Madhya Pradesh: ಕಾಯಿಲೆ ಗುಣವಾಗಲೆಂದು ಕಾದ ಕಬ್ಬಿಣದಿಂದ 20 ಬಾರಿ ಚುಚ್ಚಿ ಹಸುಗೂಸು ಸಾವು
ಕಾಯಿಲೆಯನ್ನು ಗುಣಪಡಿಸಲೆಂದು ಕಾದ ಕಬ್ಬಿಣದಿಂದ 20 ಬಾರಿ ಚುಚ್ಚಿದ ಪರಿಣಾಮ 3 ತಿಂಗಳ ಹಸುಗೂಸು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕಾಯಿಲೆಯನ್ನು ಗುಣಪಡಿಸಲೆಂದು ಕಾದ ಕಬ್ಬಿಣದಿಂದ 20 ಬಾರಿ ಚುಚ್ಚಿದ ಪರಿಣಾಮ 3 ತಿಂಗಳ ಹಸುಗೂಸು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಗುವನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಲಾಯಿತು, ಬಳಿಕ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿತ್ತು, ಆದರೂ ಮಗು ಕೊನೆಯುಸಿರೆಳೆಯಿತು. ಮಧ್ಯಪ್ರದೇಶದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಈ ಹಿಂದೆ ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹಸುಳೆಗೆ ಚಿಕಿತ್ಸೆಯ ರೂಪದಲ್ಲಿ ಕಾದ ಕಬ್ಬಿಣದ ರಾಡ್ ನಿಂದ 51 ಬಾರಿ ಹೊಟ್ಟೆಗೆ ಚುಚ್ಚಿದ್ದ ಪರಿಣಾಮ ತೀವ್ರ ಉಸಿರಾಟದ ತೊಂದರೆಗೆ ಸಿಲುಕಿ 15 ದಿನಗಳ ಬಳಿಕ ಆಸ್ಪತ್ರೆಯಲ್ಲಿ ದುರಂತ ಅಂತ್ಯ ಕಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಾದೋಲ್ ನಲ್ಲಿ ನಡೆದಿತ್ತು.
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಹೀಗೊಂದು ಅಮಾನವೀಯ ಘಟನೆ ನಡೆದಿದೆ. ಅವರು ಚಿಕಿತ್ಸೆಯ ಹೆಸರಲ್ಲಿ ಬಿಸಿಬಿಸಿಯಾದ ಕಬ್ಬಿಣದ ರಾಡ್ನಿಂದ ಮಗುವಿನ ಹೊಟ್ಟೆಯ ಮೇಲೆ 51 ಬಾರಿ ಚುಚ್ಚಿದ್ದರು. ಇದರಿಂದಾಗಿ ಶಿಶುವಿನ ಆರೋಗ್ಯ ಇನ್ನಷ್ಟು ಹದಗೆಟ್ಟು, ಮೃತಪಟ್ಟಿದ್ದಾಗಿ ವರದಿಯಾಗಿದೆ.
ಮತ್ತಷ್ಟು ಓದಿ: Metro Pillar collapsed ಮೆಟ್ರೋ ಕಂಬಿ ಕುಸಿದು ತಾಯಿ, ಮಗು ಸಾವು ಪ್ರಕರಣ: ಐವರ ವಿರುದ್ಧ ಕೇಸ್ ಬುಕ್
ಬುಡಕಟ್ಟು ಪ್ರಾಬಲ್ಯ ಹೊಂದಿರುವ ಶಾದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಗುವಿನ ಶವವನ್ನು ಹೂತಿದ್ದು, ಇದೀಗ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರತೆಗೆಯಲಾಗಿದೆ ಎಂದು ವರದಿ ವಿವರಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕುರುಡು ಮೂಢನಂಬಿಕೆಯ ಕರಾಳತೆ ಬೆಳಕಿಗೆ ಬಂದಿರುವುದಾಗಿ ತಿಳಿದು ಬಂದಿದೆ. ಮಗುವಿಗೆ ನ್ಯೂಮೋನಿಯಾಗೆ ಚಿಕಿತ್ಸೆ ನೀಡದೆ, ಕಾದ ಕಬ್ಬಿಣದ ಸರಳನ್ನು ಹೊಟ್ಟೆಗೆ ಚುಚ್ಚುವ ಮೂಲಕ ಮಗುವಿನ ಸ್ಥಿತಿ ಚಿಂತಾಜನಕವಾಗಲು ಕಾರಣವಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