Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಿಂದ ಬಿಡುಗಡೆಯಾಗುವ ವಿನಯ್ ಕುಲಕರ್ಣಿ ಸ್ವಾಗತಕ್ಕೆ ರಾಖಿ ಹಿಡಿದು ನಿಂತಿರುವ ಲಕ್ಷ್ಮೀ ಹೆಬ್ಬಾಳ್ಕರ್

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಅಣ್ಣ ಬಿಡುಗಡೆಯಾಗುತ್ತಿದ್ದಾರೆ. ಅಣ್ಣನನ್ನು ಭೇಟಿಯಾಗಲು ಬಂದಿರುವೆ. ಒಬ್ಬ ತಂಗಿಯಾಗಿ ಮಾನಸಿಕ ಧೈರ್ಯ ತುಂಬಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ಜೈಲಿನಿಂದ ಬಿಡುಗಡೆಯಾಗುವ ವಿನಯ್ ಕುಲಕರ್ಣಿ ಸ್ವಾಗತಕ್ಕೆ ರಾಖಿ ಹಿಡಿದು ನಿಂತಿರುವ ಲಕ್ಷ್ಮೀ ಹೆಬ್ಬಾಳ್ಕರ್
ವಿನಯ್ ಕುಲಕರ್ಣಿ ಸ್ವಾಗತಕ್ಕೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳ್ಕರ್
Follow us
TV9 Web
| Updated By: sandhya thejappa

Updated on:Aug 21, 2021 | 11:08 AM

ಬೆಳಗಾವಿ: ಇಂದು (ಆಗಸ್ಟ್ 21) 11 ಗಂಟೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಹೀಗಾಗಿ ವಿನಯ್​ಗೆ ಸ್ವಾಗತ ಕೋರಲು ಹಿಂಡಲಗಾ ಜೈಲಿನ ಬಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಆಗಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಅಣ್ಣ ಬಿಡುಗಡೆಯಾಗುತ್ತಿದ್ದಾರೆ. ಅಣ್ಣನನ್ನು ಭೇಟಿಯಾಗಲು ಬಂದಿರುವೆ. ಒಬ್ಬ ತಂಗಿಯಾಗಿ ಮಾನಸಿಕ ಧೈರ್ಯ ತುಂಬಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ. ರಕ್ಷಾಬಂಧನ ಹಿನ್ನೆಲೆ ವಿನಯ್ ಕುಲಕರ್ಣಿಗೆ ರಾಖಿ ಕಟ್ಟಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಖಿ ತೆಗೆದುಕೊಂಡು ಬಂದಿದ್ದಾರೆ. ಸಹೋದರನಿಗೆ ರಾಖಿ ಕಟ್ಟಿ ಸ್ವಾಗತಿಸಿ ಕೊಳ್ಳುತ್ತೇನೆ ಎಂದು ತಿಳಿಸಿದರು ಲಕ್ಷ್ಮೀ ಹೆಬ್ಬಾಳ್ಕರ್, ಕೈಯಲ್ಲಿ ರಾಖಿ ಹಿಡಿದುಕೊಂಡು ಜೈಲು ಮುಂಭಾಗದಲ್ಲಿ ನಿಂತಿದ್ದಾರೆ.

ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ನಿಂದ ಷರತ್ತುಬದ್ಧ ಜಾಮೀನುಸ ಸಿಕ್ಕಿದ್ದು, ಆಗಸ್ಟ್ 19ರಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ನಿಂದ ಬೇಲ್ ಸಿಕ್ಕಿದೆ. ಜಾಮೀನಿನ ಮೇಲೆ ವಿನಯ್ ಇಂದು ಬಿಡುಗಡೆಯಾಗುತ್ತಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ವಿನಯ್ ಮಾಲಾರ್ಪಣೆ ಮಾಡುತ್ತಾರೆ. ನಂತರ ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀಗಳ ಭೇಟಿಯಾಗಿ ಆಶೀರ್ವಾದ ಪಡೆಯುವ ಸಾಧ್ಯತೆಯಿದೆ. ರುದ್ರಾಕ್ಷಿಮಠಕ್ಕೆ ಭೇಟಿ ಬಳಿಕ ಮಧ್ಯಾಹ್ನ ಬೆಂಗಳೂರಿಗೆ ತೆರಳಬಹುದು. ಸಾಂಬ್ರಾ ಏರ್‌ಪೋರ್ಟ್‌ಗೆ ತೆರಳಿ ಮಧ್ಯಾಹ್ನ 3.40ರ ಫ್ಲೈಟ್‌ನಲ್ಲಿ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದೆ.

ಜೈಲು ತಲುಪಿದ ಜಾಮೀನು ಆದೇಶದ ಪ್ರತಿ ಆದೇಶದ ಪ್ರತಿ ತೆಗೆದುಕೊಂಡು ಪೋಸ್ಟ್ ಮ್ಯಾನ್ ಹಿಂಡಲಗಾ ಕಾರಾಗೃಹಕ್ಕೆ ಆಗಮಿಸಿದ್ದಾರೆ. ಸ್ಪೀಡ್ ಪೋಸ್ಟ್ ಮೂಲಕ ವಿನಯ್ ಜಾಮೀನು ಆದೇಶದ ಪ್ರತಿ ಬರುತ್ತೆ ಅಂತ ಜೈಲು ಅಧಿಕಾರಿ ತಿಳಿಸಿದ್ದರು. ಅದರಂತೆ ಪೋಸ್ಟ್ ಮ್ಯಾನ್ ಆದೇಶದ ಪ್ರತಿಯನ್ನು ತೆಗೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ

ಯೋಗೀಶ್ ಗೌಡ ಹತ್ಯೆ ಪ್ರಕರಣ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದು ಅನುಮಾನ

ಜಾಮೀನು ಆದೇಶಕ್ಕೆ ಕಾಯುತ್ತಿರುವ ಹಿಂಡಲಗ ಜೈಲು ಸಿಬ್ಬಂದಿ: ಧಾರವಾಡದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರ ಸಂಭ್ರಮಾಚರಣೆ

(Lakshmi Hebbalkar arrives at Hindalga Jail to welcome Vinay Kulkarni)

Published On - 10:53 am, Sat, 21 August 21

ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಸರ್ಕಾರದ ಗ್ರೇಟರ್ ಬೆಂಗಳೂರು ತಯಾರಿ ಗೇಲಿ ಮಾಡಿದ ಮುನಿರತ್ನ
ಸರ್ಕಾರದ ಗ್ರೇಟರ್ ಬೆಂಗಳೂರು ತಯಾರಿ ಗೇಲಿ ಮಾಡಿದ ಮುನಿರತ್ನ