Video: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟ; ವಧುವನ್ನು ತಪ್ಪಿಸಲು ಹೋಗಿ ವರನಿಗೆ ಗಾಯ

| Updated By: Lakshmi Hegde

Updated on: Aug 21, 2021 | 11:34 AM

ಕುಟುಂಬದವರು ಅದೆಷ್ಟರ ಮಟ್ಟಿಗೆ ಹೊಡೆದಾಟದಲ್ಲಿ ತಲ್ಲೀನರಾಗಿದ್ದಾರೆ ಎಂದರೆ ಅವರಿಗೆ ಕೊವಿಡ್​ 19 ನಿಯಂತ್ರಣಾ ನಿಯಮಗಳನ್ನು ತಾವು ಪಾಲಿಸುತ್ತಿಲ್ಲ ಎಂಬ ವಿಷಯವೇ ಮರೆತುಹೋಗಿದೆ.

Video: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟ; ವಧುವನ್ನು ತಪ್ಪಿಸಲು ಹೋಗಿ ವರನಿಗೆ ಗಾಯ
ಮದುವೆಯ ಸಾಂಕೇತಿಕ ಚಿತ್ರ
Follow us on

ತಮಿಳುನಾಡಿನ ಕುಂದ್ರತ್ತೂರಿನ ಮುರುಗನ್​ ದೇವಸ್ಥಾನ (Murugan Temple)ದಲ್ಲಿ ಎರಡು ಕುಟುಂಬಗಳು ಹೊಡೆದಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಯಾವ ಕುಟುಂಬದವರು ಮೊದಲು ಇಲ್ಲಿ ಮದುವೆ ಕಾರ್ಯ ನಡೆಸಬೇಕು ಎಂಬ ವಿಚಾರಕ್ಕೆ ವಾಗ್ವಾದ ಶುರುವಾಗಿ, ನಂತರ ಅದು ಮೈಕೈ ಮುಟ್ಟಿ, ಹೊಡೆದಾಡುವ ಹಂತಕ್ಕೆ ತಲುಪಿತ್ತು ಎಂದು ವರದಿಯಾಗಿದೆ. ವೈರಲ್​ ಆದ ವಿಡಿಯೋ ನೋಡಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲಿ ಒಬ್ಬರೂ ಮಾಸ್ಕ್ ಕೂಡ ಹಾಕದೆ, ನೂಕು-ನುಗ್ಗಲು ಮಾಡಿಕೊಂಡಿದ್ದನ್ನು ಕಾಣಬಹುದು.

ಮುರುಗನ್​ ದೇವಸ್ಥಾನದಲ್ಲಿ ಮದುವೆ ಮಾಡಲು ಎರಡು ಬೇರೆಬೇರೆ ಕುಟುಂಬದವರು ಆಗಮಿಸಿದ್ದರು. ಆದರೆ ಒಂದು ಬಾರಿಗೆ ಇಲ್ಲಿ ಒಂದು ಕುಟುಂಬ ಮಾತ್ರ ಮದುವೆ ಮಾಡಬಹುದು. ಆದರೆ ಈ ಎರಡೂ ಕುಟುಂಬಗಳು ತಾವು ಮೊದಲು-ತಾವು ಮೊದಲು ಎಂದು ಕೂಗಾಡಿಕೊಂಡಿದ್ದಾರೆ. ಅದರ ಒಂದು ಕುಟುಂಬಕ್ಕೆ ಸೇರಿದ ವಧುವನ್ನು ಹಿಡಿದು ಎಳೆದಾಡಲಾಗಿದೆ..ಅದನ್ನು ನೋಡಲಾಗದೆ ಇನ್ನೊಂದು ಕುಟುಂಬದ ವರ ಹೋಗಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆಗ ಆತನಿಗೂ ಏಟು ಬಿದ್ದಿದೆ.

ಕುಟುಂಬದವರು ಅದೆಷ್ಟರ ಮಟ್ಟಿಗೆ ಹೊಡೆದಾಟದಲ್ಲಿ ತಲ್ಲೀನರಾಗಿದ್ದಾರೆ ಎಂದರೆ ಅವರಿಗೆ ಕೊವಿಡ್​ 19 ನಿಯಂತ್ರಣಾ ನಿಯಮಗಳನ್ನು ತಾವು ಪಾಲಿಸುತ್ತಿಲ್ಲ ಎಂಬ ವಿಷಯವೇ ಮರೆತುಹೋಗಿದೆ. 21 ಸೆಕೆಂಡ್​ಗಳ ವಿಡಿಯೋಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ, ವಿವಿಧ ರೂಪದ ಕಾಮೆಂಟ್​​ಗಳನ್ನು ನೆಟ್ಟಿಗರು ಬರೆದಿದ್ದಾರೆ. ಇಂಥ ಕಾರ್ಯಕ್ರಮಗಳೇ ಕೊರೊನಾ ಸೂಪರ್​ ಸ್ಪ್ರೆಡರ್​ಗಳಾಗಿ ಬದಲಾಗುತ್ತವೆ. ಸರ್ಕಾರ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಕಾಮೆಂಟ್​ ಬರೆದಿದ್ದಾರೆ. ಈ ತಿಂಗಳಲ್ಲಿ ಇರುವ ಕೊನೆಯ ಒಳ್ಳೆಯ ಮುಹೂರ್ತ ಆಗಿದ್ದರಿಂದ ಎರಡೂ ಕುಟುಂಬಗಳೂ ಪರಸ್ಪರ ಕಿತ್ತಾಡಿಕೊಂಡಿವೆ. ಮುಹೂರ್ತ ತಪ್ಪಿದರೆ ಮತ್ತೆ ಮದುವೆ ವಿಳಂಬವಾಗುತ್ತದೆ ಎಂಬ ಆತಂಕದಲ್ಲಿ ದೈಹಿಕ ಹಿಂಸಾಚಾರ ನಡೆಸಿಕೊಂಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಜೈಲಿನಿಂದ ಬಿಡುಗಡೆಯಾಗುವ ವಿನಯ್ ಕುಲಕರ್ಣಿ ಸ್ವಾಗತಕ್ಕೆ ರಾಖಿ ಹಿಡಿದು ನಿಂತಿರುವ ಲಕ್ಷ್ಮೀ ಹೆಬ್ಬಾಳ್ಕರ್

Vaccine for Children: ಕೋವಿಡ್​ 3ನೇ ಅಲೆ ಭೀತಿ ಮಧ್ಯೆ ಮಕ್ಕಳು ಮರಳಿ ಶಾಲೆಗೆ; ಮಕ್ಕಳಿಗೆ ತಕ್ಷಣಕ್ಕೆ ಬೇಕಿದೆ ಕೊರೊನಾ ವ್ಯಾಕ್ಸಿನ್