ ಮಹಾರಾಷ್ಟ್ರ ಎರಡನೇ ಹಂತದಲ್ಲೂ ಕೊರೊನಾದಿಂದ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಹೊಡೆತಕ್ಕೆ ಒಳಗಾಗುತ್ತಿದೆ. ಕೆಲವು ರಾಜ್ಯಗಳ ಸ್ಥಳೀಯಾಡಳಿತಗಳು ಕೊರೊನಾವನ್ನು ಹತ್ತಿಕ್ಕಲು ಮೊದಲಿನಂತೆ ಹೋಂ ಕ್ವಾರಂಟೈನ್​ ವ್ಯವಸ್ಥೆಯನ್ನೂ ಜಾರಿಗೊಳಿಸಿವೆ. ಗುಜರಾತ್​ನ ಸೂರತ್​ ಮುನ್ಸಿಪಲ್ ಕಾರ್ಪೋರೇಶನ್ ಹೀಗೊಂದು ನಿರ್ಧಾರ ತೆಗೆದುಕೊಂಡಿದ್ದು, ಹೊರಗಿನಿಂದ ಯಾರೇ ಬಂದರೂ ಅವರಿಗೆ ಏಳು ದಿನಗಳ ಹೋಂ ಕ್ವಾರಂಟೈನ್​ ಕಡ್ಡಾಯವಾಗಿದೆ.

ಇದನ್ನೂ ಓದಿ: ಕೊರೊನಾ ಬಗ್ಗೆ ಅತಿಯಾದ ಭಯವೂ ಬೇಡ, ಅಸಡ್ಡೆಯೂ ಒಳ್ಳೆಯದಲ್ಲ

Oxford University: ಕೊರೊನಾ ವೈರಸ್​​ ಬಗ್ಗೆ ಅಧ್ಯಯನ ನಡೆಸುತ್ತಿರುವ ಆಕ್ಸ್​​ಫರ್ಡ್​ ಮೇಲೆ ಹ್ಯಾಕರ್ಸ್​ ದಾಳಿ