West Bengal Elections 2021: ಟಿಎಂಸಿ ಸರ್ಕಾರ ಜನರಿಗೆ ಬಡತನ ಕರುಣಿಸಿದೆ – ಪ್ರಧಾನಿ ಮೋದಿ ಟೀಕೆ

ಕೃಷಿಕರಿಗೆ ನೀರಿನ ಸೌಲಭ್ಯ ಒದಗಿಸುವ ಯೋಜನೆಗಳತ್ತ ಟಿಎಂಸಿ ಸರ್ಕಾರ ಮೂಸಿಯೂ ನೋಡಲಿಲ್ಲ. ಸುದೀರ್ಘ ಆಡಳಿತಾವಧಿಯಲ್ಲಿ ಕೇವಲ ತನಗೆ ಬೇಕಂತೆ ಆಟವಾಡುವದರಲ್ಲಿ ನಿರತವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

West Bengal Elections 2021: ಟಿಎಂಸಿ ಸರ್ಕಾರ ಜನರಿಗೆ ಬಡತನ ಕರುಣಿಸಿದೆ - ಪ್ರಧಾನಿ ಮೋದಿ ಟೀಕೆ
ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Mar 18, 2021 | 1:05 PM

ಕೋಲ್ಕತ್ತಾ: ರಾಮಾಯಣದ ಪ್ರಕಾರ ಸೀತಾಕುಂಡ್​ನ ಪ್ರದೇಶದಲ್ಲಿ ಶ್ರೀರಾಮ ನೆಲಕ್ಕೆ ಬಾಣ ಹೂಡಿ ಸೀತೆಯ ದಾಹ ತಣಿಸಿದ್ದನಂತೆ. ಆದರೆ ಈಗ ಅದೇ ಸೀತಾಕುಂಡ್​ನಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಟಿಎಂಸಿ ಸರ್ಕಾರ ಈ ಭಾಗದ ಜನರಿಗೆ ಕುಡಿಯುವ ನೀರು, ವಸತಿ, ಉತ್ತಮ ಆಡಳಿತ ಒದಗಿಸುವ ಬದಲು ಹಿಂದುಳಿದ ಭಾಗವೆಂಬ ಹಣೆಪಟ್ಟಿ ಒದಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಬಿಜೆಪಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪ್ರಚಾರದ ಕಣಕ್ಕಿಳಿಸಿದೆ. ಬಂಗಾಳದ ಸೀತಾಕುಂಡ್ ಪ್ರಾಂತ್ಯದ ಪುಲುರಿಯಾದಲ್ಲಿ ಇಂದು ಸಾರ್ವಜನಿಕ ಪ್ರಚಾರ ಸಭೆ ನಡೆಸಿದ ಅವರು, ಟಿಎಂಸಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸುದೀರ್ಘಾವಧಿಯ ಆಡಳಿತದಲ್ಲಿ ಟಿಎಂಸಿ ಈ ಭಾಗಕ್ಕೆ ಯಾವುದೇ ಉಪಕಾರ ಮಾಡಿಲ್ಲ ಎಂದು ಟೀಕಿಸಿದ ಪ್ರಧಾನಿ, ಪುಲುರಿಯಾದ ಜನರು ಬಡವರಾಗಿಯೇ ಉಳಿಯುವಂತಹ ‘ಕೊಡುಗೆ’ಯನ್ನು ಟಿಎಂಸಿ ದಯಪಾಲಿಸಿದೆ. ಅಲ್ಲದೇ ದೇಶದಲ್ಲೇ ಅತಿ ಹಿಂದುಳಿದ ಪ್ರದೇಶ ಎಂಬ ಅಗ್ಗಳಿಕೆಯನ್ನು ಪುಲುರಿಯಾದ ಪಾಲಿಗೆ ದಕ್ಕುವಂತೆ ಮಾಡುವಲ್ಲಿ ಟಿಎಂಸಿ ಶ್ರಮ ಅಪಾರ ಎಂದು ವ್ಯಂಗ್ಯವಾಡಿದ್ದಾರೆ.

ಮೊದಲು ಎಡಪಕ್ಷದ ಸರ್ಕಾರ ಈ ಭಾಗವನ್ನು ಅಭಿವೃದ್ಧಿಯಿಂದ ಹಿಂದುಳಿಯುವಂತೆ ಮಾಡಿತು. ನಂತರ ರಚನೆಯಾದ ಟಿಎಂಸಿ ಸರ್ಕಾರವೂ ಅದೇ ‘ಪ್ರಯತ್ನ’ ಮಾಡಿತು. ಇವೆರಡೂ ಪಕ್ಷಗಳ ಸರ್ಕಾರಗಳು ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿಲ್ಲ. ಕಾರ್ಖಾನೆಗಳನ್ನು ತೆರೆದು ಜನರಿಗೆ ಉದ್ಯೋಗ ಒದಗಿಸಲಿಲ್ಲ. ಕೃಷಿಕರಿಗೆ ನೀರಿನ ಸೌಲಭ್ಯ ಒದಗಿಸುವ ಯೋಜನೆಗಳತ್ತ ಟಿಎಂಸಿ ಸರ್ಕಾರ ಮೂಸಿಯೂ ನೋಡಲಿಲ್ಲ. ಸುದೀರ್ಘ ಆಡಳಿತಾವಧಿಯಲ್ಲಿ ಕೇವಲ ತನಗೆ ಬೇಕಂತೆ ಆಟವಾಡುವುದರಲ್ಲಿ ನಿರತವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಪ್ರತಿಷ್ಠೆಯ ಕಣ ನಂದಿಗ್ರಾಮ

