ದೆಹಲಿ ಭಯೋತ್ಪಾದಕ ಶಂಕಿತರು ಪಾಕ್ ಹ್ಯಾಂಡ್ಲರ್‌ಗೆ ಮೃತದೇಹದ ವಿಡಿಯೊ ಕಳುಹಿಸಿ, ಹಣಪಡೆದಿದ್ದಾರೆ: ಮೂಲಗಳು

ಡಿಸೆಂಬರ್ 14-15 ರಂದು ಆದರ್ಶ ನಗರದಿಂದ ಭಾಲ್ಸ್ವಾ ಡೈರಿಯಲ್ಲಿರುವ ನೌಶಾದ್ ಮನೆಗೆ ಯುವಕನನ್ನು ಕರೆದೊಯ್ದು  ಕೊಂದು ದೇಹವನ್ನು ಎಂಟು ತುಂಡುಗಳಾಗಿ ಕತ್ತರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿ ಭಯೋತ್ಪಾದಕ ಶಂಕಿತರು ಪಾಕ್ ಹ್ಯಾಂಡ್ಲರ್‌ಗೆ ಮೃತದೇಹದ ವಿಡಿಯೊ ಕಳುಹಿಸಿ, ಹಣಪಡೆದಿದ್ದಾರೆ: ಮೂಲಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 15, 2023 | 1:17 PM

ದೆಹಲಿ: ಉತ್ತರ ದೆಹಲಿಯಲ್ಲಿ (North Delhi) ಬಂಧಿತ ಇಬ್ಬರು ಭಯೋತ್ಪಾದಕ ಶಂಕಿತರ (terror-suspects) ತಪ್ಪೊಪ್ಪಿಗೆಯ  ಆಧಾರದ ಮೇಲೆ ಶನಿವಾರ ಉತ್ತರ ದೆಹಲಿಯಲ್ಲಿ ಪತ್ತೆಯಾದ ದೇಹವು ಮಾದಕ ವ್ಯಸನಿಯಾಗಿದ್ದ 21 ವರ್ಷದ ಯುವಕನದ್ದಾಗಿದೆ ಎಂದು ಪೊಲೀಸ್ ಮೂಲಗಳು ಭಾನುವಾರ ತಿಳಿಸಿವೆ. ಅವನ ಕೈಯಲ್ಲಿ ತ್ರಿಶೂಲ ಹಚ್ಚೆಯಿದೆ.ಜಗಜಿತ್ ಸಿಂಗ್ ಅಲಿಯಾಸ್ ಜಗ್ಗಾ ಮತ್ತು ನೌಶಾದ್ ಇಬ್ಬರು ಆರೋಪಿಗಳು ಸಂತ್ರಸ್ತರ ಜೊತೆ ಸ್ನೇಹ ಬೆಳೆಸಿದ್ದರು. ಡಿಸೆಂಬರ್ 14-15 ರಂದು ಆದರ್ಶ ನಗರದಿಂದ ಭಾಲ್ಸ್ವಾ ಡೈರಿಯಲ್ಲಿರುವ ನೌಶಾದ್ ಮನೆಗೆ ಯುವಕನನ್ನು ಕರೆದೊಯ್ದು  ಕೊಂದು ದೇಹವನ್ನು ಎಂಟು ತುಂಡುಗಳಾಗಿ ಕತ್ತರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರು ಕೊಲೆಯ 37 ಸೆಕೆಂಡುಗಳ ವಿಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಬಂಧ ಹೊಂದಿರುವ ಸೊಹೈಲ್ ಎಂಬ ವ್ಯಕ್ತಿಗೆ ಕಳುಹಿಸಿದ್ದಾರೆ. ಕತಾರ್‌ನಲ್ಲಿರುವ ಆತನ ಸೋದರ ಮಾವನ ಮೂಲಕ ನೌಶಾದ್‌ನ ಬ್ಯಾಂಕ್ ಖಾತೆಗೆ ₹ 2 ಲಕ್ಷ ಕಳುಹಿಸಲಾಗಿತ್ತು.ಈ ಭೀಕರ ಅಪರಾಧದಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಪಿತೂರಿ ನಡೆಸಿರುವ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ನೌಶಾದ್ ಒಬ್ಬ ಭಯೋತ್ಪಾದಕನಾಗಿದ್ದು, ಕೊಲೆ, ಸುಲಿಗೆಯಂತಹ ಹಲವಾರು ಪ್ರಕರಣಗಳಲ್ಲಿ ದೀರ್ಘಕಾಲದಿಂದ ಜೈಲಿನಲ್ಲಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಆತ ಹರ್ಕತ್ ಉಲ್-ಅನ್ಸಾರ್ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ. ಜೈಲಿನಲ್ಲಿ ಇವರು ಕೆಂಪುಕೋಟೆ ದಾಳಿಯ ಆರೋಪಿ ಆರಿಫ್ ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸೊಹೈಲ್ ನ್ನು ಭೇಟಿಯಾದರು. ಸೊಹೈಲ್ 2018 ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ.ನೌಶಾದ್ ಏಪ್ರಿಲ್ 2022 ರಲ್ಲಿ ಜೈಲಿನಿಂದ ಹೊರಬಂದ ನಂತರ ಸೊಹೈಲ್ ಜೊತೆ ಸಂಪರ್ಕದಲ್ಲಿದ್ದ ಎಂದು ಮೂಲಗಳು ತಿಳಿಸಿವೆ.

