Vaccine for Children: ಕೋವಿಡ್ 3ನೇ ಅಲೆ ಭೀತಿ ಮಧ್ಯೆ ಮಕ್ಕಳು ಮರಳಿ ಶಾಲೆಗೆ; ಮಕ್ಕಳಿಗೆ ತಕ್ಷಣಕ್ಕೆ ಬೇಕಿದೆ ಕೊರೊನಾ ವ್ಯಾಕ್ಸಿನ್
ವ್ಯಾಕ್ಸಿನ್ ತೆಗೆದುಕೊಳ್ಳದವರ ಮೂಲಕ ಕೊರೊನಾ ಹರಡಿರುವುದು ಅಮೆರಿಕದಂತಹ ರಾಷ್ಟ್ರಗಳ ನಿದರ್ಶನ ಎದುರಿಗೇ ಇದೆ. ಇದರ ಜೊತೆಗೆ ವೈರಸ್ ಮ್ಯುಟೆಂಟ್ ಆಗಿ ಹೊಸ ಅವತಾರದಲ್ಲಿ ವಕ್ಕರಿಸಿದರೆ ಮಾಡುವುದೇನು ಎಂಬ ಆತಂಕವಿರುವಾಗ ತಕ್ಷಣಕ್ಕೆ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸುವ ಅಭಿಯಾನ ಶುರು ಮಾಡಬೇಕು. ಏಕೆಂದ್ರೆ ದೇಶದಾದ್ಯಂತ ಶೇ. 60ರಷ್ಟು ಮಕ್ಕಳು ವ್ಯಾಕ್ಸಿನ್ಗಾಗಿ ಕಾಯುತ್ತಿದ್ದಾರೆ.
ಜೈಡಸ್ ಕ್ಯಾಡಿಲಾ ಸಂಸ್ಥೆಯು ಕೊನೆಗೂ ಮಕ್ಕಳಿಗಾಗಿ ಅಂದ್ರೆ 12 ರಿಂದ 18 ವರ್ಷದ ಮಕ್ಕಳಿಗಾಗಿ ಕೊರೊನಾ ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ ಸಫಲವಾಗಿದೆ. ಇದಕ್ಕೆ ಬೆಳಗಾವಿ ಮತ್ತು ಮೈಸೂರು ಆಸ್ಪತ್ರೆಗಳಲ್ಲಿ ಪ್ರಯೋಗಗಳು ಯಶಸ್ವಿಯಾಗಿ ನಡೆದವು ಎಂಬುದು ಗಮನಾರ್ಹ ಸಂಗತಿಯಾಗಿದೆ. ನಿನ್ನೆಯಷ್ಟೇ ಕೇಂದ್ರ ಔಷಧ ನಿಯಂತ್ರಣ ಇಲಾಖೆಯು (DCGI) ಜೈಡಸ್ ಕ್ಯಾಡಿಲಾ (Zydus Cadila) ಸಂಸ್ಥೆಯ ಕೊರೊನಾ ವ್ಯಾಕ್ಸಿನ್ ಅನ್ನು ( COVID-19 DNA vaccine) 3 ಡೋಸ್ಗಳಲ್ಲಿ ಮಕ್ಕಳಿಗೆ ನೀಡಬಹುದು ಎಂದು ಘೋಷಿಸಿದೆ. ಇದು ಮಕ್ಕಳಿಗಾಗಿ ಸಿದ್ಧಪಡಿಸಲಾದ ಮೊದಲ ಕೊರೊನಾ ವ್ಯಾಕ್ಸಿನ್ (ZyCoV-D covid vaccine). ಕೋವಿಡ್ 3ನೇ ಅಲೆಯ ಭೀತಿ ಎದುರಿಗೇ ಇರುವಾಗ ಈ ವ್ಯಾಕ್ಸಿನ್ ಬಂದಿರುವುದು ಸ್ವಾಗತಾರ್ಹ.
