‘ಟ್ವೆಂಟಿ ಟ್ವೆಂಟಿ ಫೋರ್..ಮೋದಿ ಒನ್ಸ್ ಮೋರ್’-ನಿನ್ನೆ ಬರ್ಲಿನ್ನಲ್ಲಿ ಭಾರತೀಯ ಮೂಲದವರಿಂದ ಬಹುದೊಡ್ಡದಾಗಿ ಕೂಗಲ್ಪಟ್ಟ ಘೋಷಣೆ ಇದು. ಪ್ರಧಾನಿ ನರೇಂದ್ರ ಮೋದಿ ನಿನ್ನೆಯಿಂದ ಮೂರು ದಿನಗಳ ಕಾಲ, ಯುರೋಪ್ನ ಮೂರು ದೇಶಗಳ ಪ್ರವಾಸದಲ್ಲಿದ್ದರೆ. ಮೊದಲು ಜರ್ಮನಿಗೆ ಭೇಟಿ ಕೊಟ್ಟ ಅವರು ಬರ್ಲಿನ್ನಲ್ಲಿ ಭಾರತೀಯರ ಜತೆಗೆ ಸಂವಾದ ನಡೆಸಿದರು. ಅಲ್ಲಿ ನಿಂತು ಭಾರತದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳಿದರು. ಅಷ್ಟೇ ಅಲ್ಲ, ಕಾಂಗ್ರೆಸ್ನ್ನು ತೀವ್ರವಾಗಿ ಟೀಕಿಸಿದರು. ಬರ್ಲಿನ್ನ ಬರ್ಲಿನ್ನ ಬ್ರ್ಯಾಂಡನ್ಬರ್ಗ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಿ ಅಲ್ಲಿಂದ ಹೊಟೆಲ್ ಹೊಡ್ಲೆನ್ ಕೆಂಪಿನ್ಸ್ಕಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ಮೂಲದವರಿಂದ ಭರ್ಜರಿ ಸ್ವಾಗತ ಸಿಕ್ಕಿತು.
ನರೇಂದ್ರ ಮೋದಿಯವರನ್ನು ನೋಡುತ್ತಿದ್ದಂತೆ ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಲು ತೊಡಗಿದ್ದರು. ಅದಾದ ಮೇಲೆ ಸಂಜೆ ಪಾಟ್ಸ್‌ಡ್ಯಾಮರ್ ಪ್ಲಾಟ್ಜ್ ನಲ್ಲಿರುವ ಥಿಯೇಟರ್ವೊಂದರಲ್ಲಿ ನರೇಂದ್ರ ಮೋದಿ ಭಾರತೀಯರೊಟ್ಟಿಗೆ ಸಂವಾದ ನಡೆಸಿದರು. ನರೇಂದ್ರ ಮೋದಿ ಸಭಾಂಗಣ ಪ್ರವೇಶ ಮಾಡುತ್ತಿದ್ದಂತೆ ಟ್ವೆಂಟಿ ಟ್ವೆಂಟಿ ಫೋರ್-ಮೋದಿ ಒನ್ಸ್ ಮೋರ್ ಎಂಬ ಘೋಷಣೆಯನ್ನು ದೊಡ್ಡದಾಗಿ ಕೂಗಿದರು. ಈ ಘೋಷಣೆ ತುಂಬ ಚೆನ್ನಾಗಿ, ಪ್ರಾಸಬದ್ಧವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇದೇ ಸ್ಲೋಗನ್ ಆದರೂ ಆಶ್ಚರ್ಯವಿಲ್ಲ ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
#WATCH | India community members chant, “2024, Modi Once More” in Berlin, Germany.
PM Narendra Modi will address the community programme shortly pic.twitter.com/MaUclwQ0Oy
— ANI (@ANI) May 2, 2022
ಬಳಿಕ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ನಾನಿಲ್ಲಿ ನನ್ನ ಬಗ್ಗೆ ಮಾತನಾಡಲು ಬಂದಿಲ್ಲ ಅಥವಾ ಮೋದಿ ಸರ್ಕಾರವನ್ನು ಹೊಗಳಿಕೊಳ್ಳಲು ಬಂದಿಲ್ಲ. ಈಗ ನಿರ್ಮಾಣವಾಗಿರುವ ನವ ಭಾರತದ ಬಗ್ಗೆ ತಿಳಿಸಲು ಬಂದಿದ್ದೇನೆ ಎಂದು ಮಾತು ಪ್ರಾರಂಭಿಸಿದ ಅವರು, ನಾನಿಲ್ಲಿ ಬಂದು, ಭಾರತೀಯರಾದ ನಿಮ್ಮನ್ನೆಲ್ಲ ಭೇಟಿಯಾಗಿದ್ದು ತುಂಬ ಖುಷಿಕೊಟ್ಟಿತು ಎಂದು ಹೇಳಿದರು. ಭಾರತದಲ್ಲಿ ಮೂರು ದಶಕಗಳಿಂದ ಚಾಲ್ತಿಯಲ್ಲಿದ್ದ ಅಸ್ಥಿರ ರಾಜಕಾರಣವನ್ನು ಕೊನೆಗಾಣಿಸಲಾಗಿದೆ. ಈಗ ಭಾರತ ಹೊಸತನದಲ್ಲಿದೆ. ಅದರ ಪುನರುತ್ಥಾನವಾಗಿದೆ. ಪ್ರತಿಯೊಂದು ಮತದ ಮೌಲ್ಯವನ್ನೂ ನಾವು ಅರಿತುಕೊಂಡಿದ್ದೇವೆ ಎಂದರು.
ಇದನ್ನೂ ಓದಿ: ಅಮಿತ್ ಶಾ ವಿಐಪಿ ಆದ್ರೆ ನಮಗೇನ್ರೀ ಆಗ್ಬೇಕು; ಬೆಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಹಿಡಿಶಾಪ
Published On - 2:19 pm, Tue, 3 May 22