ನಂದಿಗ್ರಾಮ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿಗೆ ಪ್ರತಿಷ್ಠೆಯ ಕಣವಾಗಿದೆ. ಮಮತಾ ಬ್ಯಾನರ್ಜಿ ಅವರನ್ನು 50,000 ಮತಗಳಿಂದ ಪರಾಭವಗೊಳಿಸುವೆ. ಇಲ್ಲದೇ ಇದ್ದರೆ ರಾಜಕೀಯ ತೊರೆಯುವೆ ಎಂದು ಸುವೇಂದು ಚಾಲೆಂಜ್ ಮಾಡಿದ್ದಾರೆ.  ಮಾರ್ಚ್ 9 ರಂದು  ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದ ಮಮತಾ ಬ್ಯಾನರ್ಜಿ ‘ನಾನೂ ಹಿಂದೂ, ನನಗೂ ದುರ್ಗಾ ಸಪ್ತಶತಿಯ ಮಂತ್ರಗಳು ಗೊತ್ತು’ ಎಂದು ಹೇಳಿದ್ದರು. ಮಾತ್ರವಲ್ಲ ಚಂಡಿಪಾಠದ ಕೆಲ ಮಂತ್ರಗಳನ್ನೂ ಹೇಳಿದ್ದರು. ‘ಮಮತಾ ತಪ್ಪುತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ’ ಎಂದು ಒಂದು ಕಾಲದ ಮಮತಾರ ಸಹಚರ ಮತ್ತು ಇದೀಗ ಎದುರಾಳಿಯಾಗಿರುವ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ. ಮಮತಾ ಹೇಳಿರುವ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿ ಅಣಕವಾಡಿದ್ದಾರೆ.

‘ನೀವು ನನಗೆ ಹಿಂದುತ್ವದ ಪಾಠ ಮಾಡಲು ಬರಬೇಡಿ. ನನಗೆ ಲಕ್ಷ್ಮೀ, ಸರಸ್ವತಿ, ಕಾಳಿ ಮತ್ತು ದುರ್ಗಾ ದೇವಿಯರ ಮಂತ್ರಗಳು ಗೊತ್ತು. ಚುನಾವಣೆ ಸಮಯದಲ್ಲಿ ಒಂದಿಷ್ಟು ಮಂತ್ರಗಳನ್ನು ಉರುಹೊಡೆದು ನಂತರ ಮರೆತುಬಿಡುವ ನಿಮ್ಮಂತೆ ನಾನಲ್ಲ. ನಾನು ಹೃದಯಪೂರ್ವಕ ಈ ಮಂತ್ರಗಳನ್ನು ಹೇಳುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಮಮತಾರ ಹೇಳಿಕೆಯನ್ನು ವ್ಯಂಗ್ಯವಾಡಿದ ಬಿಜೆಪಿಯ ಸುವೇಂದು ಅಧಿಕಾರಿ, ಮೊದಲಿಗೆ ಮಂತ್ರಗಳ ರೆಕಾರ್ಡ್​ ಪ್ಲೇ ಮಾಡಿದರು. ನಂತರ ಮಮತಾ ಹೇಳಿರುವ ಮಂತ್ರಗಳ ಧ್ವನಿಮುದ್ರಣವನ್ನು ಪ್ಲೇ ಮಾಡಿದರು. ‘ಅವರು ತಪ್ಪಾಗಿ ಮಂತ್ರಗಳನ್ನು ಹೇಳಿದ್ದಾರೆ. ಅವರಿಗೇನೂ ಗೊತ್ತಿಲ್ಲ’ ಎಂದು ಅಣಕವಾಡಿದ್ದರು.

ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ಸ್ವಪನ್ ದಾಸ್​ಗುಪ್ತಾ

ರಾಜಕೀಯ ವಿಶ್ಲೇಷಣೆ | ಪಶ್ಚಿಮ ಬಂಗಾಳದಲ್ಲಿ ಹಾಲಿ ಸಂಸದರು, ಅರ್ಥಶಾಸ್ತ್ರಜ್ಞ, ಸಿನಿಮಾ ತಾರೆಯರನ್ನು ಕಣಕ್ಕಿಳಿಸಿದ ಬಿಜೆಪಿ