ಮಳೆಗಾಲ, ಚಳಿಗಾಲದಲ್ಲಿ ಕೋವಿಡ್ 3ನೇ ಅಲೆಯ ಭೀತಿ ಎದುರಾಗಿದೆ. ಈ ಮಧ್ಯೆ, ದೇಶದಲ್ಲಿ ಕರ್ನಾಟಕ ಸೇರಿದಂತೆ ಕನಿಷ್ಠ 11 ರಾಜ್ಯಗಳಲ್ಲಿ ಶಾಲೆ ಕಾಲೇಜುಗಳು ಪುನರಾರಂಭಕ್ಕೆ ಅಂಕಿತವಾಗಿವೆ. ಒಂದೂವರೆ ವರ್ಷ ರಜೆ ಬಳಿಕ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳು ಒಮ್ಮೆಗೇ ಶಾಲೆಗಳಿಗೆ ಬರತೊಡಗಿದರೆ ವೈರಸ್ಗೆ ಇದೇ ಆಶ್ರಯ ತಾಣಗಳಾಗಲಿವೆ ಎಂಬ ಆತಂಕವಿದೆ.
ಅನೇಕ ರಾಜ್ಯಗಳು ಮಕ್ಕಳಿಗಾಗಿಯೇ ವಿಶೇಷ ಕೋವಿಡ್ ಸೆಂಟರ್ಗಳನ್ನು ತೆರೆಯುವುದು ಸೇರಿದಂತೆ ಈಗಾಗಲೇ ಅನೇಕ ಮೂಲಸೌಕರ್ಯಗಳನ್ನು ಜಾಗೃತಾವಸ್ಥೆಯಲ್ಲಿಟ್ಟಿವೆ. ಇದರ ಜೊತೆಗೆ ಮಕ್ಕಳಿಗೆ ಈ ಸಂದರ್ಭದಲ್ಲಿ ಕೊರೊನಾ ವ್ಯಾಕ್ಸಿನ್ ನೀಡಿದರೆ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಸಬಹುದು ಎಂಬ ಮಾತು ಸಹಜ. ಹಾಗಾಗಿಯೆ ಈಗ ಜೈಡಸ್ ಕ್ಯಾಡಿಲಾ ಸಂಸ್ಥೆ ಕಂಡುಹಿಡಿದಿರುವ ವ್ಯಾಕ್ಸಿನ್ ಮಕ್ಕಳಿಗೆ ಶೀಘ್ರವೇ ಲಭ್ಯವಾಗುವಂತೆ ಮಾಡಬೇಕಿದೆ.
ವ್ಯಾಕ್ಸಿನ್ ತೆಗೆದುಕೊಳ್ಳದವರ ಮೂಲಕ ಕೊರೊನಾ ಹರಡಿರುವುದು ಅಮೆರಿಕದಂತಹ ರಾಷ್ಟ್ರಗಳ ನಿದರ್ಶನ ಎದುರಿಗೇ ಇದೆ. ಇದರ ಜೊತೆಗೆ ವೈರಸ್ ಮ್ಯುಟೆಂಟ್ ಆಗಿ ಹೊಸ ಅವತಾರದಲ್ಲಿ ವಕ್ಕರಿಸಿದರೆ ಮಾಡುವುದೇನು ಎಂಬ ಆತಂಕವಿರುವಾಗ ತಕ್ಷಣಕ್ಕೆ ಮಕ್ಕಳಿಗೆ ವ್ಯಾಕ್ಸಿನ್ ಹಾಕಿಸುವ ಅಭಿಯಾನ ಶುರು ಮಾಡಬೇಕು. ಏಕೆಂದ್ರೆ ದೇಶದಾದ್ಯಂತ ಶೇ. 60ರಷ್ಟು ಮಕ್ಕಳು ವ್ಯಾಕ್ಸಿನ್ಗಾಗಿ ಕಾಯುತ್ತಿದ್ದಾರೆ.
ಕೊರೊನಾ 3ನೇ ಅಲೆ; ಮಕ್ಕಳಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
(children to retun to schools amid Covid Third Wave Threat Zydus Cadila COVID-19 DNA vaccine heplful)
Published On - 10:45 am, Sat, 21 August 21