ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಲೋಕೋ ಪೈಲಟ್‌ಗಳು ಗಾಯಗೊಂಡಿರುವ ಘಟನೆ ಪಂಜಾಬ್‌ನಲ್ಲಿ, ಸಿರ್ಹಿಂದ್‌ನ ಮಾಧೋಪುರ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ಗಾಯಗೊಂಡ ಪೈಲಟ್‌ಗಳನ್ನು ಶ್ರೀ ಫತೇಘರ್ ಸಾಹಿಬ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅವಘಡದಲ್ಲಿ ಗೂಡ್ಸ್ ರೈಲಿನ ಇಂಜಿನ್ ಪಲ್ಟಿಯಾಗಿದ್ದು, ಪ್ಯಾಸೆಂಜರ್ ರೈಲು ಕೂಡ ಅದರಲ್ಲಿ ಸಿಲುಕಿಕೊಂಡಿದೆ.
ಅಪಘಾತದಲ್ಲಿ ಇಬ್ಬರು ಲೋಕೋ ಪೈಲಟ್‌ಗಳು ಗಾಯಗೊಂಡಿದ್ದಾರೆ. ಅವರನ್ನು ಉತ್ತರಪ್ರದೇಶದ ಸಹರಾನ್‌ಪುರದ ವಿಕಾಸ್ ಕುಮಾರ್ (37) ಮತ್ತು ಹಿಮಾಂಶು ಕುಮಾರ್ (31) ಎಂದು ಗುರುತಿಸಲಾಗಿದೆ. ಅವರನ್ನು 108 ಆಂಬ್ಯುಲೆನ್ಸ್ ಸಹಾಯದಿಂದ ಸಿವಿಲ್ ಆಸ್ಪತ್ರೆಗೆ ಫತೇಘರ್ ಸಾಹಿಬ್‌ಗೆ ದಾಖಲಿಸಲಾಯಿತು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅರಿತ ವೈದ್ಯರು ಅವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕಳುಹಿಸಿದ್ದಾರೆ.
ವಿಕಾಸ್ ಕುಮಾರ್ ಅವರ ತಲೆಗೆ ಗಾಯವಾಗಿದೆ ಎಂದು ಸಿವಿಲ್ ಆಸ್ಪತ್ರೆ ಫತೇಘರ್ ಸಾಹಿಬ್‌ನಲ್ಲಿರುವ ವೈದ್ಯೆ ಈವೆನ್‌ಪ್ರೀತ್ ಕೌರ್ ಹೇಳಿದ್ದಾರೆ. ಹಿಮಾಂಶು ಅವರ ಬೆನ್ನಿಗೆ ಗಾಯವಾಗಿದ್ದು, ಸ್ಥಿತಿ ಗಂಭೀರವಾಗಿದೆ.
#WATCH | Punjab: Two goods trains collided near Madhopur in Sirhind earlier this morning, injuring two loco pilots who have been admitted to Sri Fatehgarh Sahib Civil Hospital. pic.twitter.com/0bLi33hLtS
— ANI (@ANI) June 2, 2024
ಕಲ್ಲಿದ್ದಲು ತುಂಬಿದ ಎರಡು ವಾಹನಗಳು ಇಲ್ಲಿ ನಿಂತಿದ್ದವು. ಒಂದು ಗೂಡ್ಸ್ ರೈಲಿನ ಎಂಜಿನ್ ಸಡಿಲಗೊಂಡು ಇನ್ನೊಂದಕ್ಕೆ ಡಿಕ್ಕಿ ಹೊಡೆದು ನಂತರ ಎಂಜಿನ್ ಪಲ್ಟಿಯಾಗಿ ಅಂಬಾಲಾದಿಂದ ಜಮ್ಮು ತಾವಿಗೆ ಹೋಗುತ್ತಿದ್ದ ಬೇಸಿಗೆ ವಿಶೇಷ ಪ್ಯಾಸೆಂಜರ್ ರೈಲು ಸಿಲುಕಿಕೊಂಡಿತ್ತು.
ಮತ್ತಷ್ಟು ಓದಿ: Video: ಬಾಯ್‌ಫ್ರೆಂಡ್ ಜತೆ ಜಗಳ, ಪ್ರಿಯಕರನ್ನು ಹೆದರಿಸಲು ರೈಲ್ವೆ ಟ್ರ್ಯಾಕ್ ಮೇಲೆ ಜಿಗಿದು ಪ್ರಾಣ ಕಳೆದುಕೊಂಡ ಮಹಿಳೆ
ಅಂಬಾಲಾದಿಂದ ಲುಧಿಯಾನವರೆಗಿನ ಮಾರ್ಗವು ಸಂಪೂರ್ಣ ಸ್ಥಗಿತಗೊಂಡಿದೆ. ಅಂಬಾಲಾ ವಿಭಾಗದ ಡಿಆರ್‌ಎಂ ಸೇರಿದಂತೆ ರೈಲ್ವೆ, ಜಿಆರ್‌ಪಿ ಮತ್ತು ಆರ್‌ಪಿಎಫ್‌ನ ಹಿರಿಯ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