ನೌಶಾದ್‌ಗೆ ಪ್ರಭಾವಿ ಹಿಂದೂಗಳನ್ನು ಕೊಲ್ಲಲು ಸೊಹೈಲ್‌ಗೆ ವಹಿಸಲಾಗಿತ್ತು, ಆದರೆ ಎರಡನೇ ಆರೋಪಿ ಜಗಜಿತ್ ಸಿಂಗ್‌ಗೆ ಭಾರತದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುಂಪು ಖಾಲಿಸ್ತಾನ್‌ನ ಚಟುವಟಿಕೆಗಳನ್ನು ಪ್ರಚಾರ ಮಾಡಲು ಕೇಳಲಾಯಿತು ಎಂದು ಮೂಲಗಳು ತಿಳಿಸಿವೆ. ಖಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ದಲ್ಲಾ ಅವರೊಂದಿಗೆ ಜಗಜಿತ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

ಇದನ್ನೂ ಓದಿ: Nepal Aircraft Crash: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ

ಆರೋಪಿಯಿಂದ ಮೂರು ಪಿಸ್ತೂಲ್‌ಗಳು, 22 ಕಾಟ್ರಿಡ್ಜ್‌ಗಳು ಮತ್ತು ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಜಹಾಂಗೀರ್ಪುರಿಯಲ್ಲಿ ವಾಸಿಸುತ್ತಿದ್ದು ಅಲ್ಲಿ 2020 ರಲ್ಲಿ ಕೋಮು ಘರ್ಷಣೆಗಳು ನಡೆದಿತ್ತು.ಆದರೆ ಗುಪ್ತಚರ ಸಂಸ್ಥೆಗಳಿಗೆ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆರೋಪಿಗಳ ಬಗ್ಗೆ ದೆಹಲಿ ಪೊಲೀಸರಿಗೆ ಹೇಗೆ ಮಾಹಿತಿ ಇರಲಿಲ್ಲ ಎಂಬ ಪ್ರಶ್ನೆಗಳು ಈಗ ಎದ್ದಿವೆ. ಇದು ಇಸ್ರೇಲ್ ರಾಯಭಾರ ಕಚೇರಿಯ ಭಯೋತ್ಪಾದಕ ಘಟನೆಗೆ ಸಂಬಂಧಿಸಿದೆ, ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ದೆಹಲಿಯ ಗಾಜಿಪುರ ಮತ್ತು ಸೀಮಾಪುರಿಯಲ್ಲಿ ಸ್ಫೋಟಕ ಆರ್‌ಡಿಎಕ್ಸ್ ಪತ್ತೆಯಾಗಿದೆ, ಇವುಗಳು ಇನ್ನೂ ಬಗೆಹರಿದಿಲ್ಲ.

ಇಬ್ಬರು ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ದೆಹಲಿ ಪೊಲೀಸರು ಶನಿವಾರ ಉತ್ತರ ದೆಹಲಿಯಲ್ಲಿ ಛಿದ್ರಗೊಂಡ ಶವವನ್ನು ಪತ್ತೆ ಮಾಡಿದ್ದರು.

“ಇಬ್ಬರು ಶಂಕಿತರಾದ ನೌಶಾದ್ ಮತ್ತು ಜಗಜಿತ್ ಸಿಂಗ್ (ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ) ಪೊಲೀಸರಿಗೆ ತಿಳಿಸಿದ ನಂತರ ದೆಹಲಿ ಪೊಲೀಸ್ ವಿಶೇಷ ಘಟಕವು ಭಾಲ್ಸ್ವಾ ಡ್ರೈನ್‌ನಿಂದ (ಉತ್ತರ ದೆಹಲಿಯಲ್ಲಿ) ಮೂರು ತುಂಡುಗಳಾಗಿ ಕತ್ತರಿಸಿದ ಮೃತದೇಹವನ್ನು ವಶಪಡಿಸಿಕೊಂಡಿದೆ. ಮೃತರನ್ನು ಗುರುತಿಸಲಾಗುತ್ತಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರ ನಂಟು ಹೊಂದಿರುವ ಶಂಕೆಯ ಮೇಲೆ ದಿಲ್ಲಿ ಪೊಲೀಸರ ವಿಶೇಷ ದಳವು ಭಾಲ್ಸ್ವಾ ಡೈರಿ ಪ್ರದೇಶದಿಂದ ಇಬ್ಬರನ್ನು ಬಂಧಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಮುನ್ನ ಈ ಬಂಧನ ನಡೆದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Sun, 15 January 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು