ಬೃಹತ್​ ಭ್ರಷ್ಟಾಚಾರ: ಇಬ್ಬರು IPS ಅಧಿಕಾರಿಗಳ ತಲೆದಂಡ, ಎಲ್ಲಿ?

| Updated By: ಸಾಧು ಶ್ರೀನಾಥ್​

Updated on: Aug 25, 2020 | 5:03 PM

ಲಕ್ನೋ: ಬೃಹತ್​ ಭ್ರಷ್ಟಾಚಾರ ನಡೆಸಿರೋ ಆರೋಪದಲ್ಲಿ ಉತ್ತರ ಪ್ರದೇಶ ಸರ್ಕಾರವು ಇಬ್ಬರು IPS ಅಧಿಕಾರಿಗಳನ್ನು ಅಮಾನತು ಮಾಡಿದೆ. DIG ದಿನೇಶ್​ ಚಂದ್ರ ದುಬೇ ಮತ್ತು DIG ಅರವಿಂದ್​ ಸೇನ್ ಅಮಾನತುಗೊಂಡಿರುವ IPS ಅಧಿಕಾರಿಗಳು. ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡವು ನೀಡಿರುವ ವರದಿಯ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ DIG ದಿನೇಶ್​ ಚಂದ್ರ ದುಬೇ ತಮ್ಮ ಪ್ರಭಾವ ಬಳಸಿ ಸರ್ಕಾರಿ ಇಲಾಖೆಗಳಲ್ಲಿ ಕಾಮಗಾರಿಯ ಟೆಂಡರ್​ಗಳನ್ನು ಕೊಡಿಸುವ ಆಶ್ವಾಸನೆ […]

ಬೃಹತ್​ ಭ್ರಷ್ಟಾಚಾರ: ಇಬ್ಬರು IPS ಅಧಿಕಾರಿಗಳ ತಲೆದಂಡ, ಎಲ್ಲಿ?
Follow us on

ಲಕ್ನೋ: ಬೃಹತ್​ ಭ್ರಷ್ಟಾಚಾರ ನಡೆಸಿರೋ ಆರೋಪದಲ್ಲಿ ಉತ್ತರ ಪ್ರದೇಶ ಸರ್ಕಾರವು ಇಬ್ಬರು IPS ಅಧಿಕಾರಿಗಳನ್ನು ಅಮಾನತು ಮಾಡಿದೆ. DIG ದಿನೇಶ್​ ಚಂದ್ರ ದುಬೇ ಮತ್ತು DIG ಅರವಿಂದ್​ ಸೇನ್ ಅಮಾನತುಗೊಂಡಿರುವ IPS ಅಧಿಕಾರಿಗಳು. ಉತ್ತರ ಪ್ರದೇಶ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡವು ನೀಡಿರುವ ವರದಿಯ ಬೆನ್ನಲ್ಲೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ DIG ದಿನೇಶ್​ ಚಂದ್ರ ದುಬೇ ತಮ್ಮ ಪ್ರಭಾವ ಬಳಸಿ ಸರ್ಕಾರಿ ಇಲಾಖೆಗಳಲ್ಲಿ ಕಾಮಗಾರಿಯ ಟೆಂಡರ್​ಗಳನ್ನು ಕೊಡಿಸುವ ಆಶ್ವಾಸನೆ ನೀಡಿದ್ದರಂತೆ. ಆದರೆ, ಇವರು ಹಣ ಪಡೆದ ಯಾವುದೇ ವ್ಯಕ್ತಿಗೂ ಗುತ್ತಿಗೆ ಸಿಗಲೇ ಇಲ್ಲ ಎಂಬ ಆರೋಪ ಕೇಳಿಬಂದಿದೆ.

ಇತ್ತ DIG ಅರವಿಂದ್​ ಸೇನ್ ರಾಜ್ಯ ಸರ್ಕಾರದ ಪಶು ಸಂಗೋಪನೆ ಇಲಾಖೆಯಲ್ಲಿ ತಮ್ಮ ಪ್ರಭಾವ ಬಳಸಿ ಉದ್ಯಮಿಯೊಬ್ಬರಿಗೆ ಟೆಂಡರ್​ ಕೊಡಿಸುವುದಾಗಿ ಮೋಸ ಮಾಡಿದ್ದ ತಂಡವೊಂದರ ಜೊತೆ ಶಾಮೀಲಾಗಿದ್ದರಂತೆ.

ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿ ತನಿಖೆ ನಡೆಸಲಾಗಿತ್ತು. ಇದೀಗ, ತನಿಖಾ ವರದಿ ಹೊರಬಿದ್ದಿದ್ದು ಅಧಿಕಾರಿಗಳಿಬ್ಬರೂ ಭ್ರಷ್ಟಾಚಾರ ಮತ್ತು ದುರ್ನಡತೆಯ ಆರೋಪದಡಿ ಸಸ್ಪೆಂಡ್​ ಆಗಿದ್ದಾರೆ.

Published On - 4:59 pm, Tue, 25 August 20