ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಇಫ್ಕೋ ಪ್ಲಾಂಟ್‌ನಲ್ಲಿ ಅಮೋನಿಯಂ ಗ್ಯಾಸ್ ಸೋರಿಕೆಯಾಗಿ ಭಾರಿ ಅನಾಹುತ ಸಂಭವಿಸಿದೆ. ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೋ ಪ್ಲಾಂಟ್) ನಲ್ಲಿ ಅಮೋನಿಯಂ ಗ್ಯಾಸ್ ಸೋರಿಕೆಯಾಗಿ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಪ್ರಾಣ ಕಳೆದುಕೊಂಡಿದ್ದು 15 ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.
ಇಫ್ಕೋ ಅಧಿಕಾರಿಗಳ ಪ್ರಕಾರ, ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಪಿಎಫ್ -1 ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಈ ಅನಾಹುತಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಸ್ಥಾವರದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲಲ್ಲ. ಇಲ್ಲಿನ ಇಫ್ಕೊ ಸ್ಥಾವರದಲ್ಲಿ ಅನಿಲ ಸೋರಿಕೆ ಘಟನೆಗಳು ಕಳೆದ 5-6 ವರ್ಷಗಳಲ್ಲಿ ಹಲವಾರು ಬಾರಿ ಸಂಭವಿಸಿವೆ.
ಇದಕ್ಕೂ ಮುನ್ನ 2019 ರ ಏಪ್ರಿಲ್‌ನಲ್ಲಿ ಸ್ಥಾವರ ನಿರೋಧನ ವಿಭಾಗದಲ್ಲಿ ಅಮೋನಿಯಾ ಅನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ನಾಲ್ವರು ಕಾರ್ಮಿಕರು ಮೂರ್ಚೆ ಹೋಗಿದ್ದು ಚಿಕಿತ್ಸೆಗೆ ಒಳಗಾಗಬೇಕಾದಂತಹ ಸನ್ನಿವೇಶ ಬಂದಿತ್ತು.
LG ಪಾಲಿಮರ್ಸ್ ಗ್ಯಾಸ್ ಸೋರಿಕೆ, 10 ಸಾವು, 5 ಗ್ರಾಮಗಳ ಜನ ಸ್ಥಳಾಂತರ, ಭಯಾನಕ ಚಿತ್ರಗಳಿವೆ