ಇಬ್ಬರು ಯುವತಿಯರ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಿಕ್ಕಾಪಟೆ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ವಿಡಿಯೋ ನೋಡಿ ಆಡಿಕೊಂಡು ನಗುತ್ತಿದ್ದಾರೆ. ಪ್ಯಾಂಟ್ ಶರ್ಟ್ ಹಾಕಿಕೊಂಡ ಹುಡುಗಿಯರು ರಸ್ತೆ ಮಧ್ಯೆ ಪರಸ್ಪರ ಜುಟ್ಟು ಹಿಡಿದುಕೊಂಡು ಎಳೆದಾಡುತ್ತ ಹೊಡೆದಾಡಿದ್ದಾರೆ. ಈ ವಿಡಿಯೋ ಎಲ್ಲಿಯದು ಎಂಬುದು ಗೊತ್ತಾಗಿಲ್ಲ. ಆದರೆ ಇವರಿಬ್ಬರು ಇಷ್ಟೊಂದು ಕ್ರೂರವಾಗಿ, ಕೆಟ್ಟದಾಗಿ ಹೊಡೆದಾಡಿಕೊಳ್ಳಲು ಕಾರಣವೇನು? ಎಲ್ಲಿ ನಡೆದಿದ್ದು ಎಂಬ ಕುತೂಹಲವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.
ಹೊಡೆದಾಟದಲ್ಲಿ ಅದೆಷ್ಟರ ಮಟ್ಟಿಗೆ ಮೈಮರೆತಿದ್ದರು ಎಂದರೆ, ಇವರಿಬ್ಬರೂ ಪರಸ್ಪರ ಎಳೆದಾಡುತ್ತ ಹೋಗಿ ಕೊಚ್ಚೆ ಗುಂಡಿಗೆ ಬಿದ್ದಿದ್ದಾರೆ. ಅವರ ಮೈಯೆಲ್ಲ ಕಪ್ಪಾದ, ಹೊಲಸು ನೀರಿನಿಂದ ಗಲೀಜಾದರೂ ಸಹ ಎಚ್ಚರವಿರಲಿಲ್ಲ. ಹೊಡೆದಾಟವನ್ನು ನೋಡಿ ಕೆಲವರು ಬಿಡಿಸಲು ಹೋದರೂ ಗುದ್ದಾಟವನ್ನು ನಿಲ್ಲಿಸಲಿಲ್ಲ. ಕಪ್ಪಾದ ನೀರು, ಮುಖಕ್ಕೆಲ್ಲ ಎರಚಿದ್ದರೂ ಅದ್ಯಾವುದೂ ಲೆಕ್ಕಕ್ಕೆ ಬರಲಿಲ್ಲ. ಕೈಯಿ, ಮುಖವನ್ನೆಲ್ಲ ಗಲೀಜು ಮಾಡಿಕೊಂಡೇ ಹೊಡೆದಾಟ ನಡೆಸಿದ್ದಾರೆ.
ಇತ್ತೀಚೆಗೆ ಮಧ್ಯಪ್ರದೇಶದ ಪನ್ನಾದ ಮಲಾಘನ್ ಗ್ರಾಮದಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಕುಡಿಯುವ ನೀರನ್ನು ಹಿಡಿಯಲು ನಿಂತಿದ್ದ ಮಹಿಳೆಯರು ಸಿಕ್ಕಾಪಟೆ ಹೊಡೆದಾಡಿಕಕೊಂಡಿದ್ದರು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗಿತ್ತು.
ಇದನ್ನೂ ಓದಿ: ಸಾರಿಗೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್ಗೆ 10 ಲಕ್ಷ ರೂ. ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಿದ ವಿದ್ಯಾರ್ಥಿನಿ
ಕೊರೊನಾ ನಿಯಮಾವಳಿ ಪಾಲಿಸದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ದೂರು ದಾಖಲು
(Two Girls Fight Violently in Middle of The Road